ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಾತ್ಯಾತೀತವಾಗಿ ಆಚರಿಸಿದಂತೆ ಅಭಿವೃದ್ಧಿಯಲ್ಲಿಯೂ ಎಲ್ಲರೂ ಕೈ ಜೋಡಿಸೋಣ- ಶಾಸಕ ಡಾ. ಶ್ರೀನಿವಾಸ್. ಎನ್. ಟಿ
ಕೂಡ್ಲಿಗಿ ತಾಲೂಕಿನ ಆಡಳಿತ ವತಿಯಿಂದ ವಾಲ್ಮೀಕಿ ಬಂಧುಗಳು, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹಾಗೂ ಇತರೆ ಜನಪರ ಸಂಘಟನೆಗಳ ಸಹಕಾರದೊಂದಿಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವದ ಅಂಗವಾಗಿ ದಿ;17-10-2024 ರಂದು ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಪೂಜೆ ಸಲ್ಲಿಸಿ ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ದಿವಂಗತ ಮಾಜಿ ಶಾಸಕರಾದ ಎನ್.ಟಿ. ಬೊಮ್ಮಣ್ಣನವರ ವೇದಿಕೆಯ ಸಭೆಯಲ್ಲಿ ಶಾಸಕರು ಅಧ್ಯಕ್ಷತೆ ವಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡುತ್ತಾ, ಮೈಸೂರು ವಿಶ್ವವಿದ್ಯಾನಿಲಯ ಕೊಟ್ಟ ವರದಿಯಂತೆ ವಿಜಯ ನಗರ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಬೇಡ ನಾಯಕರು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿರುವ ಸಂಗತಿಗಳು ನನ್ನ ಗಮನಕ್ಕೆ ಇವೆ ಹೀಗಾಗಿ ನಾವು ಆ ಹಿನ್ನೆಲೆಯಲ್ಲಿ ಹಿಂದುಳಿದಿರುವ ಬಗ್ಗೆ ಚಿಂತನೆ ಮಾಡಿ ನಮ್ಮ ಭಾಗದಲ್ಲಿ ಸಾಮಾಜಿಕ ಸುಧಾರಣೆಗಾಗಿ ನಾವು ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು.
ಈ ದಿನ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಾವು ಎಲ್ಲರೂ ಜಾತ್ಯಾತೀತವಾಗಿ ಆಚರಿಸಿದಂತೆ, ನಮ್ಮ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರವನ್ನು ಎಲ್ಲ ವರ್ಗ, ಜಾತಿ ಮತ್ತು ಧರ್ಮದವರ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸೋಣ ಎಂದೂ ಹೇಳಿದರು.
ಮುಂದಿನ ಕೆಲವೇ ದಿನಗಳಲ್ಲಿ ನಮ್ಮ ಕೂಡ್ಲಿಗಿ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸಲು ಹಾಗೂ ಅದರ ಜೊತೆಗೆ ಕೂಡ್ಲಿಗಿ ಪಟ್ಟಣಕ್ಕೆ ಕುಡಿಯುವ ನೀರಿನ ಕಾಮಗಾರಿಯ ಶಂಕುಸ್ಥಾಪನೆಗೆ ಚಾಲನೆ ನೀಡುತ್ತೇವೆ ಎಂದೂ ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಎಂ. ರೇಣುಕಾ, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪನಾಯಕ, ಉಪಾಧ್ಯಕ್ಷರಾದ ಲೀಲಾವತಿ ಕೆ. ಪ್ರಭಾಕರ್, ಸ್ಥಾಯಿಸಮಿತಿಯ ಸದಸ್ಯರಾದ ಸಯ್ಯದ್ ಅಹಮದ್ ಶೂಕರ್ ಬಾಯಿ, ಪಟ್ಟಣ ಪಂಚಾಯತಿಯ ಸರ್ವ ಸದಸ್ಯರು, ಕೂಡ್ಲಿಗಿ ಬ್ಲಾಕ್ ಅಧ್ಯಕ್ಷರಾದ ಎಂ. ಗುರುಸಿದ್ದನಗೌಡ, ವಾಲ್ಮೀಕಿ ಸಮುದಾಯ ಸಂಘಟನೆಕಾರ ಸುರೇಶ್, ಪ್ರಾಧ್ಯಾಪಕರಾದ ಡಾ. ಅಮರೇಶ ಯತಗಲ್, ಮುಖಂಡರಾದ ನರಸಿಂಹಗಿರಿ ಎಸ್ ವೆಂಕಟೇಶ, ಉದಯಜನ್ನು, ದೀನಾ ಮಂಜುನಾಥ, ಮಾದೀಹಳ್ಳಿ ನಜೀರ್, ಹರವದಿ ಈರಣ್ಣ, ಕಾಂಗ್ರೆಸ್ ವಕ್ತಾರ ಜಿಲಾನ್, ಕೆಪಿಸಿಸಿ ಸದಸ್ಯರಾದ ಉಮೇಶ, ಡಿಎಸ್ ಎಸ್ ಮುಖಂಡರಾದ ಗಂಗಾಧರ, ರೈತಮುಖಂಡ ಮಹೇಶ್, ಮಾಜಿ ತಾ. ಪಂ. ಸದಸ್ಯರಾದ ಕುರಿಹಟ್ಟಿ ಬೋಸಣ್ಣ, ಜುಮ್ಮೋಬನಹಳ್ಳಿ ಜಿ. ಓ. ಓಬಣ್ಣ, ಹೂಡೇಂ ಪಾಪನಾಯಕ, ಪಟ್ಟಣದ ಹಿರಿಯರು, ಮಹಿಳೆಯರು, ಯುವಕರು, ಸಾರ್ವಜನಿಕರು, ಪತ್ರಕರ್ತರು ಉಪಸ್ಥಿತರಿದ್ದರು…
ವರದಿ, ಅನಿಲ್ ಹುಲಿಕುಂಟೆ, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030