ಅಧಿಕಾರ ಮುಖ್ಯ ಅಲ್ಲ. ಏನು ಮಾಡಿದೆ ಅನ್ನುವುದು ಮುಖ್ಯ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿರುವ 2024 -29 ರ ಅವಧಿಯ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 29-11-2024 ರಂದು ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ, ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ,
ಸಭೆಗೆ ತಡವಾಗಿ ಬಂದಿದ್ದಕ್ಕೆ ಕೆಲವೊಂದು ಕಾರಣವಿದೆ ಎಂದರು. ನಮ್ಮ ಕ್ಷೇತ್ರದಲ್ಲಿ ಸಾಲ ಮಾಡಿ ಮದುವೆ ಮಾಡುವಂತಹ ಬಡವರು ಮತ್ತು ಕಡುಬಡವರು ಇದ್ದಾರೆ. ಮದುವೆ ಮಾಡುವಷ್ಟು ತೋರಿಸುವ ಉತ್ಸಾಹ, ತಾಯಿ ಮತ್ತು ಮಗುವಿನ ಹಾರೈಕೆಗೆ ಪ್ರಾಮುಖ್ಯತೆ ಕೊಡುತ್ತಿಲ್ಲ ಎಂಬ ಬೇಸರವನ್ನು ವ್ಯಕ್ತಪಡಿಸಿದರು.
ಕಾರಣ, ಇತ್ತೀಚೆಗೆ ಚಂದ್ರಶೇಖರ ಪುರದಲ್ಲಿ ನಡೆದ ಬಾಣಂತಿಯ ಸಾವಿನ ಘಟನೆಯನ್ನು ನೆನಪಿಸಿಕೊಂಡು ಮತ್ತೇ, ಇಂತಹ ಘಟನೆಗಳು ಮರುಕಳಸದಂತೆ ನೋಡಿಕೊಳ್ಳಲು ಪ್ರತಿಯೊಬ್ಬರಲ್ಲಿ ಜವಾಬ್ದಾರಿ ಬರಬೇಕು ಎಂದೂ ಒತ್ತಿ ಹೇಳಿದರು.
ನೌಕರರ ಸಂಘದಿಂದ ಚುನಾವಣೆಯನ್ನು ಬಯಸದೇ, ಸಾಮಾಜಿಕ ನ್ಯಾಯದಡಿ ಹೊಸದಾಗಿ ಅವಿರೋಧವಾಗಿ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ,
ಸದಸ್ಯರ ಆದಿಯಾಗಿ ಆಯ್ಕೆ ಯಾದದ್ದು ಇತರರಿಗೂ ಒಂದು ಮಾದರಿಯಾದದ್ದು ಎಂದರು.
ನಮ್ಮ ಕೂಡ್ಲಿಗಿ ಕ್ಷೇತ್ರದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಬಗ್ಗೆ ನನ್ನಲ್ಲಿ ವಿಶೇಷ ಕಾಳಜಿ ಮತ್ತು ಕಳಕಳಿ ಇದೆ. ಆ ಹಿನ್ನೆಲೆಯಲ್ಲಿ, ಅಧಿಕಾರ ಎಷ್ಟು ದಿನ ಎಂಬುದು ಮುಖ್ಯ ವಲ್ಲ. ಏನು ಮಾಡಿದೆ ಅನ್ನುವುದು ಮುಖ್ಯವಾಗಬೇಕು. ಆ ನಿಟ್ಟಿನಲ್ಲಿ ನಾನು ಚಿಂತನೆ ಮಾಡುತ್ತೇನೆ ಎಂದೂ ಹೊಸದಾಗಿ ಆಯ್ಕೆಯಾದ ನೌಕರರ ಸಂಘದ ಅಧ್ಯಕ್ಷರು ಮತ್ತು ಸದಸ್ಯರಿಗೆ ಕಿವಿ ಮಾತನ್ನು ಸೂಚ್ಯವಾಗಿ ಹೇಳಿದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರರಾದ ನೇತ್ರಾವತಿ,
ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀ ಕಾವಲಿ ಶಿವಪ್ಪನಾಯಕ, ನೌಕರರ ಸಂಘದ ಅಧ್ಯಕ್ಷರಾದ ವೆಂಕಟೇಶ .ಟಿ. ಪಿ. ಹಾಗೂ ವಿವಿಧ ಪದಾಧಿಕಾರಿಗಳು, ಇನ್ನೂ ಹಲವಾರು ಗಣ್ಯಮಾನ್ಯರು ಉಪಸ್ಥಿತರಿದ್ದರು…
ವರದಿ. ಅನಿಲ್ ಕುಮಾರ್ ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030