ಸಮಾಜ ಬದಲಾವಣೆಗಾಗಿ ಸಂದೇಶ ಸಾರುವ ನಿಟ್ಟಿನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸೋಣ- ಶಾಸಕ ಡಾ. ಶ್ರೀನಿವಾಸ್. ಎನ್. ಟಿ..
ಕೂಡ್ಲಿಗಿ ತಾಲೂಕಿನ ಆಡಳಿತ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 07-10-2024 ರಂದು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಷ್ಟಾಚಾರದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘಟನೆಕಾರರು, ವಾಲ್ಮೀಕಿ ಸಮುದಾಯದ ಗಣ್ಯರು, ಹಿರಿಯರು, ಮಹಿಳೆಯರು, ಯುವಕರು, ಎಲ್ಲಾ ವರ್ಗದ ಬಂಧುಗಳು ಒಳಗೊಂಡಂತೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನೂ, ಕಲೆ ಮತ್ತು ಸಂಸ್ಕೃತಿಯನ್ನು ಅನಾವರಣ ಮಾಡುವ ನಿಟ್ಟಿನಲ್ಲಿ ಅರ್ಥ ಪೂರ್ಣವಾಗಿ ಆಚರಿಸೋಣ ಎಂದರು.
ಶಾಸಕರು ಸಭೆಯಲ್ಲಿ ವಿವಿಧ ಸಲಹೆಗಳು, ಅಭಿಪ್ರಾಯಗಳು, ಅನಿಸಿಕೆಗಳನ್ನು ಗಮನಹರಿಸುತ್ತಾ, ಪ್ರತಿಯೊಂದು ವಿಚಾರಕ್ಕೆ ಸಂಬಂಧಿಸಿದಂತೆ ಕಮಿಟಿಗಳನ್ನು ಮಾಡೋಣ. ವಾಲ್ಮೀಕಿ ಸಮುದಾಯ ಮತ್ತು ಇತರ ಸಮುದಾಯಗಳ ಸಾಧಕರನ್ನು ಗುರುತಿಸಿ ಸನ್ಮಾನ ಮಾಡೋಣ ಎಂದರು. ನಮ್ಮಲ್ಲಿ ಬಡತನ ಇವತ್ತಿನದು ಅಲ್ಲ. ಹಿಂದಿನಿಂದಲೂ ಬಂದಿದೆ. ಒಂದೇ ದಿನಕ್ಕೆ ಎಲ್ಲವನ್ನೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಸಹಕಾರದಿಂದ ನಮ್ಮ ಕೂಡ್ಲಿಗಿ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರಾದ ಎಂ. ರೇಣುಕಾ, ವಿವಿಧ ತಾಲೂಕು ಅಧಿಕಾರಿಗಳು, ಪ.ಪಂ.ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪ ನಾಯಕ, ಸ್ಥಾಯಿ ಸಮಿಯತಿಯ ಸದಸ್ಯರಾದ ಸಯ್ಯದ್ ಶೂಕರ್ ಅಹಮದ್, ಪ. ಪಂ. ಸರ್ವಸದಸ್ಯರು, ವಿವಿಧ ಸಂಘಟನೆಯಕಾರರು, ವಾಲ್ಮೀಕಿ ಸಮುದಾಯ ಸಂಘಟನೆಯಕಾರ ಸುರೇಶ, ಮುಖಂಡರಾದ ಜಿಂಕಲ್ ನಾಗಮಣಿ, ತಮ್ಮಣ್ಣ ಎನ್. ವಿ, ಪ್ರಕಾಶ, ಸೂರ್ಯಪಾಪಣ್ಣ, ಉಮೇಶ, ಸಿದ್ದಪ್ಪ, ಬೋಸಣ್ಣ, ಬುಡ್ಡಾರೆಡ್ಡಿ , ಮಂಜಣ್ಣ, ಮಹಾಂತೇಶ, ಪಾಪನಾಯಕ, ದೊಡ್ಡಪ್ಪ, ಗುರುಲಿಂಗಪ್ಪ, ಮಲ್ಲೇಶ, ಕಲ್ಲೇಶ, ಓಬಣ್ಣ, ಅಶೋಕದೊರೆ, ಟೈಲರ್ ನಾಗರಾಜ, ಟೈಲರ್ ಬಸವರಾಜ ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಅನಿಲ್ ಕುಮಾರ್ ಹುಲಿಕುಂಟೆ, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030