ಪೌರಕಾರ್ಮಿಕರ ಅಭಿವೃದ್ಧಿಗೆ ಶ್ರಮಿಸಲು ನಮ್ಮ ಸರ್ಕಾರ ಬದ್ಧವಾಗಿದೆ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ
ನಿಮ್ಮನ್ನೂ ಪೌರಸ್ನೇಹಿತರು ಅಂತಹ ಕರೆಯುವೆ-
ಬಡವರ ಕಣ್ಣಪ್ಪ
ವಿಜಯ ನಗರ ಜಿಲ್ಲೆಯ ಸಿದ್ಧಿಪ್ರಿಯಾ ಕಲ್ಯಾಣ ಮಂಟಪದಲ್ಲಿ ದಿ; 30-09-24 ರಂದು ಹಮ್ಮಿಕೊಂಡಿರುವ ಜಿಲ್ಲಾ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರುವ ಕೂಡ್ಲಿಗಿ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಾನು ನಿಮ್ಮನ್ನೂ ಯಾವತ್ತಿಗೂ ಪೌರ ಕಾರ್ಮಿಕರು ಅಂತಹ ಕರೆಯಲು ಇಷ್ಟ ಪಡುವುದಿಲ್ಲ. ನಮ್ಮಲ್ಲಿ ನಿಮ್ಮನ್ನು ಪೌರ ಸ್ನೇಹಿತರು ಅಂತಹ ಕರೆಯಲು ಇಷ್ಟ ಪಡುವೆ. ಪ್ರತಿ ದಿನ ಬದುಕಿನಲ್ಲಿ ಸೂರ್ಯ ಹುಟ್ಟುವ ಮುಂಚೆಯೇ ಪಟ್ಟಣ- ನಗರಗಳನ್ನು ಸ್ವಚ್ಚತೆಗೆ ಒತ್ತು ಕೊಡುವ ನಿಟ್ಟಿನಲ್ಲಿ ನಿಮ್ಮ ಶ್ರಮ ಮತ್ತು ದುಡಿಮೆ ಇದೆ. ಈ ದೇಶ ಸುಂದರವಾಗಿ ಕಾಣಲು ಮತ್ತು ನಿತ್ಯ ಸ್ವಚ್ಚವಾಗಿ ಇಡಲು ತಮ್ಮ ತಮ್ಮ ಕುಟುಂಬವನ್ನು ಲೆಕ್ಕಿಸದೇ ಸಮಾಜಕ್ಕಾಗಿ ತ್ಯಾಗ ಮಾಡಿರುವುದನ್ನು ನೆನಪಿಸಿಕೊಳ್ಳುತ್ತೇನೆ ಎಂದರು.
ಪೌರಕಾರ್ಮಿಕರು ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳಿಂದ ಒಂಚಿತವಾಗಿರುವುದು ನಮ್ಮ ಗಮನಕ್ಕೆ ಇದೆ. ಹೀಗಾಗಿ ನಿಮ್ಮ ಸರ್ವ ರೀತಿಯ ಅಭಿವೃದ್ಧಿಗೆ ಕೈ ಜೋಡಿಸಲು ನಮ್ಮ ಕರ್ನಾಟಕ ಘನ ಸರ್ಕಾರ ಬದ್ಧವಾಗಿದೆ. ಒಟ್ಟಿನಲ್ಲಿ ಪೌರಕಾರ್ಮಿಕರಿಗೆ ಒಳಿತಾಗಲಿ ಎಂದೂ ಶುಭಾಶಯಗಳು ತಿಳಿಸುತ್ತೇನೆ ಎಂದರು. ಪೌರಕಾರ್ಮಿಕರ ರಾಜ್ಯಾಧ್ಯಕ್ಷರಾದ ಕೆ. ಪ್ರಭಾಕರ್ ಅವರು ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರಭಾವ ಮತ್ತು ಪ್ರೇರಣೆಯಿಂದ ಒಬ್ಬ ಒಳ್ಳೆಯ ಸಂಘಟನೆಯ ಹಿನ್ನೆಲೆಯಲ್ಲಿ ಬಂದಿದ್ದು, ಅವರು ಪೌರಕಾರ್ಮಿಕರ ಹಕ್ಕುಗಳ ಪರ ಶ್ರಮಿಸುತ್ತಿರುವುದು ನನಗೆ ಖುಷಿ ತಂದಿದೆ ಎಂಬುದಾಗಿ ಹೇಳುತ್ತಾ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಜಯ ನಗರ ಜಿಲ್ಲಾಧಿಕಾರಿಗಳಾದ ಎಂ. ಎಸ್. ದಿವಾಕರ್ ಅವರು, ಹೊಸಪೇಟೆ ನಗರದ ಪೌರಾಯುಕ್ತರಾದ ಸಿ. ಚಂದ್ರಪ್ಪ, ರಾಜ್ಯ ಪೌರಕಾರ್ಮಿಕರ ರಾಜ್ಯಾಧ್ಯಕ್ಷರಾದ ಕೆ. ಪ್ರಭಾಕರ್, ರಾಜ್ಯ ಪೌರಕಾರ್ಮಿಕರ ಜಿಲ್ಲಾಧ್ಯಕ್ಷರಾದ ಓಬಣ್ಣ, ವಿಜಯ ನಗರ ಜಿಲ್ಲೆಯ ನರಗಸಭೆ, ಪುರಸಭೆ, ಮತ್ತು ಪಟ್ಟಣ ಪಂ. ಅಧಿಕಾರಿಗಳು, ಅಧ್ಯಕ್ಷರು , ಉಪಾಧ್ಯಕ್ಷರು, ಸರ್ವ ಸದಸ್ಯರು, ಕೂಡ್ಲಿಗಿ ಪಟ್ಟಣ ಪಂ. ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪನಾಯಕ, ಉಪ ಅಧ್ಯಕ್ಷರಾದ ಲೀಲಾವತಿ ಕೆ. ಪ್ರಭಾಕರ್, ಸ್ಥಾಯಿ ಸಮಿತಿಯ ಸದಸ್ಯರಾದ ಶೂಕರ್ ಬಾಯಿ, ಪ. ಪಂ. ಸರ್ವ ಸದಸ್ಯರು, ಪೌರಕಾರ್ಮಿಕರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030