ಶ್ರೀ ಗುರು ಕೊಟ್ಟೂರೇಶ್ವರನ ಆಶೀರ್ವಾದದಿಂದ ಜನತೆ ಆರ್ಥಿಕ ,ಸಾಮಾಜಿಕ ಏಳ್ಗಿ: ಡಾ ಶ್ರೀನಿವಾಸ್ ಎನ್ ಟಿ
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರು ದಿನಾಂಕ 25.11.2024 ರಂದು ಕೊಟ್ಟೂರು ಎಪಿಎಂಸಿ ಸಮಿತಿಯ ಅಧ್ಯಕ್ಷರು & ಉಪಾಧ್ಯಕ್ಷರು ಹಾಗೂ ನಾಮ ನಿರ್ದೇಶಕ ಸದಸ್ಯರಿಂದ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೊಟ್ಟೂರು ದೊರೆ ಶ್ರೀ ಕೊಟ್ರೇಶನ ಆಶೀರ್ವಾದದಿಂದ ಹಾಗೂ ಕೃಷಿ ಉನ್ನತ ಮಾರುಕಟ್ಟೆ ಇರುವುದರಿಂದ ವ್ಯಾಪಾರ ವಹಿವಾಟು ಆರ್ಥಿಕ, ಸಾಮಾಜಿಕ ಮನ್ನಣೆಗೆ ಸಹಕಾರಿಯಾಗಿದೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳ ಸಹಕಾರದಿಂದ ಅಖಂಡ ಕೂಡ್ಲಿಗಿ ತಾಲೂಕಿನ ರೈತರ ಜೀವನಾಡಿಯಾಗಿ ಮಾನ್ಯ ಕೆಎಂಎಫ್ ಅಧ್ಯಕ್ಷರಾದ ಭೀಮಾ ನಾಯ್ಕರವರ ಜೊತೆಗೂಡಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷರಾದ ಭೀಮಾ ನಾಯ್ಕ ರವರು ಹಾಗೂ ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ದ್ವಾರಕೇಶ್ ರವರು, ನಾಗರಕಟ್ಟೆ ರಾಜಣ್ಣ ರವರು,ಎಪಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ನಾಮ ನಿರ್ದೇಶಕ ಸದಸ್ಯರು ಹಾಗೂ ಕೊಟ್ಟೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಹಗರಿಬೊಮ್ಮನಹಳ್ಳಿ ಪುರಸಭೆ ಉಪಾಧ್ಯಕ್ಷ ದೇವೇಂದ್ರಪ್ಪ ರವರು,ಚಾಪೆ ಚಂದ್ರಪ್ಪ, ಬುಗ್ಗಳ್ಳಿ ಕೊಟ್ರೇಶ್, ಅಕ್ಕಿ ಕೊಟ್ರೇಶ್ ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು…
ವರದಿ. ಅನಿಲ್ ಕುಮಾರ್ ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030