ಸಂಭ್ರಮದೊಂದಿಗೆ ಶಾಸಕರಿಗೆ ಸ್ವಾಗತ ಕೋರಿದ ಜುಮ್ಮೋಬನಹಳ್ಳಿ- ಮ್ಯಾಸರಹಟ್ಟಿ ಜನ
ಕೂಡ್ಲಿಗಿ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರನ್ನು ದಿ; 04-09-24 ರಂದು *ಹಟ್ಟಿ ಹಬ್ಬದ ಪ್ರಯುಕ್ತ ಜುಮ್ಮೋಬನಹಳ್ಳಿ- ಮ್ಯಾಸರಹಟ್ಟಿ ಗ್ರಾಮಸ್ಥರು ಮತ್ತು ಮುಖಂಡರು ಸಂಭ್ರಮದಿಂದ ಸ್ವಾಗತ ಕೋರಿದರು*. ಶಾಸಕರು, ಊರಿನ *ಶ್ರೀ ಮಲಿಯಮ್ಮ ದೇವಸ್ಥಾನಕ್ಕೆ ಮುಖಂಡರೊಂದಿಗೆ ತೆರಳಿ ಕ್ಷೇತ್ರದ ಜನರ ಒಳಿತಿಗಾಗಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.* *ಗ್ರಾಮದೇವತೆ ಸನ್ನಿಧಿಯಲ್ಲಿ ಸೇತುವೆ ಭೂಮಿ ಪೂಜೆ ನೆರವೇರಿಸಿ ಊರಿನ ಸಮಗ್ರ ಅಭಿವೃದ್ಧಿಗೆ ಒತ್ತು ಕೊಡುವೆ ಎಂದರು*. *ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ತಾ. ಪಂ. ಸದಸ್ಯರಾದ ನೇತ್ರಮ್ಮ ಓಬಣ್ಣ ನವರ ಮನೆಗೆ ಭೇಟಿ ನೀಡಿ ಸ್ಥಳೀಯ ಮುಖಂಡರ ಯೋಗಕ್ಷೇಮ ವಿಚಾರಿಸಿದರು*. ಈ ಭಾಗದ ಹಳ್ಳಿಗಳ ಅಭಿವೃದ್ಧಿಗೆ ಒತ್ತು ಕೊಡುವೆ ಎಂದರು. ಈ ವೇಳೆ ಮಾಜಿ ತಾ. ಪಂ.ಸದಸ್ಯರಾದ ಕಲ್ಲಹಳ್ಳಿ ಸಿದ್ದಣ್ಣ, ಹೂಡೇಂ ಪಾಪನಾಯಕ, ಜುಮ್ಮೊಬನಹಳ್ಳಿ ಗ್ರಾ .ಪಂ .ಅಧ್ಯಕ್ಷರಾದ ಸಾಕಮ್ಮ ಓಬಣ್ಣ, ಪೂಜಾರಹಳ್ಳಿ ಗ್ರಾ. ಪಂ ಅಧ್ಯಕ್ಷರಾದ ವೆಂಕಟೇಶ ನಾಯಕ್, ಹೂಡೇಂ ಗ್ರಾ. ಪಂ. ಅಧ್ಯಕ್ಷರಾದ ರಾಮಚಂದ್ರ ,ಮುಖಂಡರಾದ ಜುಟ್ಟಲಿಂಗನಹಟ್ಟಿ ಬಸಣ್ಣ, ಉಪ್ಪಾರ ವೆಂಕಟೇಶ, ಪಾಲಕ್ಷ, ಕಲ್ಲುಕುಂಟೆ ಕೃಷ್ಣಪ್ಪ, ಗೌಡ್ರು ಬೈಯ್ಯಣ್ಣ, ಗೊ. ಓಬಣ್ಣ, ತಿಪ್ಪೇಶ, ದಾಸಣ್ಣ, ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030