ಕೂಡ್ಲಿಗಿ:ಸೌಹಾರ್ಧತೆಗೆ ಸಾಕ್ಷಿಯಾದ ರಸ್ತೆ ಬದಿ ವ್ಯಾಪಾರಿಗಳ ಶ್ರೀಗಣೇಶೋತ್ಸವ ಸಂಪನ್ನಃ….!!!

Listen to this article

ಕೂಡ್ಲಿಗಿ:ಸೌಹಾರ್ಧತೆಗೆ ಸಾಕ್ಷಿಯಾದ ರಸ್ತೆ ಬದಿ ವ್ಯಾಪಾರಿಗಳ ಶ್ರೀಗಣೇಶೋತ್ಸವ ಸಂಪನ್ನಃ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ರಸ್ತೆ ಬದಿ ವ್ಯಾಪಾರಿಗಳಿಂದ, ಗಣೇಶ ಚತುರ್ಥಿ ಪ್ರಯುಕ್ತ ಶ್ರೀಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿಶೇಷವೇನೆಂದರೆ ಸಂಘಟನೆಯಲ್ಲಿನ ಮುಸ್ಲಿಂ ಸಮಾಜದವರು ಸೇರಿದಂತೆ, ವಿವಿದ ಕೋಮಿನ ಸಮಜಾದವರೂ ಕೂಡ ಉತ್ಸವದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ರಸ್ತೆ ಬದಿ ವ್ಯಾಪಾರಸ್ತರ ಸಂಘದಲ್ಲಿ ವಿವಿದ ಜಾತಿ ಮಥ ಪಂಥಗಳ, ವಿವಿದ ಕೋಮಿನವರು ಪದಾಧಿಕಾರಿಗಳು ಸದಸ್ಯರು ಇದ್ದಾರೆ. ಇವರೆಲ್ಲರೂ ಸೌಹಾರ್ಧತೆಯಿಂದ ಶ್ರೀಗಣೇಶೋತ್ಸವ ನೆರವೇರಿಸಿದ್ದು, ಪರಸ್ಪರ ಸೌಹಾರ್ಧತಾ ಮನೋಭಾವದೊಂದಿಗೆ ಭಾಗಿಯಾಗಿದ್ದಾರೆ. ಎಲ್ಲಾ ಕೋಮಿನ ರಸ್ತೆ ಬದಿ ವ್ಯಾಪಾರಿಗಳು ತಮ್ಮ ಮಡದಿ ಮಕ್ಕಳು ಕುಟುಂಬ ಸಮೇತರಾಗಿ, ಉತ್ಸವದ ಕಾರ್ಯಬಾರವನ್ನು ನಿರ್ವಹಿಸಿ ಸಕ್ರೀಯವಾಗಿದ್ದು ಸೌಹಾರ್ಧತೆ ಮೆರೆದಿದ್ದಾರೆ.
ಪಟ್ಟಣದ ಶ್ರೀ ಆಂಜನೇಯ ಪಾದಗಟ್ಟೆ ವೃತ್ತದ ಹತ್ತಿರದಲ್ಲಿ, ವೇದಿಕೆಯನ್ನ ನಿರ್ಮಿಸಿ ರೂಡಿ ಸಂಪ್ರದಾಯದಂತೆ. ಶ್ರೀಗಣೇಶನ ಮೂರ್ತಿಯನ್ನು ತಂದು ವಿಧಿವತ್ತಾಗಿ ಪ್ರತಿಷ್ಠಾಸಿ ಆರಾಧಿಸಲಾಯಿತು, ಪುರೋಹಿತರಾದ ವಿಠಲರವರು ಪ್ರತಿಷ್ಠಾಪನಾ ಪೂಜೆ ಗೈದು ಮಹಾಮಂಗಳಾರತಿ ಬೆಳಗಿದರು. ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯೆರು ಜಾತಿ ಮಥ ಪಂಥ ಭೇದವಿಲ್ಲದೆ. ಮೇಲು ಕೀಳು ಬಡವ ಬಲ್ಲಿದ ಎಂಬ ತಾರ ತಮ್ಯ ವಿಲ್ಲದೇ, ಎಲ್ಲಾ ಜಾತಿ ಧರ್ಮದ ರಸ್ತೆ ಬದಿ ವ್ಯಾಪಾರಿಗಳು ಸೌಹಾರ್ಧತೆಯಿಂದ ಹಬ್ಬ ಆಚರಿಸಿದರು. ಸಾರ್ವಜನಿಕರು ಗಣೇಶನ ನೂರಾರು ಭಕ್ತರಿಗಾಗಿ, ಗಣೇಶ ದೇವರ ಪ್ರಸಾದ ಹಾಗೂ ಅನ್ನಸಂತರ್ಪಣೆ ಸೇವೆ ಜರುಗಿತು. ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾ ಮಂಡಳ, ಕೂಡ್ಲಿಗಿ ಘಟಕ ತಾಲೂಕ್ ಅಧ್ಯಕ್ಷರಾದ ಹೋಬಳೇಶಪ್ಪ. ಉಪಾಧ್ಯಕ್ಷರಾದ ಜಗ್ಗಿನಾಥ್, ತಕಾರ್ಯದರ್ಶಿ ಆಲಂಬಾಷಾ, ಸಹ ಕಾರ್ಯದರ್ಶಿ ತಿಪ್ಪೇಸ್ವಾಮಿ, ಸಂಘಟನಾ ಕಾರ್ಯದರ್ಶಿ ಈ. ಅಶೋಕ, ಮಹಿಳಾ ಘಟಕದ ಅಧ್ಯಕ್ಷರಾದ ಮಂಜಮ್ಮ, ಉಪಾಧ್ಯಕ್ಷರಾದ ಗೌರಮ್ಮ ಸಿಂಧೆ, ಮಹಿಳಾ ಸದಸ್ಯೆ ಮಮತಾ, ಸುಭದ್ರಮ್ಮ, ಉಪಪಾಧ್ಯಕ್ಷರಾದ ಈಶ್ವರಮ್ಮ. ಸದಸ್ಯರುಗಳಾದ ವೆಂಕಟೇಶ, ಕೊಟ್ರೇಶ್, ಉಮೇಶ್, ತ್ಯಾಗರಾಜ, ಬಸಣ್ಣ, ಇಟಗಿ ಪ್ರಕಾಶ್, ಸ್ವಾಮಿ, ಹಾಗೂ ರಸ್ತೆ ಬದಿಯ ಎಲ್ಲಾವ್ಯಾಪಾರಿಗಳು.
ಸಂಘಟನೆ ಪದಾಧಿಕಾರಿಗಳು. ಸರ್ವ ಸದಸ್ಯರು ಅವರ ಕುಟುಂಬ ಸಮೇತರಾಗಿ ಉಪಸ್ಥಿತರಿದ್ದರು. ಮಹಿಳೆಯರು ಮಕ್ಕಳಾದಿಯಾಗಿ, ನಾಗರೀಕರು, ಹಿರಿಯರು ಉತ್ಸವದಲ್ಲಿ ಭಾಗಿಯಾಗಿ ಸೌಹಾರ್ಧತೆಯ ಗಣೇಶೋತ್ಸವಕ್ಕೆ ಸಾಕ್ಷಿಯಾದರು…

ವರದಿ ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend