ಗಣಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಶ್ರೀರಕ್ಷ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬೆಳ್ಳಗಟ್ಟ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿರುವ ಗಣಿತ ಆಂದೋಲನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು ಈ ಗಣಿತ ಆಂದೋಲನ ಸ್ಪರ್ಧೆಯಲ್ಲಿ ಕರಡಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಶ್ರೀರಕ್ಷ ಇವರು ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.
ನಂತರ ಸಿ ಆರ್ ಪಿ ವಿಶಾಲ ಅವರು ಮಾತನಾಡಿ ಈ ಗಣಿತ ಆಂದೋಲನ ಸ್ಪರ್ಧೆಯಲ್ಲಿ 4ನೇ ತರಗತಿ ವಿದ್ಯಾರ್ಥಿನಿ ಶ್ರೀರಕ್ಷ ಅವರು ಗಣಿತ ಆಂದೋಲನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ನಮಗೂ ಮತ್ತು ನಮ್ಮ ಶಿಕ್ಷಕರಿಗೆ ಹೆಮ್ಮೆಯ ಸಂತಸವನ್ನುಂಟು ಮಾಡಿದೆ ಶ್ರೀರಕ್ಷರಂತೆ ನಮ್ಮ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ವಿದ್ಯಾಭ್ಯಾಸ ಕಲ್ಪಿಸಿ ಕೊಡಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಗಣಿತ ಆಂದೋಲನ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸರ್ವ ಸದಸ್ಯರು ಕರಡಿಹಳ್ಳಿ ಶಾಲೆಯ ಮುಖ್ಯ ಗುರುಗಳಾದ ನಾಗರಾಜ್ ಆಚಾರಿ ಸಹ ಶಿಕ್ಷಕಿ ಕೆ ಸರೋಜಮ್ಮ ಅತಿಥಿ ಶಿಕ್ಷಕ ಸಣ್ಣ ಬೋರಯ್ಯ ಹಾಗೂ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಎಲ್ಲಾ ಶಾಲೆಯ ಮುಖ್ಯ ಗುರುಗಳು ಸಹ ಶಿಕ್ಷಕರು ಅತಿಥಿ ಶಿಕ್ಷಕರು ಹಾಗೂ ಪುಟಾಣಿ ವಿದ್ಯಾರ್ಥಿಗಳು. ಇದ್ದರು…
ವರದಿ : ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030