ನರೇಗಾ ಸಮಸ್ಯೆಗಳ ಇತ್ಯಾರ್ಥಕ್ಕಾಗಿ ವಿಜಯನಗರ ಜಿಲ್ಲೆಯಿಂದ ಶ್ರೀ ಮಾನ್ಯ ಮುಖ್ಯಮಂತ್ರಿಗಳಿಗೆ ನರೇಗ ಕಾರ್ಮಿಕರಿಂದ ಬೇಡಿಕೆಗಳ ಮನವಿ…
ವಿಜಯನಗರ ಜಿಲ್ಲೆ ನರೇಗಾ ಸಮಸ್ಯೆಗಳು ಇತ್ಯರ್ತಕ್ಕಾಗಿ ನರೇಗಾ ಯೋಜನೆಯಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ ಸದರಿ ಯೋಜನೆ ಅಡಿಯಲ್ಲಿ ಎನ್ ಎಂ ಎಂ ಎಸ್ ಆಪ್ ತಂತ್ರಾಂಶವನ್ನು ನಿಲ್ಲಿಸಬೇಕು ಅಥವಾ ಸರಿಪಡಿಸಿಕೊಡಬೇಕು , 2024 25 ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ನರೇಗಾ ಯೋಜನೆಗೆ ಇಟ್ಟ ಹಣವು ಕಡಿಮೆ ಇರುವುದರಿಂದ ಅನುದಾನ ಹೆಚ್ಚಿಸಬೇಕು, ಶಾಪಿಂಗ್ ಚಾರ್ಜಸ್ 40ಗಳಿಗೆ ಮಾತ್ರ ನಿಗದಿಪಡಿಸಬೇಕು, ಕೇಂದ್ರ ಸರ್ಕಾರದಿಂದ ಪ್ರತಿ ವರ್ಷಕ್ಕೆ 200 ಮಾನವ ದಿನಗಳ ಕೆಲಸ ನಿಗದಿಪಡಿಸಬೇಕು, ನರೇಗಾ ಕೂಲಿಗಳನ್ನು ರೂಪಾಯಿ 500ಕ್ಕೆ ಏರಿಸಬೇಕು, ನರೇಗಾ ಸ್ಥಳದಲ್ಲಿ ಮೃತ ಕುಟುಂಬಕ್ಕೆ 5 ಲಕ್ಷಗಳ ಪರಿಹಾರ ನಿಗದಿಪಡಿಸಬೇಕು, ವಿಶೇಷ ಚೇತನರಿಗೆ ಪ್ರತ್ಯೇಕ ಜಾಬ್ ಕಾರ್ಡ್ ಗಳನ್ನು ನೀಡಬೇಕು, ಹೊಸ ರೇಷನ್ ಕಾರ್ಡಿಗೆ ಸಮಯವನ್ನು ಹೆಚ್ಚುವರಿ ಮಾಡಬೇಕು, ವೃದ್ಯಾಪಿ ವೇತನವನ್ನು ಹೆಚ್ಚಿಸಬೇಕು, ನಿವೇಶನ ರೈತರಿಗೆ ನಿವೇಶನ ಹಂಚಿಕೆ ಮಾಡಬೇಕು, ವಿದ್ಯಾರ್ಥಿ ವೇತನಗಳನ್ನು ಸಕಾಲದಲ್ಲಿ ಬರುವಂತೆ ಮಾಡಬೇಕು, ಎನ್.ಎಂ.ಎಂ.ಎಸ್. ಫೇಸ್ ಲಾಕ್ ರದ್ದುಪಡಿಸಬೇಕು, ಸರ್ಕಾರದಿಂದ ಕೂಸಿನ ಮನೆಗೆ ಆದ್ಯತೆ ನೀಡಬೇಕು, ಈ ಮೇಲ್ಕಂಡಂತೆ ಎಲ್ಲಾ ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಂಬಂಧಿಸಿದೆ ಅಧಿಕಾರಿಗಳಿಗೆ ಸೂಚಿಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಪ್ರತಿ ಹಳ್ಳಿಗೆ ತೆರಳಿ ಕಾರ್ಮಿಕರಿಗೆ ಮಾಹಿತಿ ನೀಡಿದರು…
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030