ರೈಸ್ ಮಿಲ್ ಗಳ ವಿರುದ್ಧ ಕ್ರಮಕ್ಕೆ ವಿವಿಧ ಸಂಘಟನೆಗಳ ಒತ್ತಾಯ
ಕಾರಟಗಿ..ತಾಲೂಕಿನ ರವಿನಗರದಲ್ಲಿ ಆರು ರೈಸ್ ಮಿಲ್ ಗಳಿಂದ ಬಿಡುವ ಕಲುಷಿತ ತ್ಯಾಜ್ಯ ನೀರು ಹಾಗೂ ಧೋಳಿನಿಂದ ಜನರ ಹಾಗೂ ಮಕ್ಕಳ ಆರೋಗ್ಯ ಅದೇಗೂಡುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರವಿ ನಗರದ ಬಳಿ ಹಲವಾರು ಸಂಘಟನೆಗಳು ಗುರುವಾರ ಪ್ರತಿಭಟನೆ ಧರಣಿ ನಡೆಸಿದರು ಕರ್ನಾಟಕ ರೈತರ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ಕೊಪ್ಪಳ ಜಿಲ್ಲೆ ಹಾಗೂ ಸ್ಥಳೀಯ ಡಾ. ಬಿಆರ್ ಅಂಬೇಡ್ಕರ್ ಯುವಕ ಸಂಘ ಮಾದಿಗ ದಂಡೋರ ಸಮಿತಿ ನೀರು ಬಳಕೆದಾರರ ಸಂಘ ಕಿಂದಿ ಕ್ಯಾಂಪ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು
ಈ ಬಗ್ಗೆ ಮಾತನಾಡಿದ ಸಂಘಟನೆಗಳ ಮುಖಂಡರು ಮರ್ಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರವೀನಗರದಲ್ಲಿರುವ ಆರು ರೈಸ್ ಮಿಲ್ಗಳಿಂದ ಬರುವ ಕಲುಷಿತ ನೀರು ಮತ್ತು ಧೂಳಿನಿಂದ ಸ್ಥಳೀಯ ಜನರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಇದರಿಂದ ರವಿ ನಗರ ಮಾರುತಿ ಕ್ಯಾಂಪ್ ಕಿಂದಿ ಕ್ಯಾಂಪ್ ಮರ್ಲನಳ್ಳಿ ಗ್ರಾಮಗಳು ಬರುವ ಗ್ರಾಮಸ್ಥರಿಗೆ ಹಾಗೂ ಅಂಗನವಾಡಿ ಮತ್ತು ಶಾಲಾ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತಿದ್ದು
ನವಲಿ ಹತ್ತಿರ ರೈಸ್ ಪರ್ಕ್ ಟೆಕ್ನಾಲಜಿಯಲ್ಲಿ ಸುಮಾರು ನೂರಾರು ಎಕ್ರೆ ಪ್ರದೇಶದ ಕಾಲಿ ಜಾಗ ಇರುವುದರಿಂದ ಈ ಸ್ಥಳಕ್ಕೆ ಈ ಎಲ್ಲಾ ರೈಸ್ ಮಿಲ್ಗಳನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು ಬಳಿಕ ಸರ್ಕಾರಕ್ಕೆ ಮತ್ತು ವಿವಿಧ ಇಲಾಖೆಗೆ ಮನವಿ ಪತ್ರವನ್ನು ಪಿಐ ಸುಧೀರ್ ಎಂ ಬೆಂಕಿ ಅವರ ಮೂಲಕ ಸಲ್ಲಿಸಿದರು ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಅಧ್ಯಕ್ಷ ಶರಣಪ್ಪ ದೊಡ್ಮನಿ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ಕೊಪ್ಪಳ ಜಿಲ್ಲಾಧ್ಯಕ್ಷ ಬಿ ಶಿವನಾರಾಯಣ ಬಿಎಸ್ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮರಿಸ್ವಾಮಿ ಸೇರಿದಂತೆ ಬಿ ಸತ್ಯನಾರಾಯಣ ಹನುಮಯ್ಯ ನಾಯಕ ಫಸಲ್ ಗಣಪತಿ ನಾಗೇಶ ಸಿಂಗ್ರಿ ದೊಡ್ಡ ಭರಮಪ್ಪ ಜಗದೀಶ ಅಜಯ್ ಕುಮಾರ್ ಯಂಕಪ್ಪ ನಾಯಕ ಸೇರಿದಂತೆ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030