ಶ್ರದ್ಧಾ ಭಕ್ತಿಯಿಂದ ಶ್ರೀಪಾಂಡುರಂಗನ ದರ್ಶನಕ್ಕೆ ಹೊರಟ ಹುಲಿಕುಂಟೆ ಗ್ರಾಮದ ಭಕ್ತರು
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಹುಲಿಕುಂಟೆ ಗ್ರಾಮದ ಭಕ್ತರು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಪಾಂಡುರಂಗ ಸ್ವಾಮಿ ದರ್ಶನ ಮಾಡಲು ಪಾದಯಾತ್ರೆ ಮತ್ತು ಸಂಚರಿ ವಾಹನಗಳ ಮೂಲಕ ಪಂಡರಾಪುರ ಶ್ರೀ ಪಾಂಡುರಂಗ ದೇವನ ಸನ್ನಿಧಿಗೆ ಹುಲಿಕುಂಟೆ ಗ್ರಾಮದ ಭಕ್ತರ ದಂಡು ಭಜನೆ ಮಾಡುತ್ತಲೇ ಹೊರಟರು ಮಾರ್ಗ ಮಧ್ಯದಲ್ಲಿ ಬರುವ ಗ್ರಾಮ ಪಟ್ಟಣದ ಭಕ್ತರು ಬರಮಾಡಿಕೊಂಡು ಆಹ್ವಾನಿಸಿ ಭಕ್ತರು ನೀಡುವ ಆತಿಥ್ಯವನ್ನು ಸ್ವೀಕರಿಸಿ ಅಗತ್ಯವಿದ್ದಲ್ಲಿ ಹತ್ತಿರದ ದೇವಸ್ಥಾನದಲ್ಲಿ ರಾತ್ರಿ ಹೊತ್ತು ತಂಗಿ ಬೆಳಿಗ್ಗೆ ಉಪಹಾರಾದಿಗಳನ್ನು ಸ್ವೀಕರಿಸಿ ಪ್ರಯಾಣ ಪುನರಾರಂಭ ಗೊಳ್ಳುತ್ತಾರೆ ಹೀಗೆ ಪಾಂಡವಪುರಕ್ಕೆ ಬಹು ದೂರದಿಂದ ಭಕ್ತರು ಸಾವಿರಾರು ಕಿಲೋಮೀಟರ್ ದೂರದಿಂದ ನಿರಂತರ ಪಾದಯಾತ್ರೆ ಮೂಲಕ ಕ್ರಮಿಸಿ ಶ್ರದ್ಧೆ ಭಕ್ತಿಯಿಂದ ಪಾಂಡುರಂಗನನ್ನು ಬಜಿಸುತ್ತಾ ನೆರೆ ರಾಜ್ಯ ಮಹಾರಾಷ್ಟ್ರದಲ್ಲಿರುವ ಪಂಡರಾಪುರ ಸುಕ್ಷೇತ್ರಕ್ಕೆ ಭಕ್ತರ ದಂಡು ತಮ್ಮ ಪಾದಯಾತ್ರೆ ಯಶಸ್ವಿಗೊಳಿಸಿ ಸಮಾಪ್ತಿಗೊಳಿಸುತ್ತಾರೆ. ಇದೇ ರೀತಿ ನೂರಾರು ಕಿಲೋಮೀಟರ್ ದೂರದ ಕರ್ನಾಟಕದ ಮೂಲೆ ಮೂಲೆಯ ಗಡಿ ಗ್ರಾಮಗಳಿಂದ ಸತತ ಹತ್ತಾರು ವರ್ಷಗಳಿಂದ ಪಾದಯಾತ್ರೆ ಹಮ್ಮಿಕೊಳ್ಳುತ್ತಾರೆ ಹುಲಿಕುಂಟೆ ಗ್ರಾಮ ಒಂದರಿಂದ ಸುಮಾರು 30- 40 ಪಾಂಡುರಂಗ ಭಕ್ತರ ದಂಡು ನೆರೆಹೊರೆಯ ಭಕ್ತರೊಂದಿಗೆ ಸೇರಿ ಒಟ್ಟೊಟ್ಟಾಗಿ ಪಂಡರಾಪುರಕ್ಕೆ ತೆರಳಿ ಶ್ರದ್ಧಾಭಕ್ತಿಯಿಂದ ಆರಾಧಿಸಿ ದೇವರ ದರ್ಶನ ಪಡೆದು ಧಾರ್ಮಿಕ ವಿಧಿ ವಿಧಾನಗಳನ್ನು ಮುಗಿಸಿಕೊಂಡು ತಮ್ಮೂರಿಗೆ ಸಂಚಾರಿ ವಾಹನಗಳ ಮೂಲಕ ಪ್ರಯಾಣಿಸಿ ಮರಳುತ್ತಾರೆ..
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030