ತಾಯಿಯ ಬಗ್ಗೆ ಕವನ ರಚಿಸಿ ಪ್ರಶಸ್ತಿ ಪಡೆದ ಗ್ರಾಮೀಣ ಭಾಗದ ಶಿಕ್ಷಕ
ಕೂಡ್ಲಿಗಿ ತಾಲುಕು ವಿಜಯನಗರ ಜಿಲ್ಲೆ ಕಾನಹೊಸಹಳ್ಳಿ ಸಮೀಪದ ಕಾನಾಮಡುಗು ಗ್ರಾಮದ ಶ್ರೀ ಬಿ.ಕೆಂಚಪ್ಪ ಶ್ರೀಮತಿ ಶರಣಮ್ಮಇವರ 2 ನೇ ಮಗನಾದ ಲೋಕೇಶ.ಬಿ ಅವರು 6 ವರ್ಷದಿಂದ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆ ಅಣಬೂರು ಗ್ರಾಮದಲ್ಲಿ ಕನ್ನಡ ಸಹ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಅದರ ಜೊತೆಯಲ್ಲಿ ಸಾಹಿತ್ಯದ ಆಸಕ್ತಿಯನ್ನು ರೂಢಿಸಿಕೊಂಡ ಇವರು ಕೆಲವು ಕವನಗಳ ರಚನೆಯನ್ನು ಮಾಡಿದ್ದಾರೆ ಮತ್ತು ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು ತಾಲೂಕು ಘಟಕ ಜಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿದ್ದ ಕಾರ್ಯದಲ್ಲಿ ಭಾಗವಹಿಸುತ್ತಿದ್ದರು 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ದಿನಾಂಕ:-23-11-2024 ಶನಿವಾರ ದಂದು ನಡೆದ ಗೀತ ಗಾಯನ ಮತ್ತು ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ತಾಯಿಯ ಕುರಿತು ಕವನ ರಚಿಸಿ ಕವನ ವಾಚನ ಮಾಡಿದ್ದಾರೆ .
ಶೀರ್ಷಿಕೆ “ನನ್ನ ಅಮ್ಮ ನನ್ನ ಜೀವ”
ಅಮ್ಮ ನೀನೆ ನನ್ನ ಜನ್ಮದಾತೆ,
ನಿನ್ನ ಅಳಲನ್ನು ಮರೆತೆ ನನ್ನ ಈ ಜಗತ್ತಿಗೆ ತರಲು ಅಳುವ ಕಂದನ ನಗಿಸಲು ಜೋಗುಳ ಹಾಡಿದೆ
ನಿನ್ನ ಗರ್ಭದಲ್ಲಿ ಜನಿಸಿರುವುದು ನನ್ನ ಪುಣ್ಯವಂತೆ
ನನ್ನ ಅಮ್ಮ …ನನ್ನ ಜೀವ…
ನನ್ನಮ್ಮನಿಗೆ ನಾನು ಇರಬೇಕು ಬಲು ಸುಂದರ
ನನ್ನನ್ನು ನೋಡುತ್ತಾ ದಿನ ಕಳೆಯುವಳು ನಮ್ಮಿಬ್ಬರ ನಲಿವನ್ನು ನೋಡಿ ನಾಚಬೇಕು ಚಂದಿರ
ನನ್ನನ್ನು ಬಿಟ್ಟು ಇರಬೇಡ ನೀ ದೂರ
ನನ್ನ ಅಮ್ಮ….. ನನ್ನ ಜೀವ…
ನನಗೆ ಮೊದಲ ಗುರುವಾದೆ ನೀನು,
ಶಿಕ್ಷಣ ಪಡೆಯಲು ದಾರಿಯ ತೊರಿದೆ ಜೀವನದಲ್ಲಿ ಯಶಸ್ಸು ಕಾಣುತ್ತಾ ಬಂದೆ ನಾನು
ಉತ್ತಮ ಗೌರವ ಸಿಗಲು ಅವಕಾಶ ಕಲ್ಪಿಸಿದೆ ನೀನು
ನನ್ನ ಅಮ್ಮ… ನನ್ನ ಜೀವ..
ನನಗೆ ನೆಮ್ಮದಿಯ ತಾಣವಾಗಿತ್ತು ನಿನ್ನ ಒಡಲು
ನನ್ನ ಜೀವನಕ್ಕೆ ಕೊಡುಗೆ ಕೊಟ್ಟಳು ಹೆಂಡತಿಯ ಮಡಿಲು
ನನ್ನ ಜೀವನಕ್ಕೆ ನೀನೆ ಬರಹ ನಾನೇ ಕಥೆ ನೀನು ಇರಬೇಕು ಯಾವಾಗಲೂ ನನ್ನ ಜೊತೆ
ನನ್ನ ಅಮ್ಮ…. ನನ್ನ ಜೀವ.
ಎಂದು ತಾಯಿಯ ಕುರಿತು ರಚನೆ ಮಾಡಿದ್ದಾರೆ
ಇವರ ಕವನ ರಚನೆಗೆ ಪ್ರೋತ್ಸಾಹಿದ ಕುಮಾರ್ ನಾಯ್ಕ. ಎ. ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಅವಕಾಶ ಕಲ್ಪಿಸಿಕೊಟ್ಟ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಎಲ್ಲಾ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ…
ವರದಿ: ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030