ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು, ಮಂಗಾಪುರದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ವಲಯ ಮುಟ್ಟದ ಕ್ರೀಡಾಕೂಟ.
ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯ’ ಎಂದು ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ದನಗೌಡ ಹೇಳಿದರು. ಸಮೀಪದ ಮಂಗಾಪುರ ಗ್ರಾಮದಲ್ಲಿ ಮಂಗಳವಾರ ಶಾಲಾ ಸಾಕ್ಷರತಾ ಇಲಾಖೆಯಿಂದ ಹಮ್ಮಿಕೊಂಡಿದ್ದ ವಲಯ ಮಟ್ಟದ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
`ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇ ಕು. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಲಿ’ ಎಂದರು.
ಕ್ರೀಡಾ ಜ್ಯೋತಿ ಬೆಳಗಿದ ಮುಖಂಡ ಎನ್.ಟಿ. ತಮ್ಮಣ್ಣ ಮಾತನಾಡಿ, ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆದಾಗ ಭವಿಷ್ಯದಲ್ಲಿ ಉನ್ನತಿಯನ್ನು ಕಾಣಲು ಸಾಧ್ಯವಿದೆ. ಇಂದು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳು ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಯನ್ನು ಮಾಡುವಂತಾಂಲಿ ಎಂದು ಶುಭ ಆರೈಸಿದರು.
ಗ್ರಾಪಂ ಅಧ್ಯಕ್ಷ ಎಂ. ಮಹಾಂತೇಶ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಂಗಾಪುರ ಗ್ರಾಪಂ ಸದಸ್ಯರಾದ ಬಣಕಾರ್ ಮಹೇಶಮ್ಮ ಶರಣಪ್ಪ, ಜಿ ಬಸವರಾಜ್. ನೇತ್ರಾವತಿ ಓಬಳೇಶ್. ಉಮಾ ಸಿದ್ದಪ್ಪ. ಎಂ.ಪಿ. ರಾಜಶೇಖರ್ ಗೌಡ್ರು, ಟಿಪಿಓ ಶಶಿಧರ , ಗುಳಿಗಿ ವೀರೇಂದ್ರ, ಹಾಗೂ ವಲಯ ಸಂಚಾಲಕ ಮಲ್ಲಿಕಾರ್ಜುನ್, ಮಂಗಾಪುರ ಮುಖಂಡರಾದ ಎಸ್. ದೊಡ್ಡ ವೀರಪ್ಪ, ಶಿಕ್ಷಕ ಮಂಜುಳಾ ಮುಖ್ಯ ಶಿಕ್ಷಕರು.
ಜಡತಲೆ ಸಿದ್ದೇಶ, ಎನ್ ಬೀಮಪ್ಪ, ಎಸ್. ವಿರಣ್ಣ ಶಿಕ್ಷಕರು ನಿವೃತ್ತ ಶಿಕ್ಷಕರು ವೀರೇಶ್ ಕುಮಾರ್, ಕೆ. ಕೊಟ್ರೇಶ್ ಶ್ರೀಕಂಠಪ್ಪ ಪತ್ರಪ,್ಪ ಕೆ. ಚೇತನ್ ಕುಮಾರ್,ಬನ್ನಿಗೌಡ ,ಮಹಾಂತೇಶ. ಪಾಲ್ಗೊಂಡಿದ್ದರು.
ಕಾಲೇಜ್ ವಿದ್ಯಾರ್ಥಿಗಳಿಂದ ಜ್ಯೋತಿ ರ್ಯಾಲಿ ನಡೆಯಿತು. ಮಂಗಾಪುರ ಗ್ರಾಮಸ್ಥರಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030