ಸನಾತನ ಐತಿಹಾಸಿಕ ಶ್ರೀ ಕ್ಷೇತ್ರ ಕಾನಮಡುಗು ಶರಣಬಸವೇಶ್ವರ ಮಠ ದ ಬಾವಿಗೆ ಸ್ವಚ್ಛತೆಗೊಳಿಸುವ ಮೂಲಕ ಪುನರ್ಜನ್ಮ…ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕಾನಾಮಡುಗು ಗ್ರಾಮಸ್ಥರು ಶ್ರೀ ಶ್ರೀ ಶರಣಬಸವೇಶ್ವರ ಮಠದ ಆವರಣದಲ್ಲಿರುವ ಸನಾತನ ಪುರಾತನ ಇತಿಹಾಸವಿರುವ ನೀರಿನ ಬಾವಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮಕ್ಕೆ ಊರಿನ ಹಿರಿಯರು, ಯುವಕರು , ಸೇರಿ ದಾಸೋಹ ಮಠದ ಪೂಜ್ಯ ಐಮಡಿ ಶರಣರ ಮಾರ್ಗದರ್ಶನದಲ್ಲಿ ಸಂಪೂರ್ಣ ಸ್ವಚ್ಛತೆ ಮಾಡಿದರು.ಈ ವರ್ಷದಲ್ಲಿ ವರುಣನ ಕೃಪೆಯಿಂದ ನಮ್ಮ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇರುವ ಕೆರೆಗಳು ತುಂಬಿ ಹರಿಯುತ್ತಿವೆ ಜಗಳೂರಿನ ಗಡಿ ಮಾಕುಂಟೆ ಕೆರೆ ,ಅಣಬೂರಿನ ಕೆರೆ, ಹುಲಿಕೆರೆ ಕೆರೆ, ಮೈದುಂಬಿ ಹರಿಯುತ್ತಿವೆ ಆರಾಧ್ಯ ದೈವ ಶ್ರೀ ಶರಣೇಶನ ಆಶೀರ್ವಾದದಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇತಿಹಾಸದ ಪ್ರಕಾರ ಹಿರಿಯ ಜೀವಗಳ ಅನುಭವದ ಪ್ರಕಾರ ಈ ಎಲ್ಲಾ ಕೆರೆಗಳು ತುಂಬಿದರೆ ಕಾನಾಮಡುಗಿನ ಪುಣ್ಯಕ್ಷೇತ್ರದಲ್ಲಿರುವ ಈ ಬಾವಿಗೆ ಇತಿಹಾಸ ಪೂರ್ವದಿಂದ ಕಾನಾಮಡುಗು ಗ್ರಾಮದ ಜನತೆಗೆ ಕುಡಿಯಲು ನೀರು ಕೊಟ್ಟು ಇತ್ತೀಚಿನ ವರ್ಷಗಳಲ್ಲಿ ಬರಗಾಲಕ್ಕೆ ತುತ್ತಾಗಿ ಈ ಪುರಾತನ ಬಾವಿಯ ನೀರು ಬತ್ತಿ ಹೋಗಿದ್ದು ತನ್ನ ಆಕಾರವನ್ನೇ ಕಳೆದುಕೊಂಡಿತ್ತು .
ಈ ಬಾರಿ ಇತ್ತೀಚಿನ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾನಾಮಡುಗು ಸುತ್ತಮುತ್ತ ಕೆರೆಗಳು ಗುಂಡಿಗಳು ತುಂಬಿ ತುಳುಕುತ್ತಿರುವುದರಿಂದ ಈ ಬಾವಿಗೆ ನೀರು ಬರುವ ಮುನ್ಸೂಚನೆಯಂತೆ ತಾನಾಗಿ ನೀರು ಬರುವುದೆಂಬ ನಂಬಿಕೆಯಿಂದಾಗಿ ಅದಕ್ಕಾಗಿ ಇಂದು ಕಾನಾಮಡುಗು ಗ್ರಾಮಸ್ಥರು ಶ್ರೀ ಶರಣ ಬಸವೇಶ್ವರ ಕೃಪೆಯಿಂದ ಈ ಸನಾತನ ಪರಂಪರೆ ಇರುವ ಬಾವಿಗೆ ನೀರು ಬರಲೆಂದು ನಾವೆಲ್ಲರೂ ಪ್ರಾರ್ಥಿಸೋಣ ಎಂದು ಸ್ವಚ್ಛತ ನಡೆಗೆ ತೊಡಗಿದರು *(ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಸಮಸ್ತ ಸರ್ವಭಕ್ತದಿಗಳಿಗೆ ಆ ದೇವರು ಆಯಸ್ಸು ಮತ್ತು ಆರೋಗ್ಯ ಕೊಟ್ಟು ಕಾಪಾಡಲೆಂದು ಕಾನಾಮಡುಗು ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿಗಳಾದ ಐಮಡಿ ದಾಮ ಶರಣಾರ್ಯರು. ಯಾವುದೇ ಜಾತಿ ಬೇದ ಬಾವ ಇಲ್ಲದೆ ಪ್ರತಿಯೊಬ್ಬರು ಭಾಗವಹಿಸಿ ಹಾರೈಸಿದರು* .) ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಭಕ್ತಾದಿಗಳು ಹಾಗೂ ಉಪಸ್ಥಿತಿತರಿದ್ದರು…
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030