ಬಡವರಿಗೆ ಸ್ವಂತ ಸೂರು ಕಲ್ಪಿಸಲು ಸರ್ಕಾರ ಬದ್ಧ – ವಸತಿ ಸಚಿವ – ಜಮೀರ್ ಅಹಮ್ಮದ್ ಖಾನ್.
ಕರ್ನಾಟಕ ಘನ ಸರ್ಕಾರದ ಮಾನ್ಯ ವಸತಿ ಸಚಿವರಾದ ಶ್ರೀಯುತ ಬಿಝಡ್ ಜಮೀರ್ ಅಹ್ಮದ್ ಖಾನ್ ಅವರು ವಿಜಯ ನಗರ ಜಿಲ್ಲೆಯಲ್ಲಿ ದಿ. 14-08-24 ರಂದು “ಜಿಲ್ಲಾ ಮಟ್ಟದ ಜನ ಸ್ಪಂದನ ಕಾರ್ಯಕ್ರಮ” ವನ್ನು ಉದ್ಘಾಟಿಸಿ ಮಾತನಾಡಿದರು. ಬಡವರಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದೂ ಹೇಳಿದರು. ಜನರು ನಿರೀಕ್ಷೆ ಇಟ್ಟುಕೊಂಡು ಅರ್ಜಿ ಕೊಡಲು ಬಂದಿರುತ್ತಾರೆ. ಜಿಲ್ಲಾ ಅಧಿಕಾರಿಗಳು ಪ್ರತಿಯೊಂದು ಅರ್ಜಿಗಳನ್ನು ಗಂಭೀರವಾಗಿ ಸಿದ್ದಪಡಿಸಿ ನನಗೆ ಕೊಡಬೇಕು ಎಂದೂ ಹೇಳಿದರು. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಪ್ರತಿ ತಿಂಗಳಿಗೊಮ್ಮೆ ತಾಲೂಕು ದರ್ಶನ ನಡೆಸಿ ಬಡವರ ಪರ ಕೆಲಸ ಮಾಡುಬೇಕು ಎಂಬುದನ್ನು ತಿಳಿಸಿದ್ದಾರೆ ಎಂದರು. ಸಭೆಯಲ್ಲಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು, ವಿವಿಧ ಶಾಸಕರು, ಹಾಗೂ ಜಿಲ್ಲಾ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು…
ವರದಿ. ಎಮ್, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030