ಸಂತೋಷ ಲಾಡ್ ಮತ್ತು ತುಕಾರಾಂ ಅವರ ಅಭಿವೃದ್ಧಿ ಪಥವನ್ನು ಮುನ್ನಡೆಸಲು ಕಾಂಗ್ರೆಸ್ ಬೆಂಬಲಿಸಿ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ
ಸಂಡೂರು ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ಅನ್ನಪೂರ್ಣ ತುಕಾರಾಂ ಪರ ದಿ; 10-11-2024 ರಂದು, ದೊಡ್ಡ ಉಪ್ಪಾರಹಳ್ಳಿ, ಮಲ್ಲಾಪುರ -ಗೊಲ್ಲರಹಟ್ಟಿ, ಅಂಕಮ್ಮನಾಳ್ ಗ್ರಾಮಗಳಿಗೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು
ತಮ್ಮ ಕ್ಷೇತ್ರದ ಮುಖಂಡರೊಂದಿಗೆ ಭೇಟಿ ನೀಡಿ ಇಡೀ ದೇಶದ ಪೈಕಿ ಬಡವರ ಪರ ದುಡಿಯುವ
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರ ಸರ್ಕಾರವನ್ನು ಬಲಪಡಿಸಲು
ಸನ್ಮಾನ್ಯ ಶ್ರೀ ಸಂತೋಷ ಎಸ್ ಲಾಡ್ ಮತ್ತು ಈ. ತುಕಾರಾಂ ಅವರ ಮಾರ್ಗದರ್ಶನದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು
ಸ್ಥಳೀಯ ಆಡಳಿತ ಭವಿಷ್ಯದ ದೃಷ್ಟಿಯಿಂದ ಆರ್ಥಿಕ ಮತ್ತು ಸಾಮಾಜಿಕ ವಾಗಿ ಬಲ ತುಂಬಲು
ಈ ಭಾಗದ ಜನರು ಎಲ್ಲಾ ವರ್ಗದ ಬಡವರ ಅಭಿವೃದ್ಧಿಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಇದೇ ನವೆಂಬರ್ ತಿಂಗಳು 13 ನೇ ತಾರೀಖಿನಂದು ಕ್ರಮ ಸಂಖ್ಯೆ 1 ಕ್ಕೆ ಹಸ್ತದ ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ಗೆಲ್ಲಿಸಿ ಎಂದೂ ಮನವಿ ಮಾಡಿದರು. ಈ ವೇಳೆ ವಡ್ಡರ ತಿಮ್ಮಣ್ಣ, ತಿಮ್ಮಪ್ಪ, ಚಲಪತಿ, ನಾಗೇಂದ್ರಪ್ಪ, ಚಿತ್ತಪ್ಪ ಜಿ.ಕೆ, ಬೀರಪ್ಪ, ಮಾರಪ್ಪ, ಹನುಮಯ್ಯ, ನರಸಪ್ಪ, ಬಂಜಪ್ಪ, ಹೆಚ್. ಅಂಜಿನಪ್ಪ. ಈರಪ್ಪ, ಹೊನ್ನೂರಪ್ಪ, ಅವರು ಉಪಸ್ಥಿತರಿದ್ದರು….
ವರದಿ. ಅನಿಲ್ ಕುಮಾರ್ ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030