ಚಿಕ್ಕಕೆರೆಯಾಗಿನಹಳ್ಳಿ ಯಲ್ಲಿ ಭಾರತ ಕಂಡ ಮಹಾನ್ ವ್ಯಕ್ತಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ 68ನೇ ಪುಣ್ಯಸ್ಮರಣೆ
ವಿಜಯ ನಗರ ಜಿಲ್ಲೆ ಸಂಡೂರು ತಾಲೂಕಿನ ಚಿಕ್ಕಕೆರೆಯಾಗಿನ ಹಳ್ಳಿ ಯಲ್ಲಿ
ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ 68ನೇ ಪುಣ್ಯಸ್ಮರಣೆಯನ್ನು ಅಂಬೇಡ್ಕರ್ ಅವರ ನಾಮಫಲಕ್ಕೆ ಪುಷ್ಪಾರ್ಚನೆ , ಪೂಜೆ ಮಾಡಿ ಕ್ಯಾಂಡಲ್ ಹಿಡಿದು ನಮನ ಸಲ್ಲಿಸಿದರು
ಡಾ. ಬಿ ಆರ್ ಅಂಬೇಡ್ಕರ್ ಅವರ ಚಿಂತನೆಗಳಿಂದ ನಮಗೆಲ್ಲರಿಗೂ ಕೂಡ ಸ್ಫೂರ್ತಿಯ ನೆಲೆ, ಆದರ್ಶ ವ್ಯಕ್ತಿ. ಅಸಮಾನತೆ ವಿರುದ್ಧ ಗಟ್ಟಿ ಧ್ವನಿಯೆತ್ತಿದ ಮಾನವತಾವಾದಿ. ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾಕರಾಗಿ ಈ ಸಮಾಜಕ್ಕೆ ನೀಡಿದ ಕೊಡುಗಗಳು ಅಗಾಧವಾದದ್ದು. ಡಿಸೆಂಬರ್ 6 ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಪುಣ್ಯ ತಿಥಿ. ಈ ದಿನವನ್ನು ‘ಮಹಾಪರಿನಿರ್ವಾಣ ದಿನ’ವನ್ನಾಗಿ ಆಚರಿಸಲಾಗುತ್ತಿದ್ದು,ಭಾರತ ಕಂಡ ಮಹಾನ್ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್. ಯುವ ಸಮುದಾಯಕ್ಕೆ ತನ್ನ ಚಿಂತನೆಗಳಿಂದಲೇ ಸ್ಫೂರ್ತಿ ಹಾಗೂ ಆದರ್ಶ ವ್ಯಕ್ತಿಯೆನಿಸಿಕೊಂಡಿದ್ದಾರೆ. ಸಮಾಜ ಸುಧಾರಕರಾಗಿದ್ದು, ದಲಿತ ಬೌದ್ಧ ಚಳುವಳಿಯನ್ನು ಮುನ್ನಡೆಸುವ ಮೂಲಕ ಪ್ರೇರಣೆಯಾದ ವ್ಯಕ್ತಿಯಾಗಿದ್ದಾರೆ. ಅದಲ್ಲದೇ, ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ದಲಿತ ಕುಟುಂದಲ್ಲಿ ಜನಿಸಿದ್ದರಿಂದ ಅಸ್ಪೃಶ್ಯತೆ ನೋವು ಮಾತ್ರ ಇವರನ್ನು ಬಿಡಲಿಲ್ಲ. ಹೀಗಾಗಿ ಅಂಬೇಡ್ಕರ್ ಅವರು ಮಹಿಳೆಯರು ಹಕ್ಕುಗಳು, ಶೋಷಿತ ವರ್ಗಗಳ ಹಕ್ಕಿಗಾಗಿ ಹೋರಾಡಿದ ಮಹಾನ್ ವ್ಯಕ್ತಿ. ಡಿಸೆಂಬರ್ 6 ರಂದು ಅಂಬೇಡ್ಕರ್ ಅವರ ಪುಣ್ಯ ತಿಥಿಯಾಗಿದ್ದು, ಈ ದಿನವನ್ನು ಮಹಾಪರಿನಿರ್ವಾಣ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭ ದಲ್ಲಿ ಚಿಕ್ಕ ಕೆರೆಯಾಗಿನಹಳ್ಳಿ ಗ್ರಾಮದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳಾದ ಮರಿಯಪ್ಪ, ದುರುಗೇಶ್ ಎ ಕೆ.,ಮಹೇಂದ್ರ , ಎಸ್.ದುರುಗೇಶ್, ಕೆ.ಕಲ್ಲಪ್ಪ , ಪಿ.ಚಿನ್ನಪ್ರಪ್ಪ, ಎಚ್ ಪಿ ಮರಿಯಪ್ಪ, ಎನ್. ಮಂಜುನಾಥ , ಕುಮಾರಸ್ವಾಮಿ, ನೀರ ಕಲ್ಲಪ್ಪ , ಕೆಬಿ ದುರುಗೇಶ್, ಪಿ ಕಲ್ಲಪ್ಪ ಪೂಜಾರಿ, ಎಂ ರಮೇಶ್, ಅಜಿತ್, ಸುರೇಶ್, ಯಶ್, ಗಣೇಶ್, ಎಸ್. ದುರ್ಗೇಶ್, ಉಮೇಶ್, ಪಾಂಡು ಹಾಗೂ ದಲಿತ ಮುಖಂಡರು ಊರಿನ ಗ್ರಾಮಸ್ಥರು ಜೈ ಭೀಮ್ ಬಂಧುಗಳು ಹಾಗೂ ಉಪಸ್ಥಿತರಿದ್ದರು..
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030