“ಮಕ್ಕಳ ಬೌದ್ಧಿಕ ಮಟ್ಟ ಸುಧಾರಣೆಗೆ ಗಣಿತ ವಿಷಯ ಮುಖ್ಯವಾದದ್ದು. ಡಾ.ಶ್ರೀನಿವಾಸ್ ಎನ್ ಟಿ.
ಜಿಲ್ಲಾ ಮಟ್ಟದ ಪ್ರೌಢಶಾಲಾ ಗಣಿತ ಶಿಕ್ಷಕರ ಶೈಕ್ಷಣಿಕ ಕಾರ್ಯಗಾರ ಹಿರೇಮಠ ಕಲ್ಯಾಣ ಮಂಟಪ ಕೂಡ್ಲಿಗಿಯಲ್ಲಿ ನೆಡದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಗಣಿತ ವಿಷಯ ಅತ್ಯಂತ ಮುಖ್ಯವಾದ ವಿಷಯ ವಾಗಿದೆ. ಆದ್ದರಿಂದ ಮಕ್ಕಳ ಕಲಿಗೆ ಒತ್ತುಕೊಟ್ಟು ಗಣಿತ ವಿಷಯ ಕಠಿಣ ವಿಷಯವಲ್ಲ ಎಂಬ ಭಯವನ್ನು ಹೋಗಲಾಡಿಸಿ ಪರಿಣಾಮಕಾರಿಯಾಗಿ ಬೋದನೆ ಮಾಡಿದರೆ ಯಾವ ವಿಷಯ ಮಕ್ಕಳಿಗೆ ಕಠಿಣವಾಗುವುದಿಲ್ಲ. ಕಲಿಸುವ ವಿಷಯ ಯಾವುದೇ ಆಗಿರಲಿ ಆ ವಿಷಯಕ್ಕೆ ಅನುಗುಣವಾಗಿ ಪೂರ್ವ ತಯಾರಿಯೊಂದಿಗೆ ಮಕ್ಕಳ ಪಠ್ಯಕ್ರಮವನ್ನು ಅನುಸರಿಸಿ ಪರಿಣಾಮಕಾರಿ ಬೋಧನೆ ಮಾಡಿ ಎಂದು ಶಿಕ್ಷಕರಿಗೆ ಕಿವಿಮಾತು ಮಾತು ಹೇಳಿದರು.ಕಾರ್ಯಕ್ರಮದಲ್ಲಿ ಘನ ಸಾನಿಧ್ಯ ವಹಿಸಿರುವಂತ ಪರಮ ಪೂಜ್ಯ ಹಿರೇಮಠ ಸ್ವಾಮೀಜಿಯಾದ ಶ್ರೀಪ್ರಶಾಂತ್ ಸಾಗರ್.ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಕಾವಲಿ ಶಿವಪ್ಪ. ಕ್ಷೇತ್ರ ಶಿಕ್ಷಣಾಧಿಕಾರಿ.ಪದ್ಮನಾಭ ಕರ್ಣಂ ಹಾಗೂ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕಿನ ಪ್ರೌಢಶಾಲ ಶಿಕ್ಷಕರು ಮತ್ತು ಪತ್ರಿಕಾ ಮಾದ್ಯಮ ಮಿತ್ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030