ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು” ಸೇರುವಂತೆ ಸಂಡೂರಿನ ಒಂದು ಸೋಲು ಸಾವಿರ ಸಾವಿರ ಕಾರ್ಯಕರ್ತರನ್ನು ಒಗ್ಗೂಡಿಸಿದೆ…!!!

“ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು” ಸೇರುವಂತೆ ಸಂಡೂರಿನ ಒಂದು ಸೋಲು ಸಾವಿರ ಸಾವಿರ ಕಾರ್ಯಕರ್ತರನ್ನು ಒಗ್ಗೂಡಿಸಿದೆ.

“ಸೋಲೇ ಗೆಲುವಿನ ಮೆಟ್ಟಿಲು” ಎನ್ನುವಂತೆ
ಸೋಲು ಪ್ರತಿಯೊಬ್ಬ ಕಾರ್ಯಕರ್ತನಿಗೂ ಹೊಸ ಶಕ್ತಿ ಮತ್ತು ಉತ್ಸಾಹವನ್ನು ನೀಡಿ ಮತ್ತೆ ಪುಟಿದೆಳಲು ಸ್ಫೂರ್ತಿ ನೀಡಿರುವುದಂತೂ ಸತ್ಯ!!

ಇಂದು ಸಂಡೂರು ವಿಧಾನಸಭಾ ಕ್ಷೇತ್ರದ ವಂಡರ್ ವ್ಯಾಲಿ ರೆಸಾರ್ಟ್ ನಲ್ಲಿ ಉಪಚುನಾವಣೆಯ ಆತ್ಮಾವಲೋಕನ ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಣೆ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಮಾರ್ಗದರ್ಶಕರು ಹಾಗೂ ಶಾಸಕರಾದ ಸನ್ಮಾನ್ಯ ಶ್ರೀ ಗಾಲಿ ಜನಾರ್ಧನ್ ರೆಡ್ಡಿ ಅಣ್ಣನವರು, ಜಿಲ್ಲಾಧ್ಯಕ್ಷರಾದ ಶ್ರೀ ಅನಿಲ ನಾಯ್ದು,ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ ಎಸ್ ನವೀನ್, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಕೆ ಎಸ್ ದಿವಾಕರ್, ಶ್ರೀ ಜಿ. ಟಿ. ಪಂಪಾಪತಿ ಸೇರಿದಂತೆ ಪಕ್ಷದ ಪ್ರಮುಖರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂಡೂರಿನ ಅಭಿವೃದ್ಧಿಗಾಗಿ ಸದಾ ನಿಮ್ಮೊಂದಿಗೆ ನಿಲ್ಲುತ್ತೇನೆ.ಸೋತ ಜಾಗದಲ್ಲೇ ಮತ್ತೆ ಗೆದ್ದು ನಿಮ್ಮ ಸೇವೆಗೆ ಅಣಿಯಾಗುತ್ತೇನೆ.ತಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಎಂದೆಂದಿಗೂ ಆಭಾರಿಯಾಗಿರುತ್ತೇನೆ.

ನಿಮ್ಮ ಮನೆಮಗ,

ಬಂಗಾರ ಹನುಮಂತ
ಸಂಡೂರು ವಿಧಾನಸಭಾ ಕ್ಷೇತ್ರ.

ವರದಿ: ಅನಿಲ್ ಕುಮಾರ್ ಹುಲಿಕುಂಟೆ.

Leave a Reply

Your email address will not be published. Required fields are marked *