ಸಮಸ್ತ ನಾಡಿನ ಜನತೆಗೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಮತ್ತು ವಿಶ್ವಕರ್ಮ ಜಯಂತಿಯ ಶುಭಾಶಯಗಳು
ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ, ಕಲ್ಯಾಣ ಕರ್ನಾಟಕ ಉತ್ಸವ ಹುಲಿಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ಮಾಡಲಾಯಿತು
ಪ್ರತಿ ವರ್ಷ ಮಾಘ ಮಾಸದ ಪ್ರಕಾಶಮಾನವಾದ ಅರ್ಧದ 13ನೇ ದಿನದಂದು ಆಚರಿಸಲಾಗುವ ಮಂಗಳಕರ ಹಿಂದು ಹಬ್ಬವಾಗಿದೆ. ಭಗವಾನ್ ವಿಶ್ವಕರ್ಮನನ್ನು ಬ್ರಹ್ಮಾಂಡದ ಮೊದಲ ವಾಸ್ತುಶಿಲ್ಪಿ ಅಥವಾ ಇಂಜಿನಿಯರ್ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಜನರು ತಮ್ಮ ಕೆಲಸದ ಸ್ಥಳಗಳಲ್ಲಿ ಅವರ ಅಂಗಡಿಗಳು, ಕಾರ್ಖಾನೆಗಳು ಮತ್ತು ಇತರರ ಸಂಸ್ಥೆಗಳಲ್ಲಿ ಅವರನ್ನು ಪೂಜಿಸುತ್ತಾರೆ. ವಿಶ್ವಕರ್ಮರು, ಮಹಾದೇವನ ತ್ರಿಶೂಲ, ಸುದರ್ಶನ ಚಕ್ರ, ಮತ್ತು ಇತರ ಹಲವಾರು ದೇವರ ಆಯುಧಗಳನ್ನು ಚಿತ್ರಿಸಿದ್ದಾರೆ ಸ್ವರ್ಗದಲ್ಲಿ ದೇವತೆಗಳಿಗೆ ಅರಮನೆ ನಿರ್ಮಿಸಿದವರು ಈ ವಿಶ್ವಕರ್ಮರು ದೇವರ ಆಯುಧಗಳು ,ಅವರ ವಾಹನಗಳ ನಿರ್ಮಾತೃ ಕೂಡ ಇದೇ ವಿಶ್ವಕರ್ಮರು ವಾಸ್ತು ಶಾಸ್ತ್ರದ ಪಿತಾಮಹ ಹೀಗಾಗಿ ಪ್ರತಿ ವರ್ಷ ಒಂದು ದಿನ ಇವರಿಗೆ ಪೂಜೆ ಸಲ್ಲಿಸಲಾಗುತ್ತದೆ ಇದೇ ಸೆಪ್ಟಂಬರ್ 17ರಂದು. ವಿಶ್ವಕರ್ಮ ಜಯಂತಿಯ ಹಾರ್ದಿಕ ಶುಭಾಶಯಗಳು ಹಾಗೆಯೇ ಹೈದರಾಬಾದ್ ಕರ್ನಾಟಕ ವಿಮೋಚನೆ ದಿನವನ್ನು ಅಧಿಕೃತವಾಗಿ ಕಲ್ಯಾಣ ಕರ್ನಾಟಕ ಜನ ಎಂದು ಕರೆಯಲಾಗುತ್ತದೆ ಬೀದರ್, ಕಲುಬುರಗಿ,ಯಾದಗಿರಿ,ಕೊಪ್ಪಳ, ರಾಯಚೂರು ,ಬಳ್ಳಾರಿ,ವಿಜಯನಗರ ಈ ಏಳು ಜಿಲ್ಲೆಗಳಲ್ಲಿ ಆಚರಿಸುವ ವಾರ್ಷಿಕ ಹಬ್ಬವಾಗಿದೆ. ಭಾರತದ ವಿಭಜನೆ ಮತ್ತು ಹೈದರಾಬಾದ್ ರಾಜ್ಯದಲ್ಲಿನ ದಂಗೆಗಳ ನಂತರ 1948ರಲ್ಲಿ ಭಾರತವು ಹೈದರಾಬಾದ್ ಅನ್ನು ಸ್ವಾಧೀನಪಡಿಸಿಕೊಂಡ ದಿನ ಈ ಸಮಯದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಇಂದ್ರಮ್ಮ ಮಲಿಯಪ್ಪ, ಕೆ ನಾಗರಾಜ್ ಎಸ್,ಡಿ,ಎಂ,ಸಿ ಅಧ್ಯಕ್ಷರಾದ ಕೊಟ್ರೇಶ್, ಸುರೇಶ್, ಬಸವರಾಜ್ ಶಾಲೆಯ ಮುಖ್ಯ ಗುರುಗಳಾದ ಜೆಎಂ . ವಾಸುರಾಮ್ ನಾಯ್ಕ್, ಸಹ ಶಿಕ್ಷಕರಾದ ಅಂಜಿನಪ್ಪ, ಸುಜಾತಾ, ಅತಿಥಿ ಶಿಕ್ಷಕಿಯಾದ ಗೀತಾ ರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು..
ವರದಿ:- ಅನಿಲ್ ಕುಮಾರ್ ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030