ಕಾನಮಡುಗು ಗ್ರಾಮದಲ್ಲಿ ವಿಜೃಂಬಣೆಯ 537ನೇ ಕನಕ ಜಯಂತಿ ಆಚರಣೆ
ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಸಮೀಪದ ಕಾನಮಡುಗು ಗ್ರಾಮದಲ್ಲಿ 537 ನೇ ಜಯಂತಿ ಆಚರಣೆಯನ್ನು ಶಿಸ್ತು ಬದ್ಧವಾಗಿ ಆಚರಿಸಲಾಯಿತು
15-16 ನೆ ಶತಮಾನ ಕನಕದಾಸರ ಜೀವಿತಾವಧಿಯ ಕಾಲಘಟ್ಟ ಆ ಕಾಲದ ಹರಿದಾಸರ ಪೈಕಿ ದಾಸ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಕೊಟ್ಟವರು ಅವರು. ಕನ್ನಡ ಭಾಷೆಯ ಕೀರ್ತನೆಕಾರರು ಮತ್ತು ಪುರಂದರ ದಾಸರೊಂದಿಗೆ ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆಯನ್ನು ನೀಡಿದವರು
ಸಹಜ ಬದುಕು ಬಾಳಿದ ಕನಕದಾಸರು ಕೀರ್ತನಾಕಾರಕರಾಗಿ, ತತ್ವಜ್ಞಾನಿಯಾಗಿ,ಸಂತರಾಗಿ, ದಾರ್ಶನಿಕರಾಗಿ ಕನ್ನಡನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ ಕನಕದಾಸರು ದಂಡನಾಯಕರಾಗಿದ್ದು,ಯುದ್ಧದಲ್ಲಿ ಸೋತ ನಂತರ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತ ದಾಸರಾದರು ಎಂಬ ಐತಿಹ್ಯವಿದೆ.
ಕುಲಕುಲ ವೆಂದು ಹೊಡೆದಾಡದಿರಿ
ನಿಮ್ಮಕುಲದ ನೇಲೆಯನ್ನಾದರು ಬಲ್ಲಿರಾ!ಎಂಬ ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೂಢ ನಂಬಿಕೆ ಹೋಗಲಾಡಿಸಲು ಶ್ರಮಿಸಿದ ಕನ್ನಡ ಸಾಹಿತ್ಯ ಚರಿತ್ರೆಯ ಅದಮ್ಯ ಚೇತನ , ದಾರ್ಶನಿಕ ಕವಿ, ಸಮಾಜ ಸುಧಾರಕ ,ವೈಚಾರಿಕ ಸಂತ,ಕಾಲಜ್ಞಾನಿ ,ಕವಿಕುಲ ತಿಲಕ,ಶ್ರೇಷ್ಟದಾಸ, ಮಹಾ ಸಂತನಿಗೆ ಭಕ್ತಿ ನಮನ ಸಲ್ಲಿಸಿ ಡಿಜೆ ಸೌಂಡಿಗೆ ಹೆಜ್ಜೆ ಹಾಕಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ಈ ಸಮಯದಲ್ಲಿ ಕಾನಮಡುಗು ಗ್ರಾಮದ ದಾಮ ಶರಣಾರ್ಯರು. ದಾಸೋಹಮಠ ಕಾನಮಡುಗು. ಕೆ ಎಂ ಶಶಿಧರ ಮಾಜಿಜಿಲ್ಲಾ ಪಂಚಾಯಿತಿ ಸದಸ್ಯರು . ಬಿ ಚನ್ನಪ್ಪ ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರು.. ಜಿ ಆರ್ ಬಾಲಪ್ಪ. ಬಿ ಕೆಂಚಪ್ಪಶಿಕ್ಷಕರು . ಡಿಜಿ ಅಜ್ಜನಗೌಡ ಶಿಕ್ಷಕರು.. ಕೆ ಚೆನ್ನಪ್ಪ. ನಾಗೇಂದ್ರಪ್ಪ ಶಿಕ್ಷಕರು.ಕೆಎಂ ಮಲ್ಲಿಕಾರ್ಜುನ. ಬಿ ದುರ್ಗಪ್ಪ. ಉತ್ರಪ್ಪ ಬಿ. ಲೋಕೇಶ್. ಕೆ ಎನ್ ಮಂಜುನಾಥ, ಕಾನಹೊಸಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿವರ್ಗ ಮತ್ತು ಗ್ರಾಮ ಪಂಚಾಯತಿ ಸದಸ್ಯರು. ಹಾಗೂ ಸಿಬ್ಬಂದಿ ವರ್ಗ.ಊರಿನಗ್ರಾಮಸ್ಥರು, ಯುವಕರು,ಹಾಗೂ ಉಪಸ್ಥಿತರಿದ್ದರು…
ವರದಿ: ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030