ಅಧಿವೇಶನ ನಡುವೆಯೂ ಬಾಣಂತಿಯರ ಕುಟುಂಬಕ್ಕೆ ತೆರಳಿ 5 ಲಕ್ಷ ಪರಿಹಾರ ಚೆಕ್ ವಿತರಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಪಟ್ಟಣದ ಆಜಾದ್ ನಗರದ ಬಾಣಂತಿಯಾದ ಸುಮಯಾ ಬಾನು( 23) ಗಂಡ ಅಬ್ದುಲ್ ರೆಹಮಾನ್ ಅವರು ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ದಿ; 05-12-2024 ರಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ಸುಮಯಾ ಬಾನು ಅವರು ದಿ; 11-11-2024 ರಂದು ಗಂಡು ಮಗುವಿಗೆ(ಒಂದು ತಿಂಗಳು) ಜನ್ಮ ನೀಡಿದರು.
ಆ ಹಿನ್ನೆಲೆಯಲ್ಲಿ, ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್.ಟಿ. ಅವರು ಮತ್ತು ಆರೋಗ್ಯ ಇಲಾಖೆಯ ಸನ್ಮಾನ್ಯ ಸಚಿವರಾದ ಶ್ರೀಯುತ ದಿನೇಶ ಗುಂಡೂರಾವ್ ಅವರು, ದಿ; 07-12-2024 ರಂದು ಬಾಣಂತಿಯರ ಕುಟುಂಬಗಳಿಗೆ ಸಾಂತ್ವಾನ ಹೇಳಲು ಭೇಟಿ ನೀಡಿದ ಸಂದರ್ಭದಲ್ಲಿ , ಕುಟುಂಬಸ್ಥರ ಜೊತೆಗೆ ಮಾತನಾಡಿ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಸುದ್ದಿ ಮುಟ್ಟಿಸಿ, ಸರ್ಕಾರದೊಂದಿಗೆ ಚರ್ಚಿಸಿ, ಪರಿಹಾರವನ್ನು ಹೆಚ್ಚಿಸುವುದಾಗಿ ಹೇಳಿದರು. ಅದರಂತೆ, ಕೊಟ್ಟ ಮಾತಿನಂತೆ ಇಂದು, ಸರ್ಕಾರದಿಂದ 5 ಲಕ್ಷ ರೂಪಾಯಿಗಳನ್ನು ಪರಿಹಾರ ಕೊಟ್ಟಿರುವುದರಿಂದ, ಶಾಸಕರು, ಬೆಳಗಾವಿ ವಿಧಾನ ಮಂಡಳದ ಚಳಿಗಾಲ ಅಧಿವೇಶನದ ನಡುವೆಯೂ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರ ಜೊತೆಗೆ ತೆರಳಿ ಸುಮಯಾ ಬಾನು ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಚೆಕ್ ವಿತರಿಸಿ ಧೈರ್ಯ ತುಂಬುವ ಕೆಲಸವನ್ನು ಮಾಡಿದರು. ಹಾಗೆಯೇ, ಇದೇ ವೇಳೆ ಮಗುವಿನ ಆರೋಗ್ಯ ಮತ್ತು ಪೋಷಣೆ ಕಡೆ ಗಮನ ಕೊಡಲು, ಶಾಸಕರು ಸಲಹೆ ನೀಡಿದರು.
ಪಟ್ಟಣ ಪಂಚಾಯತಿ ಸದಸ್ಯರಾದ ಸಯ್ಯದ್ ಶೂಕರ್ ಅವರು, ಮುಖಂಡರಾದ ಲಾಯರ್ ಬಷಿರ್, ಮಾದಿಹಳ್ಳಿ ನಜೀರ್, ಇನಾಯತ್ ಇಲಿಯಾಸ್, ಅಬ್ದುಲ್ , ಬ್ಯಾಂಕ್ ಶಪಿ, ಜಯಮ್ಮನವರ ರಾಘವೇಂದ್ರ, ಶಫಿ ಉಲ್ಲ, ಅನ್ನಾನ್ ಶಫಿ ರಫಿಕ್, ದಾದು, ಇಬಾದುಲ್, ಚಾಂದು ಭಾಷಾ, ಮುನ್ನಾ, ಬಣವಿಕಲ್ಲು ಪ್ರಶಾಂತ ಗೌಡ, ಶಿವಪುರ ರಾಜಣ್ಣ, ಕಾಟೇರ ಲಂಕೇಶ, ಕಡ್ಡಿ ಮಂಜುನಾಥ, ಲಕ್ಷ್ಮೀದೇವಿ, ಪತ್ರಕರ್ತರು, ಹಿರಿಯರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಅನಿಲ್ ಹುಲಿಕುಂಟೆ, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030