ಶಿಕ್ಷಣಕ್ಷೇತ್ರದಲ್ಲಿ ಸಾಧನೆ ಮಾಡಿ ಪಿ ಎಚ್ ಡಿ ಯಲ್ಲಿ ಪದವಿ ಪಡೆದ ಭೀಮಸಮುದ್ರ ಗ್ರಾಮದ ಮೆಗಳಮನೆ ವಿರೂಪಾಕ್ಷಪ್ಪ
ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಭೀಮಸಮುದ್ರ ಗ್ರಾಮದ ಮೆಗಳಮನೆ ವಿರೂಪಾಕ್ಷಪ್ಪ ಗೆ ದಿನಾಂಕ: 28/11/2024 ರಂದು ಹಂಪಿ ವಿಶ್ವ ವಿದ್ಯಾಲಯ ಪ್ರಾಚೀನ ಪುರಾತತ್ವ ವಿಭಾಗದಿಂದ ಡಾಕ್ಟರೇಟ್( ಪಿ ಎಚ್ ಡಿ ಪದವಿ)ಘೋಷಣೆ ಮಾಡಿದ್ದು ನನಗೂ ನನ್ನ ಕುಟುಂಬಕ್ಕೂ ಸಂತಸ ತಂದಿದೆ ಕನ್ನಡ ವಿಶ್ವವಿದ್ಯಾಲಯ ಪ್ರಾಚೀನ ಇತಿಹಾಸ ಮತ್ತು ಪುರತತ್ವ ಅಧ್ಯಯನ ವಿಭಾಗದಲ್ಲಿ ನಿರ್ವಹಿಸಿದ ಪಿ ಎಚ್ ಡಿ ಮೌಕಿಕ ಪರೀಕ್ಷೆಯಲ್ಲಿ ಮಹಾಪ್ರಬಂಧದ ಫಲಿತಗಳನ್ನು ಪಿ ಎಚ್ ಡಿ ಅಧ್ಯಯನ ಸಮಿತಿಯ ಮುಂದೆ ಮಂಡಿಸಲಾಯಿತು. ಸಮಾಜ ವಿಜ್ಞಾನದ ನಿಕಾಯ ದೀನರು ನನಗೆ ಅಧಿಕೃತವಾಗಿ ಪಿ ಎಚ್ ಡಿ ಪದವಿಯನ್ನು ಘೋಷಿಸಿದ್ದಾರೆ ಈ ಪದವಿ ಗಳಿಸಲು ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ ಕನ್ನಡ ವಿಶ್ವವಿದ್ಯಾಲಯಕ್ಕೆ ಸಹಕರಿಸಿದ ಮಾರ್ಗದರ್ಶಕರಾದ ಡಾಕ್ಟರ್ ರಾಕೇಶ್ ಬಿ ಸಿ ಅವರಿಗೂ ವಿಭಾಗದ ಹಿರಿಯ ಪ್ರಾಧ್ಯಾಪಕರು ಗಳಾದ ಪ್ರೊಫೆಸರ್ ಸಿ ಮಹದೇವ, ಪ್ರೊಫೆಸರ್ ಸಿಎಸ್ ವಾಸುದೇವನ್, ಪ್ರೊಫೆಸರ್ ವಾಸುದೇವ ಬಡಿಗೇರ, ಪ್ರೊಫೆಸರ್ ರಮೇಶ್ ನಾಯಕ, ಪ್ರೊಫೆಸರ್ ಎಸ್ ವೈ ಸೋಮಶೇಖರ್ ಡಾಕ್ಟರ್ ತಿಪ್ಪೇಸ್ವಾಮಿ ಎಚ್, ಸಹ ಪ್ರಾಧ್ಯಾಪಕರು ವಿ ಎಸ್ ಕೆ ಯು ಬಳ್ಳಾರಿ ಹಾಗೂ ನನ್ನ ವಿದ್ಯಾಭ್ಯಾಸಕ್ಕೆ ಸದಾ ಪ್ರೋತ್ಸಾಹ ನೀಡುತ್ತಿರುವ ವಿಜಯವಾಣಿ ವರದಿಗಾರರಾದ ರಂಗನಾಥ್ ಎಂ ಭೀಮಸಮುದ್ರ ಇವರಿಗೂ ಹಾಗೂ ನನ್ನ ಎಲ್ಲಾ ಸ್ನೇಹಿತರಿಗೂ ನನ್ನ ಕುಟುಂಬದವರಾದ ನನ್ನ ತಂದೆ ಹನುಮಂತಪ್ಪ,ತಾಯಿ ದಿವಂಗತ ದುರುಗಮ್ಮ, ಹಾಗೂ ನನ್ನ ಅಜ್ಜ ಅಜ್ಜಿಯರಾದ ಮೆಗಳಾಮನೆ ದಿ!! ಹನುಮಂತಪ್ಪ, ಮಾರಮ್ಮ, ಚಿಕ್ಕಪ್ಪ, ಚಿಕ್ಕಮಂದಿರುಗಳಾದ ಜಗನ್ನಾಥ ಹನುಮಕ್ಕ, ಹಂಪಣ್ಣ ರೂಪ, ಗಿರೀಶ್ ಗೀತಾ,ಸಹೋದರ ಸಹೋದರಿಯರಾದ ಅನಿಲ್ ಹೆಚ್, ಪ್ರಸನ್ನಕುಮಾರ ಎಂ, ಶಶಿಧರ,ಪ್ರಕಾಶ್, ಅಂಜಿನಿಮೂರ್ತಿ, ಹರ್ಷವರ್ಧನ್, ದೀಕ್ಷಾ, ನಂದಿನಿ, ಅಂಜಿನಮ್ಮ,ಶಿಲ್ಪ, ನಿರ್ಮಿತ, ವೈಷ್ಣವಿ,ಅಳಿಯ ಸೊಸೆಯರಾದ ಶ್ಯಾಮಲ ,ಜೀವಿತ ,ಪ್ರವೀಣ ಅತ್ತೆ ಮಾವರಾದ ಹನುಮಕ್ಕ ಸಿದ್ದಪ್ಪ, ಅಂಜಿನಪ್ಪ ಮಮತ ಇವರಿಗೆ ಹೃದಯ ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ…
ವರದಿ: ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030