ಗೌರಸಮುದ್ರ ಮಾರಮ್ಮ ಜಾತ್ರೆಯ ಪ್ರಯುಕ್ತ ಹಟ್ಟಿ ಹಬ್ಬ – ಊರ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ..
ಗೌರಸಮುದ್ರ ಮಾರಮ್ಮ ಜಾತ್ರೆ ಪ್ರಯುಕ್ತ ಕೂಡ್ಲಿಗಿ ಕ್ಷೇತ್ರದ ಪೂಜಾರಹಳ್ಳಿ, ಕನ್ನಿಬೋರಯ್ಯನಹಟ್ಟಿ, ಕಾತ್ರಿಕೆಹಟ್ಟಿ, ಹೂಡೇಂ ಗ್ರಾಮಗಳಿಗೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ;11-09-24 ರಂದು ಭೇಟಿ ನೀಡಿ ದೇವತೆಗಳಿಗೆ ಪೂಜೆ ಸಲ್ಲಿಸಿ, ಯಜಮಾನರು, ಮುಖಂಡರು ಮತ್ತು ಕಾರ್ಯಕರ್ತರ ಯೋಗ ಕ್ಷೇಮ ವಿಚಾರಿಸಿದರು. ಶಾಸಕರು ಮಾತನಾಡಿ,
ನಮ್ಮಲ್ಲಿ ಸಾಂಸ್ಕೃತಿಕ ನಾಯಕಿ ಗೌರಸಮುದ್ರದ ಮಾರಮ್ಮಳ ಹಟ್ಟಿ ಹಬ್ಬ ಮತ್ತು ಊರು ಹಬ್ಬಗಳು ಭೇದ ಭಾವ ಇಲ್ಲದಂತೆ ಎಲ್ಲರನ್ನೂ ಒಳಗೊಳ್ಳುವ ಸಾಮರಸ್ಯತೆಯನ್ನು ಬೆಸೆಯುವಂತದ್ದು ಅಭಿಮಾನದ ಸಂಗತಿ ಎಂದರು. ಹಳ್ಳಿಗಳ ಓಣಿ – ಕೇರಿ ಸುತ್ತಿ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು, ಅಂಗವಿಕಲರು, ವೃದ್ದರ ಸಮಸ್ಯೆಗಳನ್ನು ಆಲಿಸಿ ನಿಂತಲ್ಲೇ ಅಧಿಕಾರಿಗಳಿಗೆ ಕೆಲವು ಮಾಹಿತಿಯನ್ನು ನೀಡಿ ಬಗೆಹರಿಸಲು ಸೂಚಿಸಿದರು.
ಒಟ್ಟಿನಲ್ಲಿ ಸಂಭ್ರಮ ಮತ್ತು ಸಡಗರ ದಿಂದ ಹಳ್ಳಿಗಳ ಜನರ ಮಧ್ಯೆ ಜನಸಾಮಾನ್ಯರ ಶಾಸಕನಾಗಿ ಬೆರೆತರು. ಈ ವೇಳೆ ಮುಖಂಡರಾದ ಮಾಜಿ ತಾ.ಪಂ. ಸದಸ್ಯರಾದ ಶ್ರೀಮತಿ ನೇತ್ರಮ್ಮ ಓಬಣ್ಣ, ಹೂಡೇಂ ಗ್ರಾ. ಪಂ. ಅಧ್ಯಕ್ಷರಾದ ರಾಮಚಂದ್ರ, ಮುಖಂಡರಾದ ಬೋಸೆಮಲ್ಲಯ್ಯ, ಉಪ್ಪಾರ ವೆಂಕಟೇಶ, ಸೂರ್ಯ ಪ್ರಕಾಶ, ದಾಸಣ್ಣ, ಓಬಣ್ಣ, ಪಾಲಕ್ಷ, ಪಾಲಣ್ಣ ಹಾಗೂ ಪ್ರಾಧ್ಯಾಪಕರಾದ ಡಾ. ವಿರೂಪಾಕ್ಷ ಪೂಜಾರಹಳ್ಳಿ, ಡಾ. ಸಿದ್ದಣ್ಣ ಕಿಲಾರಿ, ಮುಖ್ಯ ಶಿಕ್ಷಕರಾದ ಕರಿಬಸಪ್ಪ, ದಳವಾಯಿ ಬೋರಣ್ಣ, ಸಹಶಿಕ್ಷಕಾರದ ಬಿ. ಬಿ. ಬೋರಯ್ಯ, ಡಿ. ಬಿ. ಪಾಲಕ್ಷ ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಅನಿಲ್ ಕುಮಾರ್, ಹುಲಿಕುಂಟೆ, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030