ಸರ್ಕಾರಿ ಕೋಟದಲ್ಲಿ ಎಂಬಿಬಿಎಸ್ ಸೀಟ್ ಪಡೆದ ಶಿವಾನಿಯನ್ನು ಅಭಿನಂಧಿಸಿ ಪ್ರೋತ್ಸಾಹಿಸಿದ ಶಾಸಕ- ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ನರಸಿಂಹಗಿರಿ ಗ್ರಾಮದ ಶಿವಾನಿ ( 19) ಬಸವರಾಜ ಅವರಿಗೆ ಶಿವಮೊಗ್ಗದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಎಂ. ಬಿ. ಬಿ. ಎಸ್. ಕೋಸ್೯ಗೆ ಸರ್ಕಾರದ ಕೋಟದ ಅಡಿ ಸೀಟ್ ಸಿಕ್ಕಿರುವುದಕ್ಕೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಇಂದು ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿನಿ ಮತ್ತು ಅವರ ಕುಟುಂಬವನ್ನು ಅಭಿನಂಧಿಸಿ ಉನ್ನತ ಶಿಕ್ಷಣಕ್ಕಾಗಿ ಪ್ರೋತ್ಸಾಹಿಸಿದರು.*
ಶಾಸಕರು, ವಿದ್ಯಾರ್ಥಿನಿ ಮತ್ತು ಪೋಷಕರಿಗೆ ಕಿವಿ ಮಾತು ಹೇಳುತ್ತಾ, ಅತ್ಯಂತ ಹಿಂದುಳಿದ ಕುಗ್ರಾಮದಲ್ಲಿ ಬಡತನದಿಂದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿಗೆ ಉನ್ನತ ಮಟ್ಟದ ವೈದ್ಯಕೀಯ ಶಿಕ್ಷಣಕ್ಕಾಗಿ ಸೀಟ್ ಸಿಕ್ಕಿರುವುದು ಹೆಮ್ಮೆಯ ವಿಷಯ.
ನೀವು ಬಡತನ ಎಂಬ ಕಾರಣಕ್ಕಾಗಿ ಉನ್ನತ ಶಿಕ್ಷಣದಲ್ಲಿ ಹಿಂದೇಟು ಹಾಕದೇ ಮುಂದುವರಿಯಬೇಕು ಎಂದೂ ಧೈರ್ಯ ತುಂಬಿ ನಾನು ನಿಮ್ಮೊಂದಿಗೆ ಇದ್ದೇನೆ ಎಂದೂ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಿ.ಇಓ ಅಧಿಕಾರಿಗಳಾದ ಪದ್ಮನಾಭ ಕರಣಂ , ಶಿವಾನಿಯ ಪೋಷಕರು, ಶಿಕ್ಷಕರು ಮತ್ತು ಮುಖಂಡರು ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ (ಕೂಡ್ಲಿಗಿ ತಾಲೋಕು ಜವಾಬ್ದಾರಿ ವರದಿಗಾರರು )
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030