ಆಲೂರು ಮಾನವೀಯತೆ ಮೆರೆದ ಗೆಳತಿಯರು
ಶನಿವಾರ ಬೆಳಿಗ್ಗೆ 12:40ಕ್ಕೆ ಬೆಂಗಳೂರಿನಿಂದ ಗಂಗಾವತಿಗೆ ಹೋಗುವ ಸರ್ಕಾರಿ ಬಸ್ಸಿನಲ್ಲಿ ಕಾರಟಿಗೆರೆ ಗ್ರಾಮವಾಸಿ ಮಹಿಳೆ ಸುಲ್ತಾನ್ ಬಿ ತನ್ನ ಗಂಡ ಬೆಂಗಳೂರು ಆಸ್ಪತ್ರೆ ಒಂದರಲ್ಲಿ ಕಿಡ್ನಿ ಸ್ಟೋನ್ ಆಪರೇಷನ್ ಆಗಿರುವುದನ್ನು ನೋಡಿ ಒಬ್ಬಳೆ ಬಸ್ಸಿನಲ್ಲಿ ಹಿಂತಿರುಗಿಬರುವಾಗ ಚಿತ್ರದುರ್ಗ ಬಸ್ ಡಿಪೋದಿಂದ ಬಿಟ್ಟ ನಂತರ ಆ ಮಹಿಳೆಗೆ ಗರ್ಭಿಣಿಯಾಗಿರುವುದರಿಂದ ಹೆರಿಗೆ ನೋವು ಕಾಣಿಸಿಕೊಂಡಿದೆ ಇದನ್ನು ನೋಡಿದ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಲ್ಪ ಎಂಬ ಸಿಸ್ಟರ್ ಇವರ ಸ್ನೇಹಿತೆ ನಾಗವೇಣಿ ನೋಡಿ ತಕ್ಷಣ ನನ್ನ ಸ್ನೇಹಿತೆ ಶಿಲ್ಪ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಕಂಡಕ್ಟರ್ ಮತ್ತು ಬಸ್ ಚಾಲಕ ತಕ್ಷಣವೇ ಹೈವೇ 50ರ ಪೊಲೀಸ್ ಜೊತೆಯಲ್ಲಿ ಬಸ್ ಸಹಿತವಾಗಿ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಆ ತಾಯಿಗೆ ನೆರವಾಗಿದ್ದಾರೆ ತಕ್ಷಣವೇ ಆಲೂರು ಆರೋಗ್ಯ ಕೇಂದ್ರದ ಡಾಕ್ಟರ್ ಚಿರಂಜೀವಿ ಮತ್ತು ಸಿಬ್ಬಂದಿಯಾದ ಶಿಲ್ಪ ಮತ್ತು ಶಶಿಕಲಾ ಇವರ ಸಹಕಾರ ಹಾಗೂ ಸರ್ಕಾರಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಾಣಂತಿ ಯನ್ನ ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದರಿಂದ ಹೆಣ್ಣು ಮಗು ಜನನ ವಾಗಿದೆ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ
ದೇವರ ರೂಪದಲ್ಲಿ ಬಂದು ನನ್ನನ್ನು ಮತ್ತು ನನ್ನ ಮಗಳನ್ನು ಕಾಪಾಡಿದ ಗೆಳತಿಯರಿಗೆ, ಸಿಬ್ಬಂದಿಗಳಿಗೆ ನನ್ನ ಉಸಿರಿರುವ ವರೆಗೂ ಇವರನ್ನು ನೆನೆಯುತ್ತೇನೆ ಎಂದು ಬಿ.ಸುಲ್ತಾನ್ ಮನಪೂರ್ವಕ ಕೃತಜ್ಞತೆ ಸಲ್ಲಿಸಿದರು …
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030