ಜರ್ಮಲಿ : ಜಮೀನುವೊಂದರಲ್ಲಿ ಇಟ್ಟಿದ್ದ ಸಿಡಿಮದ್ದು ಸ್ಫೋಟ ನಾಲ್ವರ ಬಂಧನ
ವಿಜಯನಗರ ಜಿಲ್ಲೆ ಕೂಡ್ಲಗಿ ತಾಲೂಕಿನ ಜರ್ಮಲಿ ಗ್ರಾಮದಲ್ಲಿ ಕಾಡುಹಂದಿಗಳ ಉಪಟಳದಿಂದ ಬೇಸತ್ತ ರೈತರು ನ.18ರಂದು ಸಿದಿಮದ್ದನ್ನು ನೆಲದಲ್ಲಿ ಉದುಗಿಸಿದ್ದರು ಇದರ ಅರಿವಿಲ್ಲದೆ ಮಹಿಳೆ ಸಹಿತ ಇಬ್ಬರು ಮಕ್ಕಳು ಹೊಲಕ್ಕೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿತ್ತು ಈ ವೇಳೆ ಮೂವರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರನ್ನು
ಬಂಧಿಸುವಲ್ಲಿ ಗುಡೇಕೋಟೆ ಪೊಲೀಸರು ಗುರುವಾರ ಯಶಸ್ವಿಯಾಗಿದ್ದಾರೆ.ಜರ್ಮಲಿ ಗ್ರಾಮದ ನಿವಾಸಿಗಳಾದ ಸುರೇಶ್ (56), ಅಜ್ಜಯ್ಯ (25),ಓಬಳೇಶ್(33),ಮಲ್ಲಿಕಾರ್ಜುನ(28), ಬಂಧಿತರು.ಗುಡೇಕೋಟೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಪತ್ತೆ ಕಾರ್ಯಕ್ಕೆ ಪ್ರತ್ಯೇಕ ತಂಡ ಎಸ್ಪಿ ಶ್ರೀ ಹರಿಬಾಬು ರಚಿಸಿದ್ದರು. ಕೊನೆಗೂ ತಂಡ ಯಶಸ್ವಿಯಾಗಿದೆ. ಪತ್ತೆ ಕಾರ್ಯದಲ್ಲಿ ಕೂಡ್ಲಿಗಿ ವೃತ್ತ ಸಿಪಿಐ ಸುರೇಶ್ ತಳವಾರ ಗುಡೇಕೋಟೆ ಪಿ ಎಸ್ ಐ ಬಾಬು ಫಕ್ರುದ್ದೀನ್, ಎ ಎಸ್ ಐ ನಾಗೆಂದ್ರಚಾರಿ ಪೇದೆಗಳಾದ ಗುರುಸ್ವಾಮಿ,ಅಂಜಿನಪ್ಪ,ಸ್ವರುಪಾ ನಂದ,ಮಹಾಂತೇಶ್, ಉಜ್ಜಪ್ಪ,ಬಸವರಾಜ್ ಪಾಲ್ಗೊಂಡಿದ್ದರು…
ವರದಿ: ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030