ಕೂಡ್ಲಿಗಿ ತಾಲೂಕಿನ ದೀರ್ಘ ಕನಸುಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಜೊತೆ ಚರ್ಚೆ ನಡೆಸಿದ ಶಾಸಕ ಡಾ. ಶ್ರೀನಿವಾಸ್ ಎನ್ ಟಿ
ದಿನಾಂಕ 21.09.2024 ರಂದು ಬೆಂಗಳೂರಿನ ರಾಜಾಜಿನಗರದ ಶೆರಟನ್ ಗ್ಯಾಂಡ್ ನಲ್ಲಿ ನಡೆದ ಜೀನ್ ಥೆರಪಿ ಮತ್ತು ನಿಖರವಾದ ಔಷಧ ಸಮ್ಮೇಳನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟಕರಾಗಿ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಡಾ. ಡಿ ವೈ ಚಂದ್ರಚೂಡ್ ರವರ ಜೊತೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ ಎನ್ ಟಿ ರವರು ಆಹ್ವಾನಿತ ಅತಿಥಿಗಳಾಗಿ ಮಾತನಾಡಿ,
ನಾನು ಪ್ರತಿನಿಧಿಸಿರುವ ಕೂಡ್ಲಿಗಿ ಕ್ಷೇತ್ರದಲ್ಲಿ ಅನುವಂಶಿಕ ರೋಗದ ತೀವ್ರತೆ, ಸಾಮಾಜಿಕ ನಿರ್ಣಾಯಕ ಅಂಶಗಳಲ್ಲಿ ಮುಖ್ಯವಾಗಿ ಬಡತನ, ರೋಗದ ಹೊರೆ, ಸಾಮಾಜಿಕ ಕಟ್ಟುಪಾಡುಗಳಾದ ಅಜ್ಞಾನ ,ಅನಕ್ಷರತೆ , ಅಂಧ ಶ್ರದೆಗಳ ಕಾರಣದಿಂದಾಗಿ ಸಾಕಷ್ಟು ಅಳವಾಗಿ ಬೇರೂರಿರುವ ಮೌಡ್ಯತೆ-ಕಂದಾಚಾರದಿಂದ ರಕ್ತ ಸಂಬಂಧ ವಿವಾಹದಿಂದಾಗಿ ಮಗುವಿನ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಹುಟ್ಟುವ ಮಗುವಿಗೆ ತಪ್ಪುತಿಲ್ಲ ಆರೋಗ್ಯದ ಸಮಸ್ಯೆ! ಮಗುವಿನ ಕಡಿಮೆ ತೂಕ, ರೋಗನಿರೋಧಕ ಶಕ್ತಿಯ ಕೊರತೆ, ಅವಧಿ ಪೂರ್ವಜನನ, ಬಾಲ್ಯ ವಿವಾಹಗಳು, ಮಹಿಳೆಯರು ಮತ್ತು ಮಕ್ಕಳಲ್ಲಿ ರಕ್ತ ಹೀನತೆ,ಸಾಮಾಜಿಕ ಕಟ್ಟುಪಾಡುಗಳಲ್ಲಿ ನನ್ನ ವಿಧಾನಸಭಾ ಕ್ಷೇತ್ರ ಮುಂದೆ ಇದೆ ಎಂದು ಕಳವಳ ವ್ಯಕ್ತಪಡಿಸಿ ಸಾಕ್ಷರತೆ, ವರ್ತಮಾನದ ಸಮಸ್ಯೆ ಬಿಂಬಿಸುವ ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನನ್ನ ಮೊದಲ ಆದ್ಯತೆ ಎಂದು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಗೌರವ ಅತಿಥಿಯಾಗಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ರವರು, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಹಾಗೂ ನಾರಾಯಣ ನೇತ್ರಾಲಯದ ಅಧ್ಯಕ್ಷರಾದ ಡಾ. ರೋಹಿತ್ ಶೆಟ್ಟಿ, ಕರ್ನಾಟಕ ನೇತ್ರ ತಜ್ಞರ ಸಂಘದ ಅಧ್ಯಕ್ಷರಾದ ಡಾ. ಕೃಷ್ಣನ್ ರವರು ಹಾಗೂ ಉಪಸ್ಥಿತರಿದ್ದರು…
ವರದಿ, ಅನಿಲ್ ಕುಮಾರ, ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030