ನೆಮ್ಮ ಹೆಮ್ಮೆಯ ಗುರುಗಳು
ವಿದ್ಯಾರ್ಥಿಗೆ ಶಿಸ್ಥು ಅಗತ್ಯ, ಪ್ರೆಶ್ನಿಸದೇ ಏನನ್ನೂ ಒಪ್ಪಬೇಡಿ. ಎಂದು ಭೋಧಿಸಿದ ಪ್ರಾಧ್ಯಾಪಕರಾದ ಟಿ.ಕೊತ್ಲಮ್ಮ-ವಿಜಯನಗರ ಜಿಲ್ಲೆ ಕೂಡ್ಲಿಗಿ: ಸರ್ಕಾರಿ ಸಂಯುಕ್ತ ಪದವಿ ಪೂರ್ವಕಾಲೇಜ್ ನಲ್ಲಿ, ನಾನು ಪ್ರಥಮ ಪಿಯುಸಿ ಕಲಾವಿಭಾಗದ ವಿದ್ಯಾರ್ಥಿಯಾಗಿದ್ದೆ. ಅಂದು ಊಟದ ವಿರಾಮದ ನಂತರದ ತರಗತಿ, ಸಮಾಜ ಶಾಸ್ತ್ರದ ಪಠ್ಯಕ್ರಮದ ಸಮಯ. ನಮ್ಮ ಹೆಮ್ಮೆಯ ಗುರುಗಳಾದ, ಶ್ರೀಮತಿ ಟಿ.ಕೊತ್ಲಮ್ಮ ದಳವಾಯಿ ಚಕ್ರಪಾಣಿ ರವರ(ಈಗ ಅದೇ ಕಾಲೇಜ್ ನ ಪ್ರಾಂಶುಪಾಲರು) ತರಗತಿ. ಅವರು ಕೊಠಡಿ ಪ್ರವೇಶಿಸುತ್ತಿದ್ದಂತೆ, ತರಗತಿಯ ಕೊಠಡಿಯಲ್ಲಿನ ಧೂಳು ಗಲೀಜು ಕಂಡು ಕೆಂಡಾ ಮಂಡಲವಾದರು. ಮತ್ತು ಅಂತಹ ದೂಳು ಗಲೀಜ್ ನಲ್ಲಿ ಕುಳಿತಿದ್ದ ನಮ್ಮ ಮೇಲೆ ಸಿಡುಕಿದರು, ಅಂದರೆ ವಿದ್ಯಾರ್ಥಿಗಳ ಸಹಿಷ್ಣುತೆಯನ್ನು ಕಠೋರವಾಗಿ ಖಂಡಿಸಿದರು. ನೀವು ಶಿಸ್ಥು ಪಾಲಿಸಬೇಕು ಅಂದರೆ ವಿದ್ಯಾರ್ಥಿಗಳಿಗೆ ಅದು ಭೂಷಣವೆಂದರು, ಕಸ ಅನ್ನಬೇಕಾಗಿದ್ದ ಪಿಓನ್ ವೆಂಕಟೇಶ ನನ್ನು ಪ್ರಾಂಶುಪಾಲರ. ತಮ್ಮ ವೈಯಕ್ತಿ ಮನೆ ಕೆಲಸಕ್ಕೆ ಆತನನ್ನು ಕಳುಹಿಸಿಕೊಟ್ಟಿರುವುದಾಗಿ ತಿಳಿಯಿತು, ಮತ್ತು ಮಹಲಿಂಗಪ್ಪ ಪಿಓನ್ ರಜೆ ಇದ್ದ ಕಾರಣ ಅಂದು ಕೊಠಡಿಗಳು ಸ್ವಚ್ಚಗೊಂಡಿರಲಿಲ್ಲ. ಇದನ್ನರಿತ ಪ್ರಾಧ್ಯಾಪಕರಾದ ಟಿ.ಕೊತ್ಲಮ್ಮರವರು, ಪರ್ಯಾಯ ವ್ಯವಸ್ಥೆ ಮಾಡಬೇಕು ಅಂದರೆ ಉಳಿದ ಸಿಬ್ಬಂದಿಯನ್ನು, ನಿಯೋಜಿಸಿ ಸ್ವಚ್ಚಗೊಳಿಸಬೇಕಿತ್ತು ಅದು ಪ್ರಾಂಶುಪಾಲರ ಜವಾಬ್ದಾರಿ ಎಂದು ಅವರು ನುಡಿದರು.
ಮತ್ತು ವಿದ್ಯಾರ್ಥಿಗಳೆಲ್ಲ ಹೋಗಿ ಪ್ರಾಂಶುಪಾಲರಲ್ಲಿ ಮನವಿ ಮಾಡಿ, ಬೇರೆಯವರನ್ನು ನಿಯೋಜಿ ಸ್ವಚ್ಚಗೊಳಿಸಲು ತಿಳಿಸಿ ಎಂದರು. ನಾವು ಪ್ರಾಂಶುಪಾಲರನ್ನು ಈ ಕುರಿತು ವಿಚಾರಿಸಲು ಹೆದರಿ ಬೆಂಡಾದೆವು, ಅದನ್ನರಿತ ಟಿ.ಕೊತ್ಲಮ್ಮರವರು ಯಾಕ್ರೀ ಹೆದರುತ್ತೀರಾ ಅದು ನಿಮ್ಮ ಹಕ್ಕು ಅವ್ಯವಸ್ಥೆಯನ್ನು ಪ್ರೆಶ್ನೆ ಮಾಡಿ ಸರಿ ಪಡಿಸಿಕೊಳ್ಳಬೇಕು. ಪ್ರೆಶ್ನೆ ಮಾಡದೇ ಅವ್ಯವಸ್ಥೆಯನ್ನು ತಡೆಯಲಾಗಲ್ಲ, ಶಿಸ್ಥು, ಪ್ರೆಶ್ನಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಮೈಗೂಡಬೇಕು ಎಂದು ಅವರು ತಿಳಿ ಹೇಳಿದರು. ಅವರ ಮಾತನ್ನ ಕೇಳಿದ ನಾನು ಮತ್ತು ನನ್ನ ಅತ್ಮೀಯ ಕೆಲ ಗೆಳೆಯರು ಕೂಡಿ, ಪ್ರಾಂಶುಪಾಲರಲ್ಲಿ ತೆರಳಿ ಪರಿಸ್ಥಿತಿ ವಿವರಿಸಿದೆವು ಅವರು ನಿರ್ಲಕ್ಷ್ಯ ಧೊರಣೆ ಮಾತನಾಡಿದರು. ಆಗ ನಾನು ಅವರನ್ನು ಅಷ್ಟಕ್ಕೇ ಬಿಡದೇ ಕೂಡಲೇ ತರಗತಿಯ ಕೊಠಡಿ ಸ್ವಚ್ಚವಾಗ ಬೇಕು, ಇಲ್ಲವಾದಲ್ಲಿ ಧರಣಿ ಕೂಡುವೆವು ಎಂದು ನಾನೇ ಧೈರ್ಯ ಮಾಡಿ ಕೂಗಾಡಿದೆ. ಅಗ ನನ್ನ ಕೂಗಾಟಕ್ಕೆ ದಂಗಾದ ಪ್ರಾಂಶುಪಾಲರು ಮರು ಮಾತನಾಡದೇ, ತಾವೇ ಕಸಬರಿಗೆಯನ್ನು ತಂದು ತರಗತಿ ಸ್ವಚ್ಚಗೊಳಿಸಲು ಮುಂದಾದರು. ಅಗ ನಾವೇ ಅವರನ್ನು ತಡೆದು ಅನಿವಾರ್ಯವಾಗಿ , ಕಸಬರಿಗೆ ಹಿಡಿದು ಕಸ ಅಂದು ಕೊಠಡಿ ಸ್ಚಚ್ಚಗೊಳಿಸಿದೆವು ತರಗತಿ ಪ್ರಾರಂಭವಾಯಿತು.
ಅವರು ಕೇವಲ ಪಠ್ಯಕ್ರಮದ ಭೋದನೆಯನ್ನ ಮಾತ್ರ ಮಾಡದೇ, ಅವ್ಯವಸ್ಥೆಯ ವಿರುದ್ಧ ಹೋರಾಟಕ್ಕಿಳಿಯುವ ಮನೋಧೈರ್ಯ ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸದ ಗುರುಗಳವರು. ವಿದ್ಯಾರ್ಥಿಗಳಿಗೆ ವಿನಯತೆ ಶಿಸ್ಥು ವಿವೇಚನೆ ಪ್ರೆಶ್ನಿಸದೇ ಏನನ್ನೂ ಒಪ್ಪಿಕೊಳ್ಳಬಾರದು, ಅವ್ಯವಸ್ಥೆಯ ವಿರುದ್ಧ ಸಿಡಿದೇಳುವ ಮನೋಭಾವ ವಿದ್ಯಾರ್ಥಿ ಜೀವನದಿಂದಲೇ ರೂಡಿಗತ ಮಾಡಿದ ಅವರಿಗೆ ಅನಂತಂತ ವಂದನೆಗಳು. ಅವರು ಕೂಡ್ಲಿಗಿಯ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ, ಕರ್ಥವ್ಯ ನಿರ್ವಹಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ…
ವರದಿ..ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030