ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಬಣವಿಕಲ್ಲು ಗ್ರಾಮದ ಬಳಿ ಅಪಘಾತ,,,!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ 22 .1.2021. ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ*
*ತಾಲೂಕಿನ ಕಾನಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬಣವಿಕಲ್ಲು ಗ್ರಾಮದ* ಹತ್ತಿರ 21.1.2021. ರಾತ್ರಿ ಸುಮಾರು 11-15 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 50 ರಸ್ತೆಯ ಮೇಲ್ಸೇತುವೆ ಮೇಲೆ ಲಾರಿ ನಂಬರ್. M.p.09/H.g.2587 ರಾ. ಚಾಲಕ. ಪರಮಾನಂದ.21 ವರ್ಷ ಎಂಬ ಲಾರಿ ಚಾಲಕ ಮಧ್ಯಪ್ರದೇಶದ ಇಂದು ಹಿಂದೂ ರಿನಿಂದ ಆಲೂಗಡ್ಡೆಯನ್ನು ಲೋಡ್ ಮಾಡಿಕೊಂಡು ಬೆಂಗಳೂರಿಗೆ ಹೊರಟಿದ್ದ ತನ್ನ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನನಡೆವನ್ನು  ನಡೆಸಿಕೊಂಡು ಬಂದು ಕೆ.ಎ.02/ ಎ .ಜಿ4119. ರಚಾಲಕ28 ವರ್ಷ ತುಮಕೂರು ವಾಸಸ್ಥಳ ಈತನು ಲಾರಿಯಲ್ಲಿ ಕಾರ್ಪೆಂಟರ್ ಕೆಲಸಗಾರರಾದ .ಡೇವಿಡ್ ರಫೀಕ್. ಬಾಷಾ .ಪೀಟರ್ ಹೇಮಂತ್ .ಕುಮಾರ ರವರೊಂದಿಗೆ ಲಾರಿಯಲ್ಲಿ ಟೇಬಲ್ ಡಬಲ್ ಕಾಟ್ ಗಳನ್ನು ಲೋಡ್ ಮಾಡಿಕೊಂಡು ಬೆಂಗಳೂರಿನಿಂದ ಬಿಜಾಪುರ ಜಿಲ್ಲೆಯ ಸಿಂದಗಿ ಪಟ್ಟಣಕ್ಕೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಲಾರಿ ನಂಬರ್ .ಕೆ .ಎ.02 ಏ.ಜಿ.4119 ರ ಚಾಲಕ ಚಿನ್ನ ಲಾರಿಯಲ್ಲಿ ಸಿಕ್ಕಿಕೊಂಡು ಮೃತಪಟ್ಟಿದ್ದು. ಇನ್ನುಳಿದ ಲಾರಿಯಲ್ಲಿದ್ದ ನಾಲ್ಕು ಜನರಿಗೆ ಗಾಯಗಳಾಗಿದ್ದು ಹಾಗೂ ಅಪಘಾತ ಮಾಡಿದ ಲಾರಿ ಚಾಲಕ ಪರಮಾನಂದ ನಿಗೆ ಗಾಯಗಳಾಗಿದ್ದು ಗಾಯಗೊಂಡವರ ಪೈಕಿ ಪರಮನಂದ ಪೀಟರ್ ಹೇಮಂತ ಇವರನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕೊಟ್ಟೂರು ಸರ್ಕಲ್ ಇನ್ಸ್ಪೆಕ್ಟರ್ ದೊಡ್ಡಣ್ಣ ನವರು ಹಾಗೂ ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ನಾಗರಾಜ್ ರವರು ಹಾಗೂ ಸಿಬ್ಬಂದಿ. ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಗಾಯಾಳುಗಳನ್ನು ಕಳುಹಿಸಿಕೊಟ್ಟರು. ನಂತರ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಪಘಾತದ ಬಗ್ಗೆ ಮೃತನ ಕಡೆಯಿಂದ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ….

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *