ಕೂಡ್ಲಿಗಿ ಕ್ಷೇತ್ರದ ಕೆ. ದಿಬ್ಬದಹಳ್ಳಿ ಗ್ರಾ. ಪಂ. ಸದಸ್ಯರಾದ ಪಾಲಯ್ಯ ನವರ ಮಗ ಚೇತನ್ ( 21) ಅವರು ಗಂಡ ಬೊಮ್ಮನಹಳ್ಳಿ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಕುಟುಂಬದದವರ ಜೊತೆ ವೀಕ್ಷಿಸಲು ಹೋದ ವೇಳೆ ಕಾಲು ಜಾರಿ ಬಿದ್ದು ಇಂದು ನಿಧನರಾದರು. ವಿಷಯ ತಿಳಿದ ನಂತರ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿ ದುಃಖದಲ್ಲಿರುವ ಕುಟುಂಬಕ್ಕೆ ಧೈರ್ಯ ತುಂಬಿ ಸಾಂತ್ವನ ಹೇಳಿ ಸಮದಾನ ಪಡಿಸಿದರು. ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಸರ್ಕಾರದಿಂದ ಬರುವ ಪರಿಹಾರವನ್ನು ಒದಗಿಸಿ ಕೊಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗಂಡಬೊಮ್ಮನಹಳ್ಳಿ ಗ್ರಾ. ಪಂ. ಅಧ್ಯಕ್ಷರಾದ ಓಬಮ್ಮ, ಉ. ಅ. ಬಸವರಾಜ, ಸರ್ವ ಸದಸ್ಯರು, ಮುಖಂಡರಾದ ವೆಂಕಟೇಶ, ಸಣ್ಣ ಚೆನ್ನಪ್ಪ, ದೊಡ್ಡ ಚೆನ್ನಪ್ಪ, ಲಾಯರ್ ಪಾಪಣ್ಣ, ಗುಂಡುಮುಣುಗು ಮಂಜಣ್ಣ, ಪೊಲೀಸ್ ಆಂಜನೇಯ, ನಡುವಲಹಳ್ಳಿ ಕುಮಾರಸ್ವಾಮಿ, ಊರಿನ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು…
ವರದಿ. ಅನಿಲ್ ಕುಮಾರ್ ಹುಲಿಕುಂಟೆ, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030