ರೈತರ ಒಳಿತಿಗಾಗಿ ಕೆರೆಗಳಿಗೆ ಬಾಗಿನ ಅರ್ಪಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್.ಟಿ.
ಕೂಡ್ಲಿಗಿ ಕ್ಷೇತ್ರದ ರಾಯಾಪುರ ಕೆರೆ, ಅಪ್ಪೇನಹಳ್ಳಿ ಕೆರೆ, ಗುಡೇಕೋಟೆ ಕೆರೆ, ರಾಮದುರ್ಗ ಕೆರೆಗಳಿಗೆ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; ೦3-09-24 ರಂದು ಬಾಗಿನ ಅರ್ಪಿಸಿ ಮಾತನಾಡಿದರು. ನಮ್ಮ ಪೂರ್ವಜರ ಶ್ರಮ ಮತ್ತು ದುಡಿಮೆಯ ಫಲವಾಗಿ ನಾಡಿನ ಒಳಿತಿಗಾಗಿ ಕೆರೆಗಳನ್ನು ನಿರ್ಮಿಸಿರುವುದು ಇದೆ. ಈ ಭಾಗದಲ್ಲಿ ಒಳ್ಳೆಯ ಮಳೆ ಬಂದು ಕೆರೆ, ಕಟ್ಟೆ ತುಂಬಿ ಹರಿಯುತ್ತಿರುವುದು ನನ್ನಲ್ಲಿಯೂ ಸಂತಸ ತಂದಿದೆ ಎಂದರು. ನಮ್ಮಲ್ಲಿ ಹಚ್ಚ ಹಸಿರಿನ ಬೆಳೆಗಳನ್ನು ಕಂಡು ಖುಷಿ ಪಟ್ಟಿರುವೆ. *ಇಲ್ಲಿನ ರೈತರ ಜೀವನ ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದೂ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದೂ ಕೆರೆಗಳಿಗೆ ಶಾಸಕರು ಪೂಜೆ ಸಲ್ಲಿಸಿದರು*. ಹಾಗೆಯೇ ಇಲ್ಲಿನ ರೈತರ – ಸಾರ್ವಜನಿಕರ ಕಷ್ಟ ಸುಖಗಳು ಮತ್ತು ಕುಂದುಕೊರತೆಗಳನ್ನು ಆಲಿಸಿದರು. ಈ ವೇಳೆ ಅಧಿಕಾರಿಗಳು, ಗ್ರಾ. ಪಂ. ಅಧ್ಯಕ್ಷರು, ಸದಸ್ಯರು, ಮುಖಂಡರು, ರೈತರು, ಮಹಿಳೆಯರು, ಸಾರ್ವಜನಿಕರು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030