ಊರಮ್ಮ ದೇವರ ಗುಡಿಯ ಕಳಸ ಪ್ರತಿಷ್ಠಾಪನೆ; ಗಡಿಗ್ರಾಮಗಳ ಸಾಮಾಜಿಕ ಸುಧಾರಣೆಯಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯ- ಶಾಸಕ ಡಾ. ಶ್ರೀನಿವಾಸ್. ಎನ್. ಟಿ…
ಕೂಡ್ಲಿಗಿ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ನುಂಕನಹಳ್ಳಿಯಲ್ಲಿ ದಿ;12-11-2024 ರಂದು ಶ್ರೀ ಊರು ಮಾರಮ್ಮ ದೇವಿಯ ನೂತನ ದೇವಸ್ಥಾನ, ಶಿಲಾ ವಿಗ್ರಹ ಹಾಗೂ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಕ್ತಿ ಮತ್ತು ಭಾವನೆಯಿಂದ ಪೂಜೆ ಸಲ್ಲಿಸಿದರು. ದೇವತೆ ಆಶೀರ್ವಾದದಿಂದ ಮಳೆ ಬೆಳೆ ಬಂದು ಎಲ್ಲರೂ ಸುಖವಾಗಿದ್ದಾರೆ. ಗಡಿಗ್ರಾಮಗಳ ಸಾಮಾಜಿಕ ಸುಧಾರಣೆಯಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ಕ್ಷೇತ್ರದ ಅಂಚಿನಲ್ಲಿರುವ ಗ್ರಾಮಗಳು ಆಗಲಿ ಹಾಗೂ ಪ್ರತಿಯೊಂದು ವರ್ಗದ ಬಡವರಿಗೆ ಒಳ್ಳೆಯ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳು ದೊರೆತಾಗ ಮಾತ್ರ ಮಾನವ ಕುಲ ಅಭಿವೃದ್ಧಿ ಹೊಂದಲು ಅನುಕೂಲವಾಗಲಿದೆ ಎಂದರು. ಇದೇ ವೇಳೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಮಾಜಿ ಜಿ. ಪಂ. ಸದಸ್ಯರಾದ ಎಸ್. ವೆಂಕಟೇಶ, ಮಾಜಿ ತಾ. ಪಂ. ಸದಸ್ಯರಾದ ಶೃತಿ ವೆಂಕಟೇಶ, ಪಸಲು ಪಾಲಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷರಾದ ತಮ್ಮಣ್ಣ ಎನ್. ವಿ, ಗಂಡಬೊಮ್ಮನಹಳ್ಳಿ ಗ್ರಾ. ಪಂ. ಅಧ್ಯಕ್ಷರಾದ ಶ್ರೀಮತಿ ಓಬಮ್ಮ, ಸದಸ್ಯರು, ಟೈಲರ್ ನಾಗರಾಜ, ರಾಮಸಾಗರಹಟ್ಟಿ ಬೋರಣ್ಣ, ಚಂದ್ರಣ್ಣ, ದಿಬ್ಬದಹಳ್ಳಿ ವೆಂಕಟೇಶ, ಮಾರಮ್ಮನಹಳ್ಳಿ ಓಬಣ್ಣ, ಪೆದ್ದಮಲ್ಲಯ್ಯ, ಹೊನ್ನಪ್ಪ, ಪಾಪೇಶ ನಾಯಕ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು…
ವರದಿ. ಅನಿಲ್ ಕುಮಾರ್, ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030