ಶ್ರೀ ಶರಣಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ; ಕ್ಷೇತ್ರ ಮತ್ತು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ – ತಮ್ಮಣ್ಣ ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಕಾನಾಮಡಗು ಗ್ರಾಮದ ಶ್ರೀ ಶರಣ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ. ಅವರ ಪರವಾಗಿ, ತಮ್ಮ ಸಹೋದರರು ಮತ್ತು ಸಮಾಜ ಸೇವಕರಾದ ಶ್ರೀಯುತ ತಮ್ಮಣ್ಣ ಎನ್. ಟಿ. ಅವರು ದಿ; 10-12-2024 ರಂದು ಮುಖಂಡರೊಂದಿಗೆ ತೆರಳಿ ಭಕ್ತಿ- ಭಾವನೆಯಿಂದ ರಥೋತ್ಸವಕ್ಕೆ ಹೂವು, ಹಣ್ಣು ಅರ್ಪಿಸಿ, ಕ್ಷೇತ್ರ ಮತ್ತು ನಾಡಿನ ಜನತೆಯ ಒಳಿತಿಗಾಗಿ ಸುಖ, ಆರೋಗ್ಯ ಮತ್ತು ಸಮೃದ್ಧಿ ಸಿಗಲಿ ಎಂದೂ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ಇದೇ ವೇಳೆ, ಶ್ರೀಗಳಾದ ಐಮುಡಿ ಶರಣಾರ್ಯರ ಆಶೀರ್ವಾದ ಪಡೆದ ತಮ್ಮಣ್ಣ ಎನ್. ಟಿ ಅವರು, ಶ್ರೀ ಶರಣ ಬಸವೇಶ್ವರಸ್ವಾಮಿ ಮಠದಿಂದ ಅನ್ನ ಮತ್ತು ಅಕ್ಷರ ದಾಸೋಹ ನಡೆಸಿ, ಪ್ರಸಿದ್ಧಿಯಾಗಿರುವುದನ್ನು ನೆನಪಿಸಿಕೊಂಡು ಹೆಮ್ಮೆ ಪಟ್ಟರು. ಸಾಮಾಜಿಕ ನಾಟಕ ಕಲೆಯ ಪ್ರೋತ್ಸಾಹಕ್ಕಾಗಿ ಧನ ಸಹಾಯ ಮಾಡಿದರು. ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ಯೋಗ – ಕ್ಷೇಮ ವಿಚಾರಿಸಿದರು. ಮಾಜಿ ತಾ.ಪಂ. ಸದಸ್ಯರಾದ ಪಾಪನಾಯಕ, ಪೂಜಾರಹಳ್ಳಿ ಗ್ರಾ. ಪಂ. ಅಧ್ಯಕ್ಷರಾದ ವೆಂಕಟೇಶ ನಾಯ್ಕ, ಓಂಕಾರಿ ನಾಯ್ಕ, ದುಗ್ಗಪ್ಪ, ಲಕ್ಕಜ್ಜಿ ಮಲ್ಲಿಕಾರ್ಜುನ, ಕೌವಲಪ್ಪ, ತಳವಾರ ಶರಣಪ್ಪ, ವೆಂಕಟೇಶ, ವೆಂಕಟೇಶ, ನಾಗರಾಜ, ದಿನೇಶ, ಪಾಲಕ್ಷಿ ಹಾಗೂ ಗ್ರಾಮಸ್ಥರು, ಭಕ್ತರು, ಉಪಸ್ಥಿತರಿದ್ದರು.
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030