ಭಾವೈಕ್ಯತೆ ಸಾರುವ ನಿಟ್ಟಿನಲ್ಲಿ ಜಯಂತಿಗಳನ್ನು ಆಚರಿಸೋಣ- ಶಾಸಕ ಡಾ. ಶ್ರೀನಿವಾಸ್. ಎನ್. ಟಿ
ಒಳ್ಳೆಯ ಸಮೃದ್ಧಿಯಿಂದ ಎಲ್ಲರಲ್ಲೂ ನಗುವಿನ ಹಬ್ಬದ ವಾತಾವರಣ ವಿದೆ
ಕೂಡ್ಲಿಗಿ ಕ್ಷೇತ್ರದ ತಾಲೂಕು ಆಡಳಿತ ವತಿಯಿಂದ ದಿ; 23-10-2024 ರಂದು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿದ ವೀರರಾಣಿ ಹೆಮ್ಮೆಯ ತಾಯಿ ಕಿತ್ತೂರು ಚನ್ನಮ್ಮಾಜಿಯ 200 ನೇ ವಿಜಯೋತ್ಸವ, 246 ನೇ ಜಯಂತ್ಯೋತ್ಸವವನ್ನು ಮಾನ್ಯಶಾಸಕರಾದ ಡಾ. ಶ್ರೀನಿವಾಸ್ .ಎನ್. ಟಿ. ಅವರ ಅಧ್ಯಕ್ಷತೆಯಲ್ಲಿ ಹಾಗೂ ವೀರಶೈವ, ಲಿಂಗಾಯತ ಕುಲಬಾಂದವರು ಜಾತ್ಯಾತೀತವಾಗಿ ಸಕಲ ಗೌರವಗಳೊಂದಿಗೆ ಖಾನಹೊಸಹಳ್ಳಿ ಹಾಗೂ ಕೂಡ್ಲಿಗಿ ಚೆನ್ನಮ್ಮನವರ ವೃತ್ತದ ಬಳಿ ಭಾವಚಿತ್ರಕ್ಕೆ ಹೂಮಾಲೆ ಅರ್ಪಿಸಿ ಕಲಾ ಮೇಳಗಳೊಂದಿಗೆ ವಿಜೃಂಭಣೆಯಿಂದ ಆಚರಿಸಿದರು.
ಆಡಳಿತ ಸೌಧದಲ್ಲಿ ಶಾಸಕರು ಮಾತನಾಡುತ್ತಾ, ಎಲ್ಲರಲ್ಲಿಯೂ ನಗುವಿನ ಹಬ್ಬದ ವಾತಾವರಣ ವಿದೆ. ಈ ಬಾರಿ ಒಳ್ಳೆಯ ಮಳೆ ಬೆಳೆಯಿಂದಾಗಿ ಸಮೃದ್ಧಿ ಹೆಚ್ಚಿ ಸಂತಸ ತಂದಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ವೀರರಾಣಿ ಚನ್ನಮ್ಮಾಜಿಯವರು ಒಬ್ಬ ಆದರ್ಶ ವ್ಯಕ್ತಿಯಾಗಿದ್ದೂ ಇಂದಿನ ಸಮಾಜಕ್ಕೆ ಪ್ರೇರಣೆ ಮತ್ತು ಸ್ಪೂರ್ತಿಯಾಗಿದ್ದಾರೆ ಎಂದೂ ಹೇಳಿದರು.
ಸಹನೆ, ಸಹಬಾಳ್ವೆ ಮತ್ತು ಸಹಕಾರದೊಂದಿಗೆ ಅನ್ಯೋನ್ಯತೆಯಿಂದ ಬಾಳುತ್ತಾ, ಭವನಗಳು ಮತ್ತು ಮಹನೀಯರ ಪ್ರತಿಮೆಗಳನ್ನು ನಿರ್ಮಿಸೋಣ. ಹಾಗೆಯೇ ಭಾವೈಕ್ಯತೆಯ ಸಂದೇಶ ಸಾರೋಣ ಎಂದರು. ಮುಂದಿನ ದಿನಗಳಲ್ಲಿ ಅರ್ಥಪೂರ್ಣವಾಗಿ ಜಯಂತಿಗಳನ್ನು ಆಚರಿಸೋಣ. ಒಟ್ಟಿನಲ್ಲಿ ಈ ದಿನ ಅದ್ಧೂರಿಯಾಗಿ ಕಿತ್ತೂರು ರಾಣಿ ಚೆನ್ನಾಮ್ಮಾಜಿಯ ಜಯಂತಿಯನ್ನು ಆಚರಿಸಿದ್ದೇವೆ ಎಂದರು.
ಈ ವೇಳೆ ತಹಶೀಲ್ದಾರರಾದ ಎಂ.ರೇಣುಕಾ, ಬಿ.ಇಒ.ಪದ್ಮನಾಭಕರಣಂ, ಪ. ಪಂ. ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪನಾಯಕ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶೂಕರ್ ಬಾಯಿ, ಬಿಡಿಸಿಸಿ ಅಧ್ಯಕ್ಷರಾದ ಗುಂಡುಮುಣುಗು ತಿಪ್ಪೇಸ್ವಾಮಿ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಗುರುಸಿದ್ದನಗೌಡ, ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕುಮಾರ್ ಗೌಡ, ಪಂಚಮಸಾಲಿ ಸಮುದಾಯ ಅಧ್ಯಕ್ಷರಾದ ರೇವಣ್ಣ, ಜಿಲ್ಲಾ ಗೌರವ ಅಧ್ಯಕರಾದ ಮೊರಬದ ಶಿವಣ್ಣ, ಲಿಂಗಾಯತ ಮತ್ತು ವೀರಶೈವ ಸಮುದಾಯದ ಗಣ್ಯರಾದ ಗುಳಿಗಿ ವಿರೇಂದ್ರ, ವಿಭೂತಿ ವೀರಣ್ಣ, ಅಜ್ಜನ ಗೌಡ, ಮಲ್ಲಿಕಾರ್ಜುನ ಗೌಡ, ಬಣವಿಕಲ್ಲು ರಾಜಣ್ಣ, ರಜಿನಿ ಕಾಂತ, ಸುನಿಲ್ ಗೌಡ, ಕೋಗಳಿಮಂಜಣ್ಣ, ಹೊಸಹಳ್ಳಿ ಜಗದೀಶ ಮತ್ತು ಸತೀಶ್, ತೂಲಹಳ್ಳಿ ಶಾಂತನಗೌಡ, ಬಣವಿಕಲ್ಲು ಯರಿಸ್ವಾಮಿ, ಹಾಗೂ ಮುಖಂಡರಾದ ಜಿಂಕಲ್ ನಾಗಮಣಿ, ಉಮೇಶ, ಹಿರಿಯರು, ಬಂಧುಗಳು ಉಪಸ್ಥಿತರಿದ್ದರು…
ವರದಿ. ಅನಿಲ್ ಕುಮಾರ್ ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030