ಗಡಿಗ್ರಾಮಗಳ ಅಸಮಾನತೆ ತೊಲಗಿಸಲು ಸುಂಕದಕಲ್ಲು ಅಭಿವೃದ್ಧಿಗೆ ಶ್ರಮಿಸುವೆ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ…!!!

ಗಡಿಗ್ರಾಮಗಳ ಅಸಮಾನತೆ ತೊಲಗಿಸಲು ಸುಂಕದಕಲ್ಲು ಅಭಿವೃದ್ಧಿಗೆ ಶ್ರಮಿಸುವೆ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ

ಕೂಡ್ಲಿಗಿ ಕ್ಷೇತ್ರದ ಸುಂಕದಕಲ್ಲು ಗ್ರಾಮದಲ್ಲಿ *2023 -24 ನೇ ಸಾಲಿನ ಪ. ಪಂ( TSP) ಮತ್ತು ಪ. ಜಾ(SCP) ಯೋಜನೆ ಅಡಿ ( 50.00 ಲಕ್ಷಗಳು) ಸಿ. ಸಿ. ರಸ್ತೆಯ ಭೂಮಿಪೂಜೆಯನ್ನು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 19-09-2024 ರಂದು ನೆರವೇರಿಸಿದ ಬಳಿಕ ಮಾತನಾಡಿದರು.
ಸುಂಕದ ಕಲ್ಲು ಸರ್ವ ಜನಾಂಗದ ಶಾಂತಿಯ ತೋಟ. ಈ ಸುಂದರ ಸಮಾಜಗಳನ್ನು ನೋಡಿ ನನಗೆ ಹೆಮ್ಮೆ ಎನಿಸುತ್ತದೆ. ಆದರೆ ಇಡೀ ಗ್ರಾಮವನ್ನು ಸುತ್ತಿದಾಗ ಅಭಿವೃದ್ಧಿಯಿಂದ ವಂಚಿತವಾಗಿರುವುದನ್ನು ಮುಖಂಡರೊಂದಿಗೆ ಚರ್ಚಿಸಿ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಲು ನಿರ್ಧರಿಸಿದೆ. ಊರಿನ ರಸ್ತೆಯ ಬದಿ ಒಬ್ಬ ಹೆಣ್ಣು ಮಗಳು ರಾತ್ರಿ ಸಮಯದಲ್ಲಿ ನೂರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿನ ಮಕ್ಕಳಿಗೆ ಅಕ್ಷರ ಕಲಿಸುತ್ತಾ ಪಾಠ ಹೇಳಿಕೊಡುವುದನ್ನು ಕಂಡು ಪ್ರೋತ್ಸಾಹಿಸಲು ಬಹುಮಾನ ಕೊಟ್ಟು ಗೌರವಿಸಿದೆ ಎಂದೂ ತಿಳಿಸಿದರು.

ಗಡಿಗ್ರಾಮಗಳ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ತೆರೆದುಕೊಳ್ಳದೇ ಬಾಲ್ಯವಿವಾಹಕ್ಕೆ ಒಳಪಡುತ್ತಿರುವುದನ್ನು ತಪ್ಪಿಸಲು ನಮ್ಮ ಅನುದಾನದಲ್ಲಿ 6 ಪ್ರೌಢಶಾಲೆಗಳನ್ನು ತಂದಿದ್ದೇವೆ. ಅದರಲ್ಲಿ ಸುಂಕದಕಲ್ಲು ಗ್ರಾಮಕ್ಕೆ ಒಂದು ಪ್ರೌಢ ಶಾಲೆ ಬಂದಿದೆ.ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಅಡಿಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲ ಭೂತ ಸೌಕರ್ಯಗಳಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಶಾಸಕರು ಪರಿಶೀಲಿಸಿದರು. ಹಾಗೆಯೇ ಕುಂದುಕೊರತೆಗಳನ್ನು ಆಲಿಸಿ ಮನವಿಗಳನ್ನು ಸ್ವೀಕರಿಸಿದರು. ಈ ವೇಳೆ ಅಧಿಕಾರಿಗಳು, ಗುತ್ತಿಗೆದಾರರು, ಮುಖಂಡರಾದ ನಾಗರಕಟ್ಟೆ ರಾಜಣ್ಣ ನವರು, ಊರಿನ ಗ್ರಾಮಸ್ಥರು ಮತ್ತು ಗ್ರಾ. ಪಂ. ಸದಸ್ಯರು , ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ಎಂ, ಬಸವರಾಜ್, ಕಕ್ಕುಪ್ಪೆ

Leave a Reply

Your email address will not be published. Required fields are marked *