ಕುಡಚಿ ಸೇತುವೆ ಜಲಾವೃತ ; ಮತ್ತೆ ಬಂದೊದಗಿದ ಸಂಕಷ್ಟ
ಬೆಳಗಾವಿ : ಕೃಷ್ಣಾನದಿ ಪ್ರವಾದಹಲ್ಲಿ ಏರಿಕೆ ಕಂಡಿದ್ದು ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಸಧ್ಯ ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಗಡಿ ಭಾಗದ ಪ್ರಮುಖ ಕುಡಚಿ ಸೇತುವೆ ಜಲಾವೃತಗೊಂಡಿದೆ.
ಜಮಖಂಡಿ ನಗರದಿಂದ ಕುಡಚಿ ಮಾರ್ಗವಾಗಿ ಉಗಾರ ಹಾಗೂ ಮೀರಜ್ ಗೆ ತೆರಳುವ ಸಂಪರ್ಕ ಸೇತುವೆ ಕೃಷ್ಣಾ ನದಿ ಪ್ರವಾಹಕ್ಕೆ ಮುಳುಗಡೆಯಾದ ಹಿನ್ನಲೆಯಲ್ಲಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
ಸೋಮವಾರ ಒಂದೇ ದಿನದಲ್ಲಿ ಸುಮಾರು ಐದು ಅಡಿ ಎತ್ತರದಷ್ಟು ಕೃಷ್ಣಾ ನದಿಗೆ ನೀರು ಹರಿದು ಬಂದ ಹಿನ್ನಲೆಯಲ್ಲಿ ನದಿ ಪಾತ್ರದ ನೀರಿನ ಮೋಟಾರ್ ಮುಳುಗಿಹೋಗಿದ್ದು ರೈತರಿಗೆ ತೊಂದರೆಯಾಗಿದೆ…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030