ಪ್ರತಿ ಊರಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ಕೊಡುವೆ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ..
ಕೂಡ್ಲಿಗಿ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ. ಅವರು ದಿ; 04-09-24 ರಂದು *2023-24 ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಪಾಲಯ್ಯನಕೋಟೆ, ಸೂಲದಹಳ್ಳಿ, ಗುಣಸಾಗರ, ಗ್ರಾಮಗಳಲ್ಲಿ ಸಿ. ಸಿ. ರಸ್ತೆ ನಿರ್ಮಾಣದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು. ನಮ್ಮ ಕ್ಷೇತ್ರದಲ್ಲಿ ಬರುವ ಪ್ರತಿ ಊರಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ಕೊಡುತ್ತಾ ಯಾವುದೇ ಭೇದ ಭಾವ ಇಲ್ಲದೇ ಸರ್ವ ರೀತಿಯಲ್ಲಿ ಆಯಾ ಊರಿನ ರಸ್ತೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್ , ಊರಿನ ಸ್ವಚ್ಚತೆ ಇನ್ನೂ ಮುಂತಾಗಿ ಅಭಿವೃದ್ಧಿಗೆ ಒತ್ತು ಕೊಡುವ ಮೂಲಕ ಗಮನ ಹರಿಸಲಾಗುವುದು* ಎಂದರು. ಹಾಗೆಯೇ *ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಗುಳೇ ಹೋಗುವುದನ್ನು ತಪ್ಪಿಸುತ್ತೇನೆ ಎಂದರು. ಊರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಮನವಿಯನ್ನು ಶಾಸಕರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸೂಲದಹಳ್ಳಿ ಗ್ರಾ. ಪಂ. ಅಧ್ಯಕ್ಷರಾದ ರತ್ನಮ್ಮ ರಾಮಯ್ಯ ಅವರು, ಸದಸ್ಯರು, ಗುತ್ತಿಗೆದಾರರು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030