ಜನ ಪರ ಯೋಜನೆಗಳನ್ನು ರೂಪಿಸಿ ಅಸಮಾನತೆ ತೊಲಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. -ಸನ್ಮಾನ್ಯ ಸಿ. ಎಂ.ಸಿದ್ದರಾಮಯ್ಯನವರು
ಸಂಡೂರು ಪಟ್ಟಣದ ವಿಶ್ವಾಸ ಯು. ಲಾಡ್ ಮೈದಾನದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ನವರು ದಿ.14-10-2024 ರಂದು ಸಾಧನಾ ಸಮಾವೇಶ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆ ಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದರು.
ನಮ್ಮ ಸರ್ಕಾರದಿಂದ ಸಂಡೂರು ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ 400 ಕೋಟಿ ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ತಂದು ವಿವಿಧ ಕಾಮಗಾರಿಗಳಾದ ಪೊಲೀಸ್ ಠಾಣೆ, ಪದವಿ ಪೂರ್ವ ಕಾಲೇಜು, 200 ಹಾಸಿಗೆಗಳ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿದ್ಯುತ್ ಕೇಂದ್ರ ಘಟಕ ಸ್ಥಾಪನೆ, ಬಸ್ ನಿಲ್ದಾಣ, 58 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಕನಕ ಭವನ, ವೀರಶೈವ ಲಿಂಗಾಯತ, ಮೇದಾರ, ಯಾದವ, ಗೊಲ್ಲ, ಮಡಿವಾಳ ಇನ್ನೂ, 13 ಸಮುದಾಯ ಭವನಗಳ ಶಂಕುಸ್ಥಾಪನೆಯನ್ನು ಸನ್ಯಾನ್ಯ ಮುಖ್ಯಮಂತ್ರಿಗಳು ನೆರವೇರಿಸಿದರು ಅದರ ಜೊತೆಗೆ, ಸಂಡೂರು ತಾಲೂಕಿನ ನಾರಿಹಳ್ಳ ಕಿರು ಜಲಾಶಯಕ್ಕೆ ಬಾಗಿನ ಅರ್ಪಿಸಿ, ಭಕ್ತಿ ಮತ್ತು ಶ್ರದ್ಧೆಯಿಂದ ನಾಡಿನ ರೈತರ ಒಳಿತಿಗಾಗಿ ಗಂಗಾಪೂಜೆಯನ್ನು ನೆರವೇರಿಸಿದ್ದೇವೆ ಎಂದರು.
ಸನ್ಮಾನ್ಯ ಮುಖ್ಯಮಂತ್ರಿಗಳು ಮಾತನಾಡುತ್ತಾ, ನಮ್ಮ ಸರ್ಕಾರ ಹಲವಾರು ಜನ ಪರ ಯೋಜನೆಗಳನ್ನು ಜಾರಿಗೆ ತಂದು ನಾಡಿನ ರೈತರು, ಕಾರ್ಮಿಕರು, ದಲಿತರು, ಹಿಂದುಳಿದ, ಅಲ್ಪಾ ಸಂಖ್ಯಾತ ಮತ್ತು ಎಲ್ಲಾ ವರ್ಗದ ಬಡವರಿಗೆ ಯಾವುದೇ ಭೇದ ಭಾವ ಇಲ್ಲದಂತೆ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ, ಜನರ ಏಳಿಗಾಗಿ ಶ್ರಮಿಸಲು ನಮ್ಮ ಸರ್ಕಾರ ಸದಾಕಾಲವೂ ಬದ್ಧವಾಗಿದೆ ಎಂದೂ ಹೇಳಿದರು. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯ ಸರ್ಕಾರಕ್ಕೆ ಬರಬೇಕಾದ ತೆರಿಗೆ ಹಣದಲ್ಲಿ ತಾರತಮ್ಯ ಮಾಡಲಾಗುತ್ತದೆ ಎಂದೂ ಪ್ರತಿಯೊಂದು ಅಂಶಗಳನ್ನು ಎಳೆ ಎಳೆಯಾಗಿ ವಿವರಿಸಿದರು.
ಹಾಗೆಯೇ ಇದುವರೆಗೂ ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲು ಇಟ್ಟ ಹಣವನ್ನು ಬಳಸುವಲ್ಲಿ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಹಂತದಲ್ಲಿ ಅಸಮಾನತೆಯ ಸಂಗತಿಗಳನ್ನು ಸಮಾವೇಶದಲ್ಲಿ ಎತ್ತಿ ಇಡಿದರು.
ಒಟ್ಟಿನಲ್ಲಿ ಈ ದಿನ ಸಂಡೂರು ಪಟ್ಟಣದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು ಮತ್ತು ಶಾಸಕರನ್ನು ಒಳಗೊಂಡಂತೆ ಕರ್ನಾಟಕ ಘನ ಸರ್ಕಾರದ ಪರವಾಗಿ ಅನೇಕ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಅರ್ಥ ಪೂರ್ಣ ಸಮಾವೇಶವನ್ನು ಹಮ್ಮಿಕೊಂಡಿದ್ದರು* ಎಂಬುದನ್ನು ಗಮನಿಸಬೇಕು.
ಈ ಸಂದರ್ಭದಲ್ಲಿ ಸನ್ಯಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್, ಸನ್ಮಾನ್ಯ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಸನ್ಮಾನ್ಯ ಬಳ್ಳಾರಿ ಉಸ್ತುವಾರಿ ಮತ್ತು ವಸತಿ ಸಚಿವರಾದ ಶ್ರೀ. ಬಿ. ಜಡ್, ಜಮೀರ್ ಅಹ್ಮದ್ ಖಾನ್, ಸನ್ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್. ಎಸ್. ಲಾಡ್, ಬಳ್ಳಾರಿ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ
ಈ. ತುಕಾರಾಂ, ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ ಅವರು, ಕಂಪ್ಲಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಶ್ರೀ ಜೆ. ಎನ್. ಗಣೇಶ, ಸಿರುಗುಪ್ಪ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಬಿ. ಎಂ. ನಾಗರಾಜ, ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ನಾರಾ ಭರತ್ ರೆಡ್ಡಿ , ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಮುಂಡರಗಿ ನಾಗರಾಜ , ಕೆ. ಎ. ಎಫ್ ಅಧ್ಯಕ್ಷರಾದ ಭೀಮಾ ನಾಯ್ಕ್ , ಹಿರಿಯ ನಾಯಕರಾದ ಅಲ್ಲಂ ವೀರಭದ್ರಪ್ಪ ಅವರನ್ನು ಸೇರಿದಂತೆ ಹಲವಾರು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಸಂಡೂರು ವಿಧಾನ ಸಭಾ ಕ್ಷೇತ್ರದ ವಿವಿಧ ಮೂಲೆಗಳಿಂದ ಬಂದಿರುವ ಸಹಸ್ರಾರು ಮುಖಂಡರು, ಅಸಂಖ್ಯಾತ ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿದ್ದರು…
ವರದಿ. ಅನಿಲ್ ಕುಮಾರ್, ಹುಲಿಕುಂಟೆ, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030