ಗೆ ಮಾನ್ಯ ಶ್ರೀ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು ದಿನಾಂಕ:-09/09/2024
ದ್ವಾರ:-ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾ ಕಚೇರಿ ಹೊಸಪೇಟೆ
ವಿಷಯ :-ರೈತರು ಸಾಗು ಮಾಡುವ, ಪಟ್ಟ ಜಮೀನು ಸರ್ಕಾರಿ ಜಮೀನು, ಪರಂಪೂಕ, ಫಾರೆಸ್ಟ್, ಜಮೀನುಗಳಿಗೆ ಹಕ್ಕು ಪತ್ರ ಕೊಡಬೇಕೆಂದು ಒತ್ತಾಯಿಸಿ ಒತ್ತಾಯ ಪತ್ರ
ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ ಹೋಬಳಿಯ, ನಂದಿಬಂಡಿ, ಕಂದಾಯ ಗ್ರಾಮದ ಸರ್ಕಾರಿ ಜಮೀನು, ಗರಗ ನಾಗಲಾಪುರ ಗ್ರಾಮದ, ಫಾರೆಸ್ಟ್ ಜಮೀನು ಹಾಗೂ ಇತ್ತೀಚಿನ ದಿನಗಳಲ್ಲಿ ಡಣಾಯಕನ ಕೆರೆ ಕಂದಾಯ ಗ್ರಾಮದ,.
S NO:-572. ವಿಸ್ತೀರ್ಣ :-268.34ಪೈಕಿ ಮತ್ತು,1)529/1b 2)545/b/A/5. 3)227/d/e.4) 364..5) 389/4. 6)H 527/A1/A.. 7)542/1b
ಈ ಸರ್ವೇ ನಂಬರ್ ಗಳಲ್ಲಿ ರೈತರು ಸುಮಾರು 50ಕ್ಕೂ ಹೆಚ್ಚು ಕುಟುಂಬಗಳಿಗೆ ತಾವು ನೋಟಿಸ್ ಅನ್ನು ಜಾರಿ ಮಾಡಿದ್ದೀರಿ
ಆದರೆ 70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ ಅವರ ಬದುಕು ಬೀದಿ ಪಾಲಾಗುತ್ತದೆ, ಸರ್ಕಾರ ರೈತರ ರಕ್ಷಣೆ ಇದೆಯೋ ಅಥವಾ, ಕಾರ್ಪೊರೇಟರ್ ಕಂಪನಿಗಳ ಪರವಾಗಿ ಇದೆಯೋ, ಗೊತ್ತಾಗುತ್ತಿಲ್ಲ ಏಕೆ ಅಂದರೆ ಈಗ ಹೊಸಪೇಟೆಯ ತಹಶೀಲ್ದಾರರ ಮುಖಾಂತರ ರೈತರನ್ನು ಒಕ್ಕಲಿಬ್ಬಿಸಲು ನೋಟಿಸ್ ಜಾರಿ ಮಾಡಿದ್ದೀರಿ ಆದರೆ ಸಾಗು ಮಾಡುತ್ತಿರುವ ರೈತರಿಗೆ ಈ ಹಿಂದೆ ಕೈ ಬರಹ ಪಹಣಿ ಮತ್ತು ಕಂಪ್ಯೂಟರ್ ಪಹಣಿಗಳಲ್ಲಿ ಹೆಸರು ಇದ್ದು ಮತ್ತು ಕೆಲವು ರೈತರು ತೆರಿಗೆ ಕಟ್ಟಿದ ರಶೀದಿ ಇದೆ ಕೆಲವು ರೈತರಿಗೆ ಯಾವುದೇ ಹಕ್ಕು ಪತ್ರ ಇರುವುದಿಲ್ಲ ಆದ್ದರಿಂದ ಅವರಿಗೆ ಹಕ್ಕು ಪತ್ರವನ್ನು ಕೊಟ್ಟು ಅವರಿಗೆ ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ
ನಮ್ಮ ಹಕ್ಕೋತ್ತಾಯಗಳು
1) ಅಭಿವೃದ್ಧಿಯ ಹೆಸರಿನಲ್ಲಿ ರೈತರ ಕೈಯಿಂದ ಭೂಮಿ ಕಸಿದುಕೊಂಡು ಸರ್ಕಾರ ಏನು ಅಭಿವೃದ್ಧಿ ಮಾಡಿದೆ ಅನ್ನೋದನ್ನ ಶ್ವೇತಾ ಪತ್ರ ಹೊರಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉ ಗ್ರವಾದ ಹೋರಾಟವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ, ಈ ಮೂಲಕ ಒತ್ತಾಯಿಸುತ್ತೇವೆ
2) ರೈತರು ಸಾಗುವಳಿ ಮಾಡುತ್ತಿರುವ ಸರ್ಕಾರಿ ಜಮೀನು, ಪರಂಪೋಕ್ ಜಮೀನು, ಫಾರೆಸ್ಟ್ ಜಮೀನು, ರೈತರಿಗೆ ಹಕ್ಕು ಪತ್ರ ಕೊಡಲೇಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ
3) ಈ ವಿಷಯಕ್ಕೆ ಸಂಬಂಧಪಟ್ಟಂತೆ ಸರ್ಕಾರಕ್ಕೆ ನಾವು ಹಲವು ಬಾರಿ ಒತ್ತಾಯ ಮಾಡಿದ್ದೇವೆ.. ರೈತರ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬಂದಿಲ್ಲವೇ ?ಆದ್ದರಿಂದ
ಸರ್ಕಾರದ ಆದೇಶ ಬರುವವರೆಗೂ ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದೆಂದು ಈ ಮೂಲಕ ಒತ್ತಾಯಿಸುತ್ತೇವೆ
ಈ ಮೇಲಿನ ನಮ್ಮ ಒತ್ತಾಯಗಳನ್ನು ಜಿಲ್ಲಾಡಳಿತ ಮದ್ದೆ ಪ್ರವೇಶ ಮಾಡಿ ಕೂಡಲೇ ಸರಿಪಡಿಸಬೇಕು ಅಲ್ಲಿಯವರೆಗೆ ರೈತರನ್ನು ಒಕ್ಕಲೆಬ್ಬಿಸಬಾರದು ಒಂದು ವೇಳೆ ರೈತರನ್ನು ಒಕ್ಕಲಿಬ್ಬಿಸಲು ತಯಾರಿ ನಡೆಸಿದರೆ ಮುಂದಿನ ದಿನಗಳಲ್ಲಿ ಸರ್ಕಾರಗಳ ವಿರುದ್ಧ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಮತ್ತೊಮ್ಮೆ ಈ ಮೂಲಕ ಒತ್ತಾಯಿಸುತ್ತೇವೆ
ವಂದನೆಗಳೊಂದಿಗೆ ತಮ್ಮ ವಿಶ್ವಾಸಿ ರೈತರು
ಬಿ ಗೋಣಿ ಬಸಪ್ಪ ರಾಜ್ಯ ಕಾರ್ಯದರ್ಶಿ
ಜಿ ಮೆಹೂ ಸಾಬ್ ಜಿಲ್ಲಾ ಕಾರ್ಯದರ್ಶಿ
ರವಿಕುಮಾರ್ ತಂಬ್ರಹಳ್ಳಿ ಹಗರಿಬೊಮ್ಮನಹಳ್ಳಿ ಪ್ರಧಾನ ಕಾರ್ಯದರ್ಶಿ
ಗಂಟೆ ಸೋಮಶೇಖರ ಹೊಸಪೇಟೆ ತಾಲೂಕು ಅಧ್ಯಕ್ಷರು
ರಾಜಭಕ್ಷಿ, ಅಮಿಕ್ ಸಾಬ್ ಸರ್ದಾರ್, ಎಚ್ ಲಕ್ಷ್ಮಿ,,ಎನ್ ಸೋಮಕ್ಕ, ಎನ್ ಬಸಮ್ಮ, ಏ ಕೆ ಮಂಜುಳಾ, k ಫಕ್ಕುರ್ ಸಾಬ್, ಅಂಗಡಿ ಹುಲಗಪ್ಪ, K ಫಕುರ್ ಸಾಬ್ ,ತಳವಾರ ಹನುಮಂತಪ್ಪ, ಏಕೆ ಮಂಜುನಾಥ*,, ಡಿ ಹುಲುಗಪ್ಪ, ಬಿ ದುರ್ಗಪ್ಪ,, ದೊಡ್ಡ ಮಾರೆಪ್ಪ,,, ಅನೇಕ ರೈತರು ಇದ್ದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030