ಗುಡೇಕೋಟೆ ಐಟಿಐ ಕಾಲೇಜು ಕಾಮಗಾರಿಗೆ ಚಾಲನೆ ನೀಡಿದ ಶಾಸಕ- ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಗುಡೇಕೋಟೆ ಗ್ರಾಮದಲ್ಲಿ ದಿ; 03-12-2024 ರಂದು ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ( ಐಟಿಐ), ಕ್ಯಾಂಟೀನ್ ನೂತನ ಕಟ್ಟಡಗಳು( 13.00 ಕೋಟಿಗಳು), ಹಾಗೂ ಸರ್ಕಾರಿ ಪ್ರೌಢ ಶಾಲೆ ಮತ್ತು ಸರ್ಕಾರಿ ಹಿ.ಪ್ರಾ. ಶಾಲೆಗಳಿಗೆ( 26 ) ಭೌತಿಕ ಮೂಲಭೂತ ಸೌಲಭ್ಯಗಳ ಘಟಕದಡಿ ಮೂಲಭೂತ ಸೌಲಭ್ಯಗಳನ್ನು ( ಅತೀ ಅವಶ್ಯಕ) ಒದಗಿಸುವ ಕಾಮಗಾರಿಗಳಿಗೆ ಶಾಲಾ ಕೊಠಡಿಗಳ( 150 ಲಕ್ಷಗಳು) ಉನ್ನತಿಕರಣಕ್ಕಾಗಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಭೂಮಿಪೂಜೆಯನ್ನು ನೆರವೇರಿಸಿದರು.
ಪ್ರಾದೇಶಿಕವಾಗಿ ಅಸಮಾನತೆಯನ್ನು ಹೋಗಲಾಡಿಸಲು ಗುಡೇಕೋಟೆ ಭಾಗದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದ ಬಹುತೇಕ ಇಲ್ಲಿನ ಮುಖಂಡರು ಮತ್ತು ಹಿರಿಯರ ಬೇಡಿಕೆಯಂತೆ ಬಹುದಿನಗಳಿಂದ ನಮ್ಮ ಭಾಗದ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂಬ ಮನವಿಯನ್ನು ಗಮನದಲ್ಲಿಟ್ಟುಕೊಂಡು ನಿರಂತರವಾಗಿ ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚಿಸಿ, ಇಂತಹ ಮಹತ್ವದ ಕಾಮಗಾರಿಯನ್ನು ಕೈಗೊಳ್ಳಲಾಯಿತು ಎಂದೂ ಹೇಳಿದರು. ಹೀಗಾಗಿ ಇಲ್ಲಿನ ಬಹುತೇಕ ಮುಖಂಡರು ಅಭಿವೃದ್ಧಿ ಪರವಾಗಿದ್ದು, ಸರ್ವ ರೀತಿಯಲ್ಲಿ ತಮಗೆ ಸಹಕಾರ ಕೊಡುತ್ತಾರೆ. ಆದ್ದರಿಂದ, ತಾವು ಸುಸಜ್ಜಿತವಾದ ಮತ್ತು ಗುಣಮಟ್ಟದ ಕಟ್ಟಡವನ್ನು ನಿರ್ಮಿಸಬೇಕು ಎಂದೂ ಶಾಸಕರು ಗುತ್ತಿಗೆದಾರರಿಗೆ ಸೂಚಿಸಿದರು. ಅದರ ಜೊತೆಗೆ ಆಯಾ ಹಳ್ಳಿಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅಭಿವೃದ್ಧಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಭೂಮಿಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷರಾದ ಕೃಷ್ಣ, ಸಿಪಿಐ ಸುರೇಶ ತಳವಾರ ಮತ್ತು ಎ.ಎಸ್. ಐ. ಫಕ್ರದ್ದೀನ್ , ಸಿಬ್ಬಂದಿ ವರ್ಗ, ಐಟಿಐ ಕಾಲೇಜು ಪ್ರಾಂಶುಪಾಲರು ವಿರೇಂದ್ರ ಮೂರ್ತಿ ಮತ್ತು ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಮುಖಂಡರಾದ ತಮ್ಮಣ್ಣ ಎನ್.ವಿ, ರಾಘು ಸ್ವಾಮಿ, ಪೇಯಿಂಟ್ ತಿಪ್ಪೇಸ್ವಾಮಿ, ಉಮೇಶ್ ನಾಯ್ಕ, ಬಾಸ್ಕರ್ ನಾಯ್ಕ, ಪಂಪನಾಯ್ಕ, ಕೃಷ್ಣಣ್ಣ, ಶಿವರಾಜ ದೊರೆ, ಕೆ.ಇಬಿ ಗೋವಿಂದಪ್ಪ, ಅಮರೇಶ ನಾಯಕ, ಪ್ರಭುಗೌಡ, ಬಂಗಾಳಿ ಓಬಣ್ಣ, ನಾರಾಯಣಪ್ಪ, ಹಾಲಸಾಗರ ಸಣ್ಣ ತಿಪ್ಪೇಸ್ವಾಮಿ ಹಾಗೂ ಮಾರೇಶ್,
ಸಿದ್ದಾಪುರ ಹನುಮಂತ, ಗುಣಸಾಗರ ಕೊಟ್ರೇಶ, ಹೊಸಹಟ್ಟಿ ಮಹೇಶ, ಸಿಡೇಗಲ್ಲು ಕಾಮತ್, ಹೆಚ್. ಓಬಯ್ಯ, ಕೃಷ್ಣಪ್ಪ, ಜಿ. ಬಸವರಾಜ, ಬೊಮ್ಮಣ್ಣ, ಲತೀಪ್, ಮುಖ್ಯ ಗುರುಗಳು ಪಾಂಡುರಂಗಪ್ಪ ಮತ್ತು ಸಿಬ್ಬಂದಿ ವರ್ಗ, ಸಾರ್ವಜನಿಕರು ಉಪಸ್ಥಿತರಿದ್ದರು…
ವರದಿ, ಅನಿಲ್ ಕುಮಾರ್, ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030