ಹುಲಿಕುಂಟೆ: ಸಂವಿಧಾನ ಸಮರ್ಪಣ ದಿನದ ಆಚರಣೆ
ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಸಂವಿಧಾನ ದಿನದ ಅಂಗವಾಗಿ ಡಾಕ್ಟರ್ ಬಿ .ಆರ್. ಅಂಬೇಡ್ಕರ್ ಯುವಕ ಸಂಘ ದಿಂದ ಸಂವಿಧಾನ ಶಿಲ್ಪಿ ನಾಮಫಲಕಕ್ಕೇ ಪುಸ್ಪರ್ಜನೆ ಜೊತೆಗೆ ಪೂಜಾ ಕಾರ್ಯಕ್ರಮ ಮಾಡಲಾಯಿತು
ಪ್ರತೀ ವರ್ಷ ನವೆಂಬರ್ 26ರಂದು ಭಾರತದ ಸಂವಿಧಾನ ದಿನವೆಂದು ಆಚರಿಸಲಾಗುತ್ತದೆ. ನವೆಂಬರ್ 26 ಸ್ವತಂತ್ರ ಭಾರತದ ಇತಿಹಾಸದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ 1949 ರಲ್ಲಿ ಈ ದಿನದಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು. ಅದು 26 ಜನವರಿ 1950 ರಂದು ಜಾರಿಗೆ ಬಂದಿತು. ಆದ್ದರಿಂದ ಇದು ಹೊಸ ಯುಗದ ಉದಯವನ್ನು ಗುರುತಿಸುತ್ತದೆ. ಸಂವಿಧಾನ ರಚನಾಕಾರರ ಕೊಡುಗೆಯನ್ನು ಅಂಗೀಕರಿಸಲು ಮತ್ತು ಪ್ರಮುಖ ಮೌಲ್ಯಗಳ ಬಗ್ಗೆ ಜನರನ್ನು ಉಲ್ಬಣಗೊಳಿಸಲು, ನವೆಂಬರ್ 26 ಅನ್ನು ‘ಸಂವಿಧಾನ ದಿನ’ ಎಂದು ಆಚರಿಸಲಾಗುತ್ತದೆ ಈ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳಾದ ತುಮಲೇಶ್,ಹುಚ್ಚೆಂಗೆಪ್ಪ, ಮಲಿಯಪ್ಪ,ಮಹಾಂತೇಶ್, ಓಬಳೇಶ್, ಅನಿಲ್, ಆಟೋ ತಿಪ್ಪೇಶ್, ಅಂಜಿನಿ.ಆರ್, ರಾಜ, ಪ್ರಹಲದ್, ಆಕಾಶ್, ಹಂಪಣ್ಣ, ಯಲ್ಲೇಶ್, ಹುಲುಗಪ್ಪ, ಭರಮೇಶ್, ಕೃಷ್ಣಪ್ಪ, ನವಲಪ್ಪ, ರಮೇಶ್, ಕೌಶಿಕ್,ತಿಪ್ಪೇಸ್ವಾಮಿ ಹಾಗೂ ಗ್ರಾಮದ ಮುಕಂಡರು ಹಾಗೂ ಉಪಸ್ಥಿತರಿದ್ದರು…
ವರದಿ. ಅನಿಲ್ ಕುಮಾರ್ ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030