ಮಾಜಿ ದೇವದಾಸಿಯರೊಂದಿಗೆ ಸಂಭ್ರಮದಿಂದ ಗಣೇಶನ ಹಬ್ಬ ಆಚರಿಸಿದ ಶಾಸಕ – ಡಾ. ಶ್ರೀನಿವಾಸ್ .ಎನ್. ಟಿ
ಕೂಡ್ಲಿಗಿ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 07-09-24 ರಂದು ಪಟ್ಟಣದ ಅಂಬೇಡ್ಕರ್ ನಗರದ ಮಾಜಿ ದೇವದಾಸಿಯರೊಂದಿಗೆ ಶ್ರೀ ಗಣೇಶನ ಹಬ್ಬ ಆಚರಿಸಿ ಸಂಭ್ರಮಿಸಿದರು. ಅವರು ಭಕ್ತಿ – ಭಾವದಿಂದ ಪ್ರಸಾದ ಸ್ವೀಕರಿಸಿದರು.. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಅಂದು ಮುಂಬೈ ನಗರದ ಕಾಮಾಟಿಪುರದ ದೇವದಾಸಿಯರೊಂದಿಗೆ ಮಾತನಾಡುತ್ತಾ, ಸ್ವಾಭಿಮಾನದಿಂದ ಬದುಕುವಂತೆ ಕರೆನೀಡಿದರು. ಅದೇ ರೀತಿ ಇಂದು ಶಾಸಕರು, ಕೂಡ್ಲಿಗಿಯ ಅಂಬೇಡ್ಕರ್ ನಗರದ ದೇವದಾಸಿಯರೊಂದಿಗೆ ಮಾತನಾಡಿ, ಕಷ್ಟ ಸುಖ ವಿಚಾರಿಸಿ ಕುಂದುಕೊರತೆ ಆಲಿಸಿದರು. ಶೋಷಿತರ ಮತ್ತು ದಲಿತರ ಪರ ಕೆಲಸ ಮಾಡಲು ಬಂದಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ದೇವದಾಸಿಯರ ಹಕ್ಕುಗಳಿಗೆ ಚ್ಯುತಿ ಬರದಂತೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿಕೊಡುತ್ತೇನೆ ಎಂದರು. ಬಡವರಿಗೆ ವಸತಿ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ಕಲ್ಪಿಸಿಕೊಡುತ್ತೇನೆ ಎಂದೂ ತಿಳಿಸಿದರು. ಈ ವೇಳೆ ಪ. ಪಂ. ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪ ನಾಯಕ, ಪ. ಪಂ. ಸದಸ್ಯರಾದ ದಾಣಿ ಚೌಡಮ್ಮ, ಜಯಮ್ಮನವರ ರಾಘು, ಮುಖಂಡರಾದ ಬಂಗಾರು ಹನುಮಂತ, ದಾಣಿ ರಾಘು, ಸುರೇಶ್ ಎಸ್, ಈಶಪ್ಪ, ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಅನಿಲ್ ಕುಮಾರ್, ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030