ದಿನಾಂಕ :16/9/24 ಸೋಮವಾರ ಬೆಳಿಗ್ಗೆ11.00 ಗಂಟೆಗೆ ಕೂಡ್ಲಿಗಿಯ ಪ್ರವಾಸಿ ಮಂದಿರದಲ್ಲಿ ಜಂಗಮ ಸಮಾಜದ ಚಿಂತನಾ ಮಂಥನ ಸಭೆಯನ್ನು ತಾಲೂಕು ಜಂಗಮ ಸಮಾಜ ಸಂಸ್ಥೆ ರಿ ಕೂಡ್ಲಿಗಿ ಇವರು ಆಯೋಜಿಸಿದ್ದರು. ಈ ಸಭೆಯಲ್ಲಿ ಜಂಗಮ ಸಮಾಜದ ಸಂಘಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು. ಈ ಸಭೆಯಲ್ಲಿ ತಾಲೂಕಿನ ಅನೇಕ ಹಳ್ಳಿಗಳಿಂದ ಸಮಾಜ ಬಾಂಧವರು ಪಾಲ್ಗೊಂಡು ತಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ.ಜಂಗಮ ಬಡ ಪ್ರತಿಭಾವಂತ ಮಕ್ಕಳಿಗೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಇಂತಹ ಒಂದು ಕಾರ್ಯಕ್ರಮ ಆಯೋಜಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.ಆದಷ್ಟು ಈ ತಿಂಗಳ ಕೊನೆಯಲ್ಲಿ ಆಯೋಜಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದೆ ಸಂದರ್ಭದಲ್ಲಿ ಅನೇಕರು ಸಂಘಕ್ಕೆ ದೇಣಿಗೆ ಮತ್ತು ಸಂಘದ ಆಜೀವ ಸದಸ್ಯರಾಗಲು ನೋಂದಣಿ ಕಾರ್ಯಕೆ ಚಾಲನೆ ನೀಡಲಾಯಿತು. ಈ ಸಭೆಯಲ್ಲಿ ತಾಲೂಕು ಜಂಗಮ ಸಮಾಜದ ಅಧ್ಯಕ್ಷರಾದ ಶ್ರೀ ಹೆಚ್ ಎಂ ಗಂಗಾಧರಸ್ವಾಮಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು ಎ ಎಂ ವಾಗೀಶ ಮೂರ್ತಿ,ಕೆ ಎಂ.ವೀರೇಶ್,ವೀರಭದ್ರಸ್ವಾಮಿ, ಚಿದಾನಂದ್, ಡಾ.ರುದ್ರೆಶ್,ಮಲ್ಲಿಕಾರ್ಜುನ,ವಿವೇಕ್ ,ಮನೋಜ್ ,ಮಂಜುನಾಥ,ವೀರಭದ್ರಯ್ಯ,ಸಂತೋಷ್ ,ಸಿದ್ದೇಶ್, ವಿನಯ್, ಪತ್ರಿಕೆ ವರದಿಗಾರರಾಗಿ ಸಂಯುಕ್ತ ಕರ್ನಾಟಕ ಕೆ ಎಮ್ ವೀರೇಶ್ ಅವರೇ ಮತ್ತೊಬ್ಬ ಪತ್ರಕರ್ತ ಆಗಿ ಅಮ್ಮನಕೆರೆ ಮಠದ ಬಸವರಾಜ್ ಖುಷಿ ನ್ಯೂಸ್ ಅಂಡ್ ಜನತಾವಾಣಿ ವರದಿಗಾರನಾಗಿ ಸಮಾಜವನ್ನು ಜಂಗಮ ಸಮಾಜವನ್ನು ನಮ್ಮ ಕಾಲಂ ಪ್ರಕಾರ ನಮ್ಮನ್ನು ವೀರಶೈವ ಲಿಂಗಾಯಿತರೆಂಬ ವರ್ಗಕ್ಕೆ ಥರ್ಡ್ ಬಿ ನಮಗೆ ಜಂಗಮಾರೆ ಎಂಬ ನಮ್ಮ ಸಮಾಜದ ಕಲ್ಯಾಣ ಇಲಾಖೆ ಕಂದಾಯ ಇಲಾಖೆ ಜಂಗಮರ ಕಾಲಂನಲ್ಲಿ ಹೆಸರನ್ನು ನೋಂದಾಯಿಸುವುದಿಲ್ಲ ನಾವು ಯಾವ ಜಾತಿಯರು ಅನ್ನುವುದು ನಮಗೆ ಥರ್ಡ್ ಬಿ ಲಿಂಗಾಯತ ಎಂಬ ದಂಡ ಅಧಿಕಾರಿಗಳ ಅಧಿಸೂಚನೆ ನಮಗೆ ಬೇಡ ಜಂಗಮ ಕೊಡಲೆಂದು ಹಿಂದೆ ಜಂಗಮ ಎಂಬ ನಮ್ಮ ಜಾತಿಯ ಹೆಸರನ್ನು ನೋಂದಾಯಿಸುತ್ತಿದ್ದೇವೆ ವೀರಶೈವ ಜಂಗಮ ಎಂದು ಕರೆದಿದ್ದರು ಅದೇನಾದರೂ ನಮಗೆ ನಮ್ಮ ಜಾತಿಯ ಲಿಸ್ಟಿಗೆ ಸೇರಿಸಬೇಕೆಂದು ಈ ಸಭೆಯಲ್ಲಿ ನಾವು ಚರ್ಚಿಸಿ ಇನ್ನು ಅನೇಕ ಹಳ್ಳಿಗಳಿಂದ ಜಂಗಮ ಸಮಾಜದ ಬಾಂಧವರು ಭಾಗವಹಿಸಿ ಯಶಸ್ವಿಗೊಳಿಸಿದರು…
ವರದಿ.ವೈ ಮಹಾದೇವ್ ಗ್ರಾಮೀಣ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030