J.M.ವಾಸುರಾಮ್ ನಾಯ್ಕ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ…
ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ, ಕಾನಹೊಸಹಳ್ಳಿ ಗಾಣಿಗರ ಸಮುದಾಯ ಭವನ ವೇದಿಕೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ 2024 -25 ನೇ ಸಾಲಿನ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನೀಡಲಾಗುವ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟವಾಗಿದ್ದು ಕೂಡ್ಲಿಗಿ ತಾಲೂಕಿನ JM ವಾಸುರಮ್ ನಾಯ್ಕ ಎಂಬ ಶಿಕ್ಷಕ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಾಲೂಕಿನ ಸಿಎಸ್ ಪುರ ಕ್ಲಸ್ಟರ್ ವ್ಯಾಪ್ತಿಯ ಹುಲಿಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಜೆಎಂ ವಾಸೂರಮ್ ನಾಯ್ಕ ಅವರು ಮೊದಲ ಶಾಲೆ 13/01/ 1997ರಿಂದ29/07/2005 ಗೊಲ್ಲ ನಾಗೇನಹಳ್ಳಿ ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲೂಕು, ದಿನಾಂಕ 01/08/2005 ರಿಂದ 18/ 6 /2018 ರವರೆಗೆ ಗೆದ್ದಲಗಟ್ಟಿ ಶಾಲೆ ,19/06/2024 ರಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಲಿಕುಂಟೆ. ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲೂಕು, ನಾಗೇನಹಳ್ಳಿ 2021 ನೇ ಸಾಲಿನಲ್ಲಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ ಪಡೆದಿರುತ್ತಾರೆ. ಈ ಕುರಿತು ಮಾತನಾಡಿದ ಅವರು ನಾನು ಯಾವ ಪ್ರಶಸ್ತಿಯನ್ನು ನಿರೀಕ್ಷೆ ಮಾಡಿರಲಿಲ್ಲ ನನ್ನ ಶಿಕ್ಷಣ ವೃತ್ತಿಯ ಸೇವೆಯನ್ನು ಗುರುತಿಸಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿರುವುದು ಸಂತೋಷ ನೀಡಿದೆ ಎಲೆ ಮರಿ ಕಾಯಿಯಂತೆ ಇರುವ ನನಗಿಂತಲೂ ಉತ್ತಮ ಸಾಧಕರಿಗೆ ಈ ಪ್ರಶಸ್ತಿ ಸಮರ್ಪಣೆ ಎಂದು ಸೇವೆ ಗುರುತಿಸಿ ಆಯ್ಕೆ ಮಾಡಿದ ಎಲ್ಲ ಸಿಬ್ಬಂದಿಗೂ ಅನಂತ ಧನ್ಯವಾದಗಳು ಎಂದರು ವಾಸುರಾಮ್ ನಾಯ್ಕ್ ಶಿಕ್ಷಕರು ತಾಲೂಕು ಮಟ್ಟದ ಉತ್ತಮ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಸಿಎಸ್ ಪುರ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಿಕ್ಷಕರು, ಶಿಕ್ಷಣ ಪ್ರೇಮಿಗಳು, ಸ್ನೇಹಿತರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಹುಲಿಕುಂಟೆ ಗ್ರಾಮದ ಸಮಸ್ತ ಗ್ರಾಮಸ್ಥರು , SDMC ಅಧ್ಯಕ್ಷರು, ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಸದಸ್ಯರು ಹಾಗೂ CRP ವಿಶಾಲ ಮೇಡಂ ಶಾಲೆಯ ಸಹಶಿಕ್ಷಕರಾದ ಅಂಜಿನಪ್ಪ, ಸುಜಾತ ,ಮತ್ತು ಅತಿಥಿ ಶಿಕ್ಷಕಿಯಾದ ಗೀತಾ ಇವರು ಅಭಿನಂದಿಸಿದರು…
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030