ನಾಗರ ಪಂಚಮಿ ಹಬ್ಬದ ಪ್ರಯುಕ್ತವಾಗಿ ಕಕ್ಕುಪ್ಪಿ ಗ್ರಾಮದಲ್ಲಿ ಆಯೋಜಿಸಿರುವ ಕ್ರಿಕೆಟ್ ಟೂರ್ನಮೆಂಟ್…
ಕೂಡ್ಲಿಗಿ : ತಾಲೂಕಿನ ಕಕ್ಕುಪ್ಪಿ ಗ್ರಾಮದಲ್ಲಿ ನಾಗರ ಪಂಚಮಿಯ ಹಬ್ಬದ ಪ್ರಯುಕ್ತವಾಗಿ ಕೆಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು.ಪ್ರಶಾಂತ್ ಕಾಂಗ್ರೆಸ್ ಯುವ ಮುಖಂಡರು ಈ ಸಂದರ್ಭದಲ್ಲಿ ಮಾತನಾಡಿ ನಮ್ಮ ಊರಿನಲ್ಲಿ ಕ್ರೀಡೆ ಮತ್ತು ಮನೋರಂಜನ ಹಬ್ಬ ಹರಿದಿನಗಳಿಗೆ ಯಾವುದಕ್ಕೂ ಕೊರತೆ ಇಲ್ಲದಿತ್ತು. ಕೋವಿಡ್-19 ಮಹಾ ಮಾರಿಯ ರೋಗಕ್ಕೆ ಅವುಗಳೆಲ್ಲ ನಶಿಸಿಹೋಗಿತ್ತು. ಮತ್ತೆ ಪುನರಾರಂಭಿಸಿದ್ದೇವೆ ಆಟದ ಮೈದಾನದಲ್ಲಿ ಗುರಿ ಮತ್ತು ಗೆಲುವಿನ ಕಡೆ ಗಮನ ಇರಬೇಕು ಗೆಲುವು ಅಂದರೆ ಬರೀ ಗೆಲುವು ಅಲ್ಲ ಪ್ರತಿಯೊಬ್ಬರ ಮನಸ್ಸುಗಳನ್ನು ಗೆಲ್ಲುವುದು ನಿಜವಾದ ಆಟಗಾರ ಆಗುತ್ತಾನೆ.ಹಾಗೆ ಇಲ್ಲಿ ನಡೆಯುವ ಎಲ್ಲಾ ಚಟುವಟಿಕೆ ಕ್ರಮಬದ್ಧ ಗಳಿಗೆ ಯಾವುದೇ ಅಶಾಂತಿ ಉಂಟು ಮಾಡದೆ ಆಟ ಆಡಬೇಕು ಅಂತ ಕ್ರೀಡೆ ಅಭಿಮಾನಿಗಳಿಗೆ ಕಿವಿ ಮಾತು ಹೇಳುತ್ತಾ ಈ ಒಂದು ಟೂರ್ನಮೆಂಟ್ ಗೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಗೋಸಿ ಸುರೇಶ ಕಾಂಗ್ರೆಸ್ ಮುಖಂಡ ಮಾತನಾಡಿ ಇತ್ತೀಚಿಗೆ ಮೊಬೈಲ್ ಗೀಳಿನಿಂದ ಆಟ ಆಡುವ ಮನಸ್ಥಿತಿ ಕಳೆದು ಕೊಂಡಿದ್ದಾರೆ ಹಿಂದಿನ ದಿನ ಮಾನಗಳಲ್ಲಿ ಹಬ್ಬ ಹರಿದಿನ ಬಂದರೆ ಇಡೀ ಊರಿಗೆ ಊರೇ ಆಟ ಆಡಲು ಕಾತುರದಿಂದ ಕಾಯುತ್ತಿದ್ದರು ಇತ್ತೀಚಿಗೆ ಯುವಕರು ಮೊಬೈಲ್ ಹುಚ್ಚು ಜಾಸ್ತಿ ಆಗಿದೆ ಹಳ್ಳಿಗಳಲ್ಲಿ ಹಬ್ಬದ ದಿನಗಳಲ್ಲಿ ಕಣ್ಣು ಕಟ್ಟಿ ಕೊಂಡು ಹೋಗುವುದು ಗುಂಡು ಎತ್ತುವುದು ಇನ್ನು ಅನೇಕ ಆಟಗಳನ್ನು ನೋಡುವುದೇ ಒಂದು ಉತ್ಸಾಹವಾಗಿತ್ತು ಎಂದರು ಹನುಮಂತಪ್ಪ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಇವರು ಮಾತನಾಡಿ ನಾವು ಯುವಕರಾಗಿದ್ದ ಸಂದರ್ಭದಲ್ಲಿ ನಮ್ಮ ಗ್ರಾಮದಲ್ಲಿ ನಾಟಕ ಮತ್ತು ಆಟಗಳಿಗೆ ಹೆಸರುವಾಸಿಯಾಗಿತ್ತು ಕಕ್ಕುಪ್ಪಿ ಎಂದು ಹೇಳಿದರು ಈ ಸಂದರ್ಭದಲ್ಲಿ ಏಕಾಂತಪ್ಪ ಹಾಲಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಡಿ ಸುರೇಶ ಯುವ ಮುಖಂಡರು ಕಾಂಗ್ರೆಸ್. ಪ್ರಶಾಂತ. ಸಿ. ಕೆ.ಅಜ್ಜಪ್ಪ.ಕುಮ್ಮಿ. ಚಿನ್ನಾಪ್ರಪ್ಪ ಮರಳಿಸಿದ್ದಪ್ಪ ಶೆಟ್ರು. ರಮೇಶ. ಟಿ ಹನುಮಂತಪ್ಪ ಹರೀಶ ರಜಿನಿ ಕೊಟ್ರೇಶ ವೀರೇಶ ಶರಣಬಸಪ್ಪ. ಊರಿನ ಮುಖಂಡರು ಹಾಗೂ ಊರಿನ ಯುವಕರು ಹಾಗೂ ಕ್ರೀಡೆ ಅಭಿಮಾನಿಗಳು ಉಪಸ್ಥಿತರಿದ್ದರು…
ವರದಿ, ಎಮ್, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030