ಕನ್ನಡತನ ಉಳಿಸಲು ಕನ್ನಡಮ್ಮನ ತೇರು ಎಳೆಯೋಣ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ
ಕರ್ನಾಟಕ ಘನ ಸರ್ಕಾರವು ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಡಿಸೆಂಬರ್ 20, 21 ಮತ್ತು 22 ರಂದು 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ತೀರ್ಮಾಸಿದೆ.
ಆ ಹಿನ್ನೆಲೆಯಲ್ಲಿ ರಾಜ್ಯದ ಉದ್ದಗಲಕ್ಕೂ ಕನ್ನಡ ತೇರು ಎಳೆಯುವ ಕನ್ನಡ ನಾಡು, ನುಡಿ ಮತ್ತು ದೇಶ ಪ್ರೇಮವನ್ನು ಅಭಿಮಾನದಿಂದ ಪ್ರಸಾರ ಮಾಡುವ ಭಾಗವಾಗಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರ ಅಧ್ಯಕ್ಷತೆಯಲ್ಲಿ ದಿನಾಂಕ 22-10-2024 ರಂದು ವಿಜಯನಗರ ಮತ್ತು ಕೂಡ್ಲಿಗಿ ತಾಲೂಕಿನ ಆಡಳಿತ, ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ನಾಗರೀಕರು, ಸಾರ್ವಜನಿಕರು ಕನ್ನಡ ತೇರಿಗೆ ಪೂಜೆ ಸಲ್ಲಿಸಿ ಕಲಾ ತಂಡಗಳೊಂದಿಗೆ ಅದ್ಧೂರಿಯಾಗಿ ಸ್ವಾಗತ ಕೋರಿದರು. ಮದಕರಿನಾಯಕ ವೃತ್ತ, ಅಂಬೇಡ್ಕರ್ ವೃತ್ತ ಒಳಗೊಂಡಂತೆ ಮುಖ್ಯ ರಸ್ತೆಗಳಲ್ಲಿ ಕನ್ನಡಮ್ಮನ ತೇರನ್ನು ಎಳೆದು ಸಂಭ್ರಮಸಿದರು.
ಶಾಸಕರು ಮಾತನಾಡುತ್ತಾ, ಕನ್ನಡ – ಕರ್ನಾಟಕ ಕ್ಕೆ ನಾಮಕರಣಗೊಂಡು 50 ವರ್ಷ ತುಂಬಿದಾಗ ಸನ್ಮಾನ್ಯ ಸಿ. ಎಂ. ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮತ್ತೇ ಹಂಪಿಯಲ್ಲಿ ಸೇರಿರುವುದು ಒಂದು ಸಂತಸದ ಕ್ಷಣ,
ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು 1956 ನವೆಂಬರ್ 1 ಕರ್ನಾಟಕವನ್ನು ಹಂಪಿ ಶ್ರೀ ವಿರೂಪಾಕ್ಷನ ಗೋಪುರ ರೀತಿ ಕಟ್ಟುಬೇಕು ಎಂಬ ಸಂಕಲ್ಪವನ್ನು ತೊಟ್ಟು ನಾಡಿನ ಉದ್ದಕ್ಕೂ ಮಣ್ಣು ತಂದು ಗಿಡ ನೆಟ್ಟು ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿರುವ ಪುಣ್ಯ ಭೂಮಿಯಲ್ಲಿ ನಾವು ಮತ್ತೇ ಕನ್ನಡತನ ಉಳಿಸಲು ಕನ್ನಡಮ್ಮನ ತೇರನ್ನು ಎಳೆಯೋಣ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವರಾದ ಸನ್ಮಾನ್ಯ ಶ್ರೀ ದಿನೇಶ್ ಆರ್ ಗುಂಡೂರಾವ್, ಹೊಸಪೇಟೆ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಹೆಚ್. ಆರ್. ಗವಿಯಪ್ಪ, ವಿಜಯನಗರ ಜಿಲ್ಲಾಧಿಕಾರಿಗಳಾದ ಎಂ.ಎಸ್. ದಿವಾಕರ್, ತಹಶೀಲ್ದಾರರಾದ ಎಂ. ರೇಣುಕಾ, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪನಾಯಕ, ಉಪಾಧ್ಯಕ್ಷರು, ಸರ್ವ ಸದಸ್ಯರು, ಕನ್ನಡ ಸಂಘಟನೆಯಕಾರರು, ಪತ್ರಕರ್ತರಾದ ಅಂಗಡಿ ವಿರೇಶ, ವಿರೇಶ, ಮುಖಂಡರಾದ ಜಿಂಕಲ್ ನಾಗಮಣಿ, ರಾಘವೇಂದ್ರ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ..
ವರದಿ, ಅನಿಲ್ ಕುಮಾರ್, ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030