ಗಾಣಿಗ ಸಮುದಾಯಕ್ಕೆ 2ಎ ಜಾತಿ ಪ್ರಮಾಣ ಪತ್ರ ಪಡೆಯುವುದು ನಮ್ಮ ಹಕ್ಕು…!!!

Listen to this article

ಗಾಣಿಗ ಸಮುದಾಯಕ್ಕೆ 2ಎ ಜಾತಿ ಪ್ರಮಾಣ ಪತ್ರ ಪಡೆಯುವುದು ನಮ್ಮ ಹಕ್ಕು…

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಗಾಂಧೀಜಿ ಚಿತಾಭಸ್ಮಕ್ಕೆ ಗಾಣಿಗ ಸಮುದಾಯದ ಜಿಲ್ಲಾ ಅಧ್ಯಕ್ಷರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಯು. ಉಮೇಶ್ ಹಾಗೂ ಗಾಣಿಗ ಸಮುದಾಯದ ಮುಖಂಡರುಗಳು ಶುಕ್ರವಾರ ರಂದು ಮಹಾತ್ಮ ಗಾಂಧೀಜಿ ಚಿತಾಭಸ್ಮದ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ನೂರಾರು ಹೋರಾಟಗಾರರು ಪ್ರತಿಭಟನೆ ಮೆರವಣಿಗೆ ಮೂಲಕ ಕೂಡ್ಲಿಗಿ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಡಾ. ಬಿಆರ್ ಅಂಬೇಡ್ಕರ್ ವೃತ್ತದವರೆಗೂ ಗಾಣಿಗ ಜಾತಿ 2ಎ ಪ್ರಮಾಣ ಪತ್ರ ಪಡೆಯುವುದು ನಮ್ಮ ಹಕ್ಕು ಎಂಬ ಘೋಷಣೆ ಗಳೊಂದಿಗೆ ತಾಲೂಕ ಆಡಳಿತ ಸೌಧಕ್ಕೆ ಆಗಮಿಸಿ ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾ ಗಾಣಿಗರ ಸಂಘದ ನೂರಾರು ಹೋರಾಟಗಾರರು ಗಾಣಿಗ ಜನಾಂಗದವರಿಗೆ 2ಎ ಮೀಸಲಾತಿ ಪ್ರಮಾಣ ಪತ್ರ ನೀಡುಬೇಕೆಂದು ಮಾನ್ಯ ತಹಶೀಲ್ದಾರ ಅನುಸ್ಥಿತಿಯಲ್ಲಿ ಶಿರಾಸ್ತದರ ಚಂದ್ರಶೇಖರ್ ರವರು ಹೋರಾಟಗಾರರ ಮನವಿ ಪತ್ರವನ್ನು ಸ್ವೀಕರಿಸಿದರು. ಗಾಣಿಗ ಸಮುದಾಯದ ಜಿಲ್ಲಾಧ್ಯಕ್ಷರಾದ ಯು.ಉಮೇಶ್ ರವರು ಮಾತನಾಡುತ್ತ ಕೇಂದ್ರ ಹಾಗೂ ಕರ್ನಾಟಕ ಸರ್ಕಾರದಿಂದ ಗಾಣಿಗ ಜಾತಿ ಪ್ರಮಾಣ ಪತ್ರವನ್ನು ಪಡೆದಿರುತ್ತೇವೆ ಹಾಗೂ 1996 ರಿಂದ 2018ರ ವರೆಗೂ ಗಾಣಿಗ ಸಮುದಾಯದವರು 2ಎ ಜಾತಿ ಪ್ರಮಾಣ ಪತ್ರ ಪಡೆಯಬಹುದು ಎಂಬ ಸರ್ಕಾರದ ಆದೇಶಗಳನ್ನು ಹಾಗೂ ಕಾನೂನಾತ್ಮಕವಾಗಿ ಸುಮಾರು ಎರಡು ಮೂರು ಕೋರ್ಟುಗಳ ಮೂಲಕ ಗಾಣಿಗ ಸಮುದಾಯದವರು 2ಎ ಜಾತಿ ಪ್ರಮಾಣ ಪತ್ರ ಪಡೆಯಬಹುದು.ಎಂಬ ಆದೇಶದ ಪ್ರತಿಗಳು ಸಹ ನಮ್ಮಲ್ಲಿವೆ ಹಾಗೂ ಮನವಿ ಪತ್ರದ ಮೂಲಕ 30 ಪುಟಗಳ ಜೆರಾಕ್ಸ್ ಪ್ರತಿಗಳನ್ನು ಮಾನ್ಯ ತಹಶೀಲ್ದಾರ್ ಮುಖಾಂತರ ಸಲ್ಲಿಸಿರುತ್ತೇವೆ ಎಂದು ಹೋರಾಟಗಾರರು ತಿಳಿಸಿದರು. ಕರ್ನಾಟಕದಲ್ಲಿ ನಮ್ಮ ಸಮುದಾಯದವರು ಗಾಣಿಗ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಸತ್ಯವಿರುತ್ತದೆ, 12 ನೇ ಶತಮಾನದಲ್ಲಿ ಬಸವಣ್ಣನವರ ಧರ್ಮ ಕ್ರಾಂತಿ ಸಮಯದಲ್ಲಿ ಅನೇಕ ಹಿಂದುಳಿದ ಜಾತಿಗಳ ಜನಾಂಗದವರು ಲಿಂಗ ದೀಕ್ಷೆ, ಪಡೆದು ಕೊಂಡಂತೆ ಗಾಣಿಗ ಜಾತಿಯವರು ಲಿಂಗ ದೀಕ್ಷೆಯನ್ನು ಪಡೆದು ಕೊಂಡರು, ಎಂದು ಗಾಣಿಗ ಸಮುದಾಯದ ಇತಿಹಾಸವನ್ನು ಗಾಣಿಗ ಜಾತಿಯವರು ಗಾಣದಿಂದ ಎಣ್ಣೆ ತೆಗೆದು ಜೀವಿಸಿದಂತ ಸಂಸ್ಕೃತಿಯ ಪರಂಪರೆಯನ್ನು ತಿಳಿಸುವುದ ರೊಂದಿಗೆ ನಮ್ಮ ಗಾಣಿಗ ಸಮುದಾಯದವರು ಯಾರ ಸೌಲಭ್ಯವನ್ನು ಕಿತ್ತು ಕೊಳ್ಳುತ್ತಿಲ್ಲ ನಮಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯವನ್ನು ನಾವು ಜಾತಿ ಪ್ರಮಾಣ ಪತ್ರವನ್ನು ಕಾನೂನಾತ್ಮಕವಾಗಿ ಕರ್ನಾಟಕ ರಾಜ್ಯಾದ್ಯಂತ 2ಎ ಜಾತಿ ಪ್ರಮಾಣ ಪತ್ರ ನಮ್ಮ ಸಮುದಾಯದವರು ಪಡೆದು ಕೊಂಡಿದ್ದೇವೆ ಎಂದು ತಿಳಿಸಿದರು. ಆದ್ದರಿಂದ ಈ ಹಿಂದೆ ನೀಡುತಿದ್ದಂತೆ ನಮಗೆ 2ಎ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಶೇಖರಪ್ಪ ಕಾರ್ಯದರ್ಶಿ ಕೊಟ್ರೇಶ್, ಕೊಟ್ರಪ್ಪ ಮುಖಂಡರಾದ ದಿನ್ನೆ ಮಲ್ಲಿಕಾರ್ಜುನ, ಕೆ.ನಾಗರಾಜ್ ಜೆ. ಎಸ್.ಶಶಿಧರ, ಜೆ.ಎಸ್. ಧನಂಜಯ, ಶರಣಪ್ಪ,ಪ್ರಕಾಶ, ಕಿನ್ನಾಳ ಸುಭಾಷ್, ವೀರಭದ್ರಪ್ಪ, ಬಸವರಾಜ್, ಓಮೇಶ್ ಅನೇಕ ಸಮುದಾಯದ ಮುಖಂಡರುಗಳು ಭಾಗವಹಿಸಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend