ಗುಡ್ಡಗಾಡು ಹಂಚಿನಲ್ಲಿ ಇರುವ ಹಳ್ಳಿಗಳ ಅಭಿವೃದ್ಧಿಗೆ ಕೈ ಜೋಡಿಸುವೆ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ *ಕಾಟ್ರಹಳ್ಳಿ -ಹರವದಿ ಮುಖ್ಯರಸ್ತೆಯಿಂದ ಗೆದ್ದಲಗಟ್ಟೆ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣದ ಭೂಮಿ ಪೂಜೆಯನ್ನು ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ . ಎನ್. ಟಿ. ಅವರು ಗೆದ್ದಲಗಟ್ಟೆ ಗ್ರಾಮದಲ್ಲಿ ದಿ; 04-09-24 ರಂದು ನೆರವೇರಿಸಿ ಮಾತನಾಡಿದರು. ಗುಡ್ಡ ಗಾಡಿನ ಹಂಚಿನಲ್ಲಿ ಇರುವ ಪ್ರತಿ ಊರುಗಳ ಅಭಿವೃದ್ಧಿಗೆ ಒತ್ತು ಕೊಡುವೆ ಎಂದೂ ಹೇಳಿದರು. ಹಾಗೆಯೇ ಸ್ಥಳೀಯ ಮಟ್ಟದಲ್ಲಿ ಊರಿನ ಕುಂದುಕೊರತೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಕೊಟ್ಟೂರು ಎಪಿಎಂಸಿ ಮಾಜಿ ಅಧ್ಯಕ್ಷರಾದ ತಮ್ಮಣ್ಣ ಎನ್.ವಿ, ಜರ್ಮಲಿ ಗ್ರಾ. ಪಂ. ಅಧ್ಯಕ್ಷರಾದ ಚೆನ್ನಮ್ಮ ರಾಮಣ್ಣ , ಸದಸ್ಯರು, ಗುತ್ತಿಗೆದಾರರು, ಅಧಿಕಾರಿಗಳು, ಊರಿನ ಮುಖಂಡರು , ಗ್ರಾಮಸ್ಥರು ಉಪಸ್ಥಿತರಿದ್ದರು…
ವರದಿ. ಅನಿಲ್ ಕುಮಾರ್, ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030