ಆರು ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದಲ್ಲಿ ಬಣವಿಕಲ್ಲು ಗ್ರಾಮದ ಎನ್. ಹೆಚ್ – 50 ರಿಂದ ಉಲ್ಲಾನಹಳ್ಳಿ, ಚಿಕೋಬನಹಳ್ಳಿ, ಕಂಚೋಬನಹಳ್ಳಿ, ಮಾಡ್ಲಾಕನಹಳ್ಳಿ, ಕಡೇಕೊಳ, ಮಾಕನಡಕು, ಚಿಕ್ಕಜೋಗಿಹಳ್ಳಿಯ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಭೂಮಿಪೂಜೆ(600 ಲಕ್ಷಗಳು)ಯನ್ನು ದಿ; 29-11-2024 ರಂದು ಬಣವಿಕಲ್ಲುನಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ನೆರವೇರಿಸಿದರು
ಬಳಿಕ ಮಾತನಾಡಿ, ಪ್ರತಿ ಹಳ್ಳಿ ಸುತ್ತುವ ವೇಳೆ ಜನರ ಬಹುಬೇಡಿಕೆಯಂತೆ ರಸ್ತೆ ಕಲ್ಪಿಸಿ ಕೊಡುವಂತೆ ಮನವಿ ಮಾಡಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸನ್ಮಾನ್ಯ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಇಲ್ಲಿನ ರಸ್ತೆಯ ಸಮಸ್ಯೆಯ ಪೋಟೋ, ವಿಡಿಯೋ ಮತ್ತು ಜನರ ಅಭಿಪ್ರಾಯಗಳನ್ನು ಆಧರಿಸಿ ಅವರ ಗಮನಕ್ಕೆ ತಂದು ಚರ್ಚಿಸಿ, ಕೂಡಲೇ ಇಲ್ಲಿ ರಸ್ತೆಯನ್ನು ತಂದು, ಇಲ್ಲಿನ ಜನರಿಗೆ ಸುರಕ್ಷಿತವಾದ ರಸ್ತೆಯನ್ನು ಕಲ್ಪಿಸಿಕೊಡಲು ಇವತ್ತು ಭೂಮಿಪೂಜೆಯನ್ನು ನೆರವೇರಿಸಲಾಯಿತು ಎಂದರು. ಈ ವೇಳೆ ಗ್ರಾ. ಪಂ. ಪಿಡಿಒ, ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಮತ್ತು ಮುಖಂಡರು ಉಪಸ್ಥಿತರಿದ್ದರು…
ವರದಿ.ಅನಿಲ್ ಕುಮಾರ್, ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030